ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಸಾಯನಿಕ/ಜೈವಿಕಾಸ್ತ್ರ ನೆಲೆಗಳ ಮೇಲೆ ಪ್ರಬಲ ಬಾಂಬ್‌ ದಾಳಿ

By Staff
|
Google Oneindia Kannada News

ವಾಷಿಂಗ್ಟನ್‌: ಅಣ್ವಸ್ತ್ರ ಹಾಗೂ ರಾಸಾಯನಿಕ ಅಸ್ತ್ರಗಳನ್ನು ಹೊಂದಿರುವುದಾಗಿ ಅಂತರರಾಷ್ಟ್ರೀಯ ಪಾತಕಿ ಒಸಾಮ ಬಿನ್‌ ಲ್ಯಾಡೆನ್‌ ಹೇಳಿಕೆ ಹೊರಬಿದ್ದ ಬೆನ್ನಲ್ಲೇ, ಆಪ್ಘಾನಿಸ್ತಾನದಲ್ಲಿನ ಸಂಭವನೀಯ ರಾಸಾಯನಿಕ -ಅ-ಥ-ವಾ ಜೈವಿಕ ಅಸ್ತ್ರಗಳ ತಯಾರಿಕಾ ನೆಲೆಗಳ ಮೇಲೆ ಅಮೆರಿಕ ಪ್ರಬಲ ಬಾಂಬ್‌ ದಾಳಿ ನಡೆಸುತ್ತಿದೆ.

ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಡೊನಾಲ್ಡ್‌ ರಮ್ಸ್‌ಫೆಲ್ಡ್‌ ಅವರು ಆಪ್ಘಾನಿಸ್ತಾನದಲ್ಲಿನ ಕೆಲವು ಸಂಭವನೀಯ ರಾಸಾಯನಿಕ / ಜೈವಿಕ ಅಸ್ತ್ರಗಳ ಮೇಲೆ ಬಾಂಬ್‌ ದಾಳಿ ನಡೆಸುತ್ತಿರುವುದಾಗಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ನಡುವೆ ಡೊನಾಲ್ಡ್‌ ರಮ್ಸ್‌ಫೆಲ್ಡ್‌ , ವಿದೇಶಾಂಗ ಕಾರ್ಯದರ್ಶಿ ಕಾಲಿನ್‌ ಪೊವೆಲ್‌ ಹಾಗೂ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್‌ ಮುಷರ್ರಫ್‌ ಅವರು- ಅಣ್ವಸ್ತ್ರ ಹೊಂದಿರುವುದಾಗಿ ತಿಳಿಸಿರುವ ಲ್ಯಾಡೆನ್‌ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಆದರೆ, ಲ್ಯಾಡೆನ್‌ ಅಣ್ವಸ್ತ್ರ ಹೊಂದಿರುವ ಕುರಿ-ತು ತಮ-ಗೆ ಸಂದೇ-ಹ ಇರು-ವು-ದಾ-ಗಿಯೂ ಈ ನಾಯ-ಕ-ರು ಹೇಳಿ-ದ್ದಾ-ರೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X