ಜೈ ಭಾರತ ಜನನಿಯೀಗ ಮಧುಮೇಹಿಗಳ ರಾಜಧಾನಿ.. !
ಕೊಚ್ಚಿ : ಮಧುಮೇಹಿಗಳ ರಾಜಧಾನಿ- ಇದು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ದೊರೆತಿರುವ ಹೊಸ ಬಿರುದು!
ಸೈಲೆಂಟ್ ಕಿಲ್ಲರ್ ಎಂದೇ ಹೆಸರಾದ ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಏರುಮುಖ ಎಚ್ಚರಿಕೆಯ ಕರೆಗಂಟೆಯಾಗಿದೆ ಎನ್ನುತ್ತಾರೆ ಅಮೆರಿಕಾದ ಮೇಯಾ ಕ್ಲಿನಿಕ್‌ನ ಡಾ। ಶ್ರೀಕುಮಾರನ್ ನಯ್ಯರ್. ಇತ್ತೀಚೆಗೆ ಮಧುಮೇಹದ ಬಗ್ಗೆ ನಡೆದ ಸಂಕಿರಣದಲ್ಲಿ ಮಾತನಾಡುತ್ತಿದ್ದ ಅವರು, ಫಾಸ್ಟ್‌ಪುಡ್ ಸಂಸ್ಕೃತಿ, ಬದಲಾಗುತ್ತಿರುವ ಜೀವನ ಶೈಲಿ ಹಾಗೂ ಅಗತ್ಯ ವ್ಯಾಯಾಮದ ಕೊರತೆ ಭಾರತದಲ್ಲಿ ಮಧುಮೇಹ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವುದಕ್ಕೆ ಕಾರಣ ಎಂದು ಅಭಿಪ್ರಾಯಪಟ್ಟರು.
ನಗರ ಹಾಗೂ ಗ್ರಾಮೀಣ ಪ್ರದೇಶದ ಪ್ರತಿಶತ 20 ಹದಿಹರೆಯದವರು ಮಧುಮೇಹ ಹೊಂದಿದ್ದಾರೆ. 2025 ರೊಳಗೆ ದೇಶದಲ್ಲಿ ಮಧುಮೇಹ ಪ್ರತಿಶತ 57 ರಷ್ಟು ಹೆಚ್ಚಾಗಲಿದೆ ಎಂದು ನಯ್ಯರ್ ಹೇಳಿದರು.
ಮಧುಮೇಹದಿಂದ ಮುಕ್ತರಾಗಲು ದೈಹಿಕ ದಂಡನೆ ಅತ್ಯಗತ್ಯ. ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ಗುರ್ತಿಸಿ ಮುನ್ನೆಚ್ಚರಿಕೆ ವಹಿಸುವುದರಿಂದ ಹಲವಾರು ಸಮಸ್ಯೆಗಳನ್ನು ತಡೆಗಟ್ಟಬಹುದಾಗಿದೆ ಎಂದು ಸಂಕಿರಣದಲ್ಲಿ ಭಾಗವಹಿಸಿದ್ದ ಮೇಯಾ ಕ್ಲಿನಿಕ್‌ನ ಅಧ್ಯಕ್ಷ ಡಾ। ರೊಬರ್ ರಿಜ್ಜಾ ಹೇಳಿದರು.
ಡಯಾಬಿಟಿಕ್ ಫೌಂಡೇಶನ್ ಹಾಗೂ ಮೇಯಾ ಕ್ಲಿನಿಕನ್ ವೈದ್ಯಕೀಯ ಶಿಕ್ಷಣ ವಿಭಾಗ ಮಧುಮೇಹ ಕುರಿತಾದ ಸಂಕಿರಣವನ್ನು ಜಂಟಿಯಾಗಿ ಏರ್ಪಡಿಸಿದ್ದವು. ಭಾರತ ಮಾತ್ರವಲ್ಲದೆ ವಿದೇಶಿ ಡಯಾಬಿಟಿಕ್ ತಜ್ಞರು ಸೇರಿದಂತೆ ಸುಮಾರು 350 ಅತಿಥಿಗಳು ್ಫಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
(ಪಿಟಿಐ)












Click it and Unblock the Notifications