ಆಗುಂಬೆಯಲ್ಲಿ ವೀಕ್ಷಣಾ ಗೋಪುರ, ಸೂರ್ಯಾಸ್ತ ಇನ್ನಷ್ಟು ಸುಂದರ
ಆಗುಂಬೆ: ಇಲ್ಲಿನ ಬೆಟ್ಟಗಳ ಮೇಲಿನಿಂದ ಸೂರ್ಯಾಸ್ತವನ್ನು ನೋಡಲು ಅನುಕೂಲವಾಗುವಂತೆ, ವೀಕ್ಷಣಾ ಗೋಪುರವನ್ನು (ವ್ಯೂಪಾಯಿಂಟ್)ಪ್ರವಾಸೋದ್ಯಮ ಇಲಾಖೆ ನಿರ್ಮಿಸಿದೆ.
ಡಿಸೆಂಬರ್ 5ರಂದು ಈ ಸೂರ್ಯಾಸ್ತ ವೀಕ್ಷಣಾ ಗೋಪುರ ಉದ್ಘಾಟನೆಯಾಗಲಿದೆ. ಆಗುಂಬೆ ಘಾಟಿಯ 14ನೇ ತಿರುವಿನಲ್ಲಿ 12 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಗೋಪುರಕ್ಕೆ ಭಾರೀ ಮಳೆಯಿಂದ ರಕ್ಷಿಸಿಕೊಳ್ಳುವ ಛಾವಣಿಗಳ ನಿರ್ಮಾಣ ಕಾರ್ಯ ಬಾಕಿಯಿದೆ.
ಏಕಕಾಲದಲ್ಲಿ ಈ ಗೋಪುರದಿಂದ 150ಕ್ಕೂ ಹೆಚ್ಚು ಮಂದಿ ಸೂರ್ಯಾಸ್ತವನ್ನು ವೀಕ್ಷಿಸಬಹುದು. ಸದ್ಯಕ್ಕೆ ಆಗುಂಬೆಯ 14ನೇ ತಿರುವಿನಲ್ಲಿನ ದೈತ್ಯ ಮರಗಳಿಂದಾಗಿ ಮಂಗಳೂರು ಹಾಗೂ ಉಡುಪಿ ಪ್ರದೇಶ ಮತ್ತು ಅರಬ್ಬೀ ಸಮುದ್ರದ ವೀಕ್ಷಣೆ ಸಾಧ್ಯವಿಲ್ಲ. ಆದರೆ ಸದ್ಯದಲ್ಲಿಯೇ ಈ ಮರಗಳನ್ನು ಕಡಿದು ವೀಕ್ಷಣಾಗೋಪುರದಿಂದ ಸಮುದ್ರವನ್ನೂ ನೋಡಲು ಅನುಕೂಲ ಕಲ್ಪಿಸಲಾಗುವುದು ಎಂದು ಶಿವಮೊಗ್ಗ ತೀರ್ಥಹಳ್ಳಿಯ ಪಿಡಬ್ಲ್ಯುಡಿಯಿಂದ ಗೋಪುರದ ಗುತ್ತಿಗೆ ವಹಿಸಿಕೊಂಡ ಇಂಜಿನಿಯರ್ ಬಸವರಾಜ್ ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications