ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕನ್ನರು ಹಿಡಿಯುವ ಮೊದಲು ನನ್ನನ್ನುಕೊಂದು ಬಿಡಿ: ಲಾಡೆನ್‌

By Staff
|
Google Oneindia Kannada News

ರಿಯಾದ್‌ : ‘ಅಮೆರಿಕನ್ನರು ಹಿಡಿಯುವ ಮೊದಲು ನೀವೇ ನನ್ನನ್ನು ಕೊಂದು ಬಿಡಿ’ ಎಂದು ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ ತನ್ನ ಅನುಚರರಿಗೆ ಸೂಚಿಸಿದ್ದಾನೆ ಎಂದು ‘ಅಲ್‌ ವತನ್‌’ ಪತ್ರಿಕೆ ಬುಧವಾರ ವರದಿ ಮಾಡಿದೆ. ಸೆಪ್ಟೆಂಬರ್‌ 11ರಂದು ಅಮೆರಿಕ ಮೇಲೆ ನಡೆದ ವಿಧ್ವಂಸಕ ಕೃತ್ಯಕ್ಕೆ ಕಾರಣ ಎನ್ನಲಾಗಿರುವ ಲಾಡೆನ್‌ನನ್ನು ಜೀವಂತ ಇಲ್ಲವೇ ಶವವಾಗಿ ಹಿಡಿಯಲು ಪಣತೊಟ್ಟಿರುವ ವಿಶೇಷ ಸೇನಾ ಪಡೆ ಮುನ್ನುಗ್ಗುತ್ತಿರುವ ಸಂದರ್ಭದಲ್ಲಿ ಲಾಡೆನ್‌ ನೀಡಿರುವನೆನ್ನಲಾದ ಈ ಹೇಳಿಕೆ ಸೋಜಿಗವನ್ನುಂಟು ಮಾಡಿದೆ.

ಬಿನ್‌ ಲಾಡೆನ್‌ ತನ್ನ ನಿಷ್ಠರಾದ ಹಲವರಿಗೆ ಈ ಸೂಚನೆ ನೀಡಿದ್ದಾನೆ. ತಾನು ತನ್ನ ಜೀವಿತದ ಕೊನೆಯ ವಾರಗಳು ಇಲ್ಲವೇ ದಿನಗಳನ್ನು ಎಣಿಸುತ್ತಿರುವುದಾಗಿಯೂ ಅವನು ಹೇಳಿಕೊಂಡಿದ್ದಾನೆ ಎಂದು ಪ್ಯಾರಿಸ್‌ನಲ್ಲಿರುವ ಅಮೆರಿಕ ಮತ್ತು ಯೂರೋಪ್‌ನ ರಾಜತಾಂತ್ರಿಕ ಉನ್ನತ ಮೂಲಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಅಮೆರಿಕನ್ನರು ಅಥವಾ ಉತ್ತರ ಮೈತ್ರಿಕೂಟದ ಸದಸ್ಯರು ತನ್ನತ್ತ ಬರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಿದ್ಧನಿಲ್ಲದ ಲಾಡೆನ್‌, ತಾನು ಅವರ ಬಂಧಿಯಾದರೆ, ಆದಕ್ಕಿಂತಲೂ ಘೋರ ಸೋಲು ಮತ್ತೊಂದಿಲ್ಲ. ಆದಕಾರಣ ನನ್ನನ್ನು ಕೊಂದು ಬಿಡಿ ಎಂದು ಅನುಚರರಿಗೆ ಹೇಳಿದ್ದಾನೆ ಎಂದು ವರದಿ ತಿಳಿಸಿದೆ.

ಅಮೆರಿಕ ಹಾಗೂ ಉತ್ತಮ ಮೈತ್ರಿಪಡೆ ಆಫ್ಘಾನಿಸ್ತಾನದ ಮೇಲೆ ನಡೆಸಿದ ಸತತ ವಾಯು ಭೂದಾಳಿಯ ಬಳಿಕವೂ ಇನ್ನೂ ತನ್ನನ್ನು ನಂಬಿ, ತನ್ನೊಟ್ಟಿಗಿರುವ ಚಾರರಿಗೆ ಕೃತಜ್ಞತೆ ಸಲ್ಲಿಸಿರುವ ಲಾಡೆನ್‌, ಇನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುದನ್ನು ಅರಿತಿದ್ದಾನೆ. ಈ ಹಿನ್ನೆಲೆಯಲ್ಲಿ ಅಮೆರಿಕನ್ನರು ತನ್ನನ್ನು ಬಂಧಿಸುವ ಸ್ಥಿತಿ ಒದಗಿದರೆ, ಹಿಂದೆ ಮುಂದೆ ನೋಡದೆ, ಕೊಂದು ಬಿಡಿ ಎಂದು ಅವನು ಸೂಚನೆ ನೀಡಿದ್ದಾನೆ ಎಂದು ಅರೆಬಿಕ್‌ ಡೈಲಿ ಸಹ ತಿಳಿಸಿದೆ.

ಲಾಡೆನ್‌ ಬಳಿ ಇರುವ ನಿಷ್ಠರು ಆತನ ಆದೇಶ ಪಾಲಿಸುವವರಾಗಿದ್ದು, ಅವರು ಹಾಗೆ ಮಾಡೇ ತೀರುತ್ತಾರೆ ಎಂದೂ ಪತ್ರಿಕೆ ಹೇಳಿದೆ. ಇದೇ ಮಾತನ್ನು ಲಾಡೆನ್‌ ತನ್ನ ಒಬ್ಬ ಪುತ್ರನಿಗೂ ತಿಳಿಸಿದ್ದು, ಅಮೆರಿಕನ್ನರಾಗಲೀ ಅಥವಾ ಆಪ್ಘನ್‌ ವಿರೋಧಿಗಳಾರೇ ಆದರೂ ತನ್ನನ್ನು ಬಂಧಿಸುವ ಸಂದರ್ಭದಲ್ಲಿ ಕೊಲ್ಲುವಂತೆ ಪ್ರಾರ್ಥಿಸಿಕೊಂಡಿದ್ದಾನೆ.

ಕೊನೆ ಸಂದೇಶ : ಅಲ್‌ ವತಾನ್‌ ಪತ್ರಿಕೆಯ ಪ್ರಕಾರ ಬಿನ್‌ ಲಾಡೆನ್‌ ಈಗಾಗಲೇ ವಿಡಿಯೋ ಟೇಪ್‌ನಲ್ಲಿ ತನ್ನ ರಾಜಕೀಯ ಇಚ್ಛಾಶಕ್ತಿ (ನಿಲುವು) ಅಥವಾ ಆತನ ಕೊನೆಯ ಸಂದೇಶವನ್ನು ರೆಕಾರ್ಡ್‌ ಮಾಡಿಟ್ಟಿದ್ದಾನೆ. ಈ ಟೇಪ್‌ ಅನ್ನು ತನ್ನ ಸಾವಿನ ನಂತರ ಪ್ರಸಾರ ಮಾಡುವಂತೆ ಸೂಚಿಸಿದ್ದಾನೆ. ಈ ಟೇಪ್‌ನಲ್ಲಿ ಅಮೆರಿಕದ ಮೇಲೆ ಮತ್ತಷ್ಟು ದಾಳಿ ನಡೆಸುವಂತೆ ಸಹ ಆತ ಒತ್ತಾಯಿಸಿದ್ದಾನೆ ಎನ್ನಲಾಗಿದೆ.

ಈ ಹೇಳಿಕೆ ಅಥವಾ ಮಾಹಿತಿಗೆ ವ್ಯಕ್ತಿಗತ ದೃಢೀಕರಣ ದೊರೆತಿಲ್ಲವಾದರೂ, ಇತ್ತೀಚಿನ ದಿನಗಳಲ್ಲಿ ಅಮೆರಿಕದ ಆಡಳಿತ - ತಾಲಿಬಾನ್‌ನಿಂದ ದೂರಸರಿದಿರುವ ಅಧಿಕಾರಿಗಳ ವಿಚಾರಣೆಯಿಂದ ಸಂಗ್ರಹಿಸಿರುವ ಅಂಶಗಳು ಈ ಮಾಹಿತಿಯನ್ನು ಪುಷ್ಟೀಕರಿಸುವಂತಿವೆ.

(ಎ.ಎಫ್‌.ಪಿ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X