ಚೆನ್ನೈನಲ್ಲಿ ಕರ್ನಾಟಕ ಪೊಲೀಸ್ ತಂಡ: ಗೋಪಾಲ್ ಬಂಧನ ಸನ್ನಿಹಿತ
ಚೆನ್ನೈ: ಡಾ. ರಾಜ್‌ಕುಮಾರ್ ಅಪಹರಣದ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್.ಆರ್. ಗೋಪಾಲ್‌ರನ್ನು ಬಂಧಿಸಲು ಕರ್ನಾಟಕ ಪೊಲೀಸ್ ತಂಡ ಚೆನ್ನೈಗೆ ಬಂದಿಳಿದಿದೆ. ಈ ಸುದ್ದಿಯನ್ನು ಸನ್‌ನ್ಯೂಸ್ ಬಿತ್ತರಿಸಿದೆ.
ಕರ್ನಾಟಕದ ವಿಶೇಷ ಪೊಲೀಸ್ ತಂಡ ಯಾವುದೇ ಕ್ಷಣದಲ್ಲಿ ಗೋಪಾಲ್‌ರನ್ನು ಬಂಧಿಸುವ ಸಾಧ್ಯತೆ ಇದೆ ಎಂದೂ ಅದು ತಿಳಿಸಿದೆ. ಗೋಪಾಲ್ ಬಂಧನಕ್ಕೆ ಕರ್ನಾಟಕ ಪೊಲೀಸರಿಗೆ ತಮಿಳುನಾಡು ಪೊಲೀಸರು ಅಗತ್ಯ ನೆರವು ನೀಡಲು ಒಪ್ಪಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರು ಗೋಪಾಲ್ ಬಂಧನಕ್ಕೆ ಜಂಟಿಯಾಗಿಯೇ ಕಾರ್ಯತಂತ್ರ ರೂಪಿಸಿದ್ದಾರೆ ಎಂದೂ ಚೆನ್ನೈನ ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಪ್ರಕಾರ ಗೋಪಾಲ್ ಈವರೆಗೆ ಯಾವುದೇ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ.
ಈ ಮಧ್ಯೆ ವೀರಪ್ಪನ್‌ಗೆ ಹಣ ಸರಬರಾಜು ಮಾಡಿದ ಹಾಗೂ ಉಗ್ರಗಾಮಿಗಳನ್ನು ವೀರಪ್ಪನ್‌ಗೆ ಪರಿಚಯಿಸಿದ ಮಿಗಿಲಾಗಿ ರಾಜ್‌ಕುಮಾರ್ ಅಪಹರಣ ಪ್ರಕರಣದ ಸಂಚುಗಾರ ಎನ್ನಲಾಗಿರುವ ಗೋಪಾಲ್‌ರನ್ನು ಬಂಧಿಸಿ ಕರ್ನಾಟಕಕ್ಕೆ ಕರೆತರಲು ರಾಜ್ಯ ಪೊಲೀಸರ ವಿಶೇಷ ತಂಡ ಸಜ್ಜಾಗಿದೆ.
ಮತ್ತೊಂದು ವಿಶ್ವಸನೀಯ ಮೂಲಗಳ ಪ್ರಕಾರ ನಕ್ಕೀರನ್ ಗೋಪಾಲ್ ಅವರನ್ನು ವಿವಾದಾತ್ಮಕ ಪೋಟೋ ಕಾಯಿದೆಯಡಿ ಬಂಧಿಸುವ ಸಾಧ್ಯತೆಗಳಿವೆ. ಇದು ನಿಜವಾದರೆ, ನಕ್ಕೀರನ್ ಗೋಪಾಲ್ ಪೋಟೋ ಕಾಯಿದೆಯಡಿ ಬಂಧಿತರಾದ ಪ್ರಥಮ ಪತ್ರಕರ್ತರಾಗುತ್ತಾರೆ.
ನಿರಾಕರಣೆ: ಕಾಡಿನಿಂದ ನಾಡಿಗೆ ಓಡಿಬಂದ ನಾಗಪ್ಪ ಮಾರಡಗಿ ತಮ್ಮ ವಿರುದ್ಧ ಮಾಡಿರುವ ಎಲ್ಲ ಆರೋಪಗಳೂ ಆಧಾರ ರಹಿತವಾದವು ಎಂದು ನಕ್ಕೀರನ್ ಗೋಪಾಲ್ ಹೇಳಿದ್ದಾರೆ. ರಾಜ್‌ಕುಮಾರ್‌ರನ್ನು ಬಂಧನದಿಂದ ಬಿಡಿಸಿದ ನನ್ನ ಸಾಹಸವನ್ನು ಕರ್ನಾಟಕ ಸರಕಾರ ಪ್ರಶಂಸಿಸಬೇಕು. ಬದಲಾಗಿ ಅದು ನನ್ನ ಬಂಧನಕ್ಕೆ ಮುಂದಾಗಿರುವುದು ಸರಿಯಲ್ಲ ಎಂದೂ ಗೋಪಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೋಪಾಲ್ ತಮ್ಮನ್ನು ಕೊಲ್ಲಲು ಸಂಚು ರೂಪಿಸಿದ್ದರು. ಪ್ರತಿಬಾರಿ ಸಂಧಾನಕ್ಕೆ ಬಂದಾಗಲೂ ಅವರು 500 ರುಪಾಯಿಗಳ ನೋಟಿನ ಕಂತೆಗಳನ್ನು ಮೂಟೆಯಲ್ಲಿ ಹೊತ್ತು ತರುತ್ತಿದ್ದರು. ರಾಜ್ ಅಪಹರಣದ ತಂತ್ರ ರೂಪಿಸಿದ್ದೇ ಈ ನಕ್ಕೀರನ್ ಗೋಪಾಲ್ ಎಂದು ನಾಗಪ್ಪ ಮಾರಡಗಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.
(ಇನ್‌ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications