ಮಾತು ತಪ್ಪಿದ ಮುಖ್ಯಮಂತ್ರಿ, ಇಚ್ಛಾಶಕ್ತಿಯಿಲ್ಲದ ರಾಜ್ಯ ಸರ್ಕಾರ
ಹುಬ್ಬಳ್ಳಿ : ರಾಜಕೀಯ ಇಚ್ಛಾಶಕ್ತಿಯಿಲ್ಲದ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಆರ್ಥಿಕ ದಿವಾಳಿಯತ್ತ ಒಯ್ಯುತ್ತಿದೆ ಎಂದು ಜಾತ್ಯತೀತ ಜನತಾದಳದ ಅಧ್ಯಕ್ಷ ಎಸ್.ಸಿದ್ಧರಾಮಯ್ಯ ಟೀಕಿಸಿದ್ದಾರೆ.
ರಾಜ್ಯದ ಆದಾಯ ದರ ಕುಸಿಯುತ್ತಿದೆ. ಕಳೆದ ವರ್ಷ 5800 ಕೋಟಿ ರುಪಾಯಿ ಆದಾಯ ದರವಿದ್ದು , ಈ ವರ್ಷ ಆಯವ್ಯಯದಲ್ಲಿ ಸೂಚಿಸಿದ್ದ 6000 ಕೋಟಿ ರುಪಾಯಿಗಳ ಗುರಿಯನ್ನು ಸಾಧಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶನಿವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸಿದ್ಧರಾಮಯ್ಯ ಹೇಳಿದರು.
ದಕ್ಷ , ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಆಶ್ವಾಸನೆ ನೀಡಿದ್ದರು. ಆದರೆ ತಮ್ಮ ಮಾತು ಉಳಿಸಿಕೊಳ್ಳಲು ಅವರು ವಿಫಲರಾಗಿದ್ದಾರೆ. ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವಲ್ಲಿಯೂ ಸೋತಿದ್ದಾರೆ ಎಂದು ಆಪಾದಿಸಿದ ಸಿದ್ಧರಾಮಯ್ಯ, ಸಂಪುಟದ ಸದಸ್ಯರೊಬ್ಬರು ಭಾಗಿಯಾಗಿದ್ದಾರೆ ಎನ್ನಲಾದ ಬಹುಕೋಟಿ ನಕಲಿ ಸ್ಟಾಂಪ್ ಪೇಪರ್ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications