Get Updates
Get notified of breaking news, exclusive insights, and must-see stories!

ಐಟಿ ತಜ್ಞರ ಕನಸುಗಳು..

IT experts dreams might not be as you thinkಲಂಡನ್‌: ಎಂಬರ್‌ಕಡೆರೊ ಎನ್ನುವ ಲಂಡಲ್ಲಿನ ದತ್ತಾಂಶ ಕಂಪನಿ ನಡೆಸಿರುವ ಈ ಸಮೀಕ್ಷೆ, ಅದರ ವರದಿ ಕುತೂಹಲಕರವಾಗಿದೆ. ಕಂಪ್ಯೂಟರ್‌ ಪರದೆಯ ಮುಂದೆಯೇ ಹಗಲುಗಳನ್ನು ರಾತ್ರಿಗಳಾಗಿಸುವ, ರಾತ್ರಿಗಳನ್ನು ಹಗಲುಗಳಾಗಿಸುವ ಐಟಿ ತಜ್ಞರು, ಬಿಡುವು ದೊರೆತಾಗ ಏನು ಮಾಡುತ್ತಾರೆನ್ನುವುದು ಸಮೀಕ್ಷೆಯ ವಸ್ತು . ಅವರು ಏನೆಲ್ಲಾ ಮಾಡುತ್ತಾರೆ ಗೊತ್ತಾ..

ಅಂದಹಾಗೆ, ಕಂಪನಿ 5000 ಮಂದಿಯನ್ನು ಮಾತನಾಡಿಸಿದೆ, ಎಲ್ಲರೂ ಬ್ರಿಟನ್‌ನಲ್ಲಿ ತಳವೂರಿದವರೇ. ಊರು ಯಾವುದಾದರೇನು ಸ್ವಾಮಿ, ಮನುಷ್ಯ ಸ್ವಭಾವ ಒಂದೇ ತಾನೇ!? ಅದರಲ್ಲೂ , ಜಾಗತಿಕ ಹಳ್ಳಿ ಪರಿಕಲ್ಪನೆಯ ಇವತ್ತಿನ ದಿನಗಳಲ್ಲಿ ತವರ ಬೇರಿನ ಮಹತ್ವ ಅಷ್ಟೇನೂ ಇಲ್ಲ .

ಆಟ, ಊಟ ಮತ್ತು ನೋಟ

ಬಹುತೇಕ ಐಟಿ ಪರಿಣತರಿಗೆ ಬಿಡುವಿನ ಸಮಯದಲ್ಲಿ ಮನೆಯಲ್ಲಿ ಕೂರುವುದೆಂದರೆ ಸುತಾರಂ ಇಷ್ಟವಿಲ್ಲ . ವೀಕೆಂಡ್‌ ಬರುವುದನ್ನೆ ಕಾಯುತ್ತಾರೆ. ಐದು ದಿನ ಕೆಲಸ +ಎರಡು ದಿನ ಸುತ್ತಾಟ= ಒಂದು ವಾರ, ಎನ್ನುವುದು ಇವರ ಪಾಲಿಸಿ. ವಾರದ ಕೊನೆಯೆರಡು ದಿನಗಳಲ್ಲಿ ಸುತ್ತಾಟ, ನೋಟ ಹಾಗೂ ಗಮ್ಮತ್ತಿನ ಊಟ.

ಬರಿ ಊಟ, ನೋಟ ಇದ್ದರಾಯಿತಾ? ದಾಹ ತಣಿಸುವುದು ಬೇಡವಾ? ಅದಕ್ಕೆಂದೇ ಇವರಲ್ಲಿ ನೂರಕ್ಕೆ ಮುಕ್ಕಾಲು ಪಾಲು ಮಂದಿ ಬಿಯರ್‌ಗೆ ಜೈ ಅನ್ನುತ್ತಾರೆ. ಮನೆಯಲ್ಲಿದ್ದರೂ ಸರಿ, ಪ್ರಯಾಣದಲ್ಲಿದ್ದರೂ ಸೈ, ಬಿಯರ್‌ ಮಾತ್ರ ಜೊತೆಗಿರಲೇಬೇಕು.

ಎಂಬರ್‌ಕಡೆರೊಗೆ ಮಾತಿಗೆ ಸಿಕ್ಕವರಲ್ಲಿ ಪ್ರತಿಶತ 50 ಮಂದಿ ಮದುವೆಯಾಗಿದ್ದಾರೆ, ವೈವಾಹಿಕ ಜೀವನದ ಕಷ್ಟಸುಖಗಳನ್ನು ಅನುಭವಿಸಿದ್ದಾರೆ. ಈ ಮಾಹಿತಿ ತಂತ್ರಜ್ಞಾನ ಗಟ್ಟಿಗರು ಕೇವಲ ಬಕಾಸುರರಲ್ಲ, ಪಾಕಶಾಸ್ತ್ರದಲ್ಲೂ ವಿಶಾರದರು. ಅಡುಗೆಮನೆಗಿಳಿದರೆ ನಳನಿಗೇ ನೀರಿಳಿಸುವಷ್ಟು ಕುಶಾಗ್ರಕರರು. ಪಕ್ಕಾ ಲೆಕ್ಕ ಹಿಡಿದು ಹೇಳುವುದಾದರೆ ನೂರಕ್ಕೆ 53 ಮಂದಿ ರುಚಿಗಟ್ಟಾದ ಅಡುಗೆ ಮಾಡಬಲ್ಲರು. ಇವರಲ್ಲಿ ಶೇ.34 ಮಂದಿಗೆ ಇಟಾಲಿಯನ್‌ ಅಡುಗೆಯೆಂದರೆ ಜೊಲ್ಲುರಸ ಸ್ರಾವ ಹೆಚ್ಚಾಗುತ್ತದೆ.

ನೋಟ, ಊಟವಾಯಿತು. ಕುಡಿದದ್ದೂ ಆಯಿತು. ಅಡುಗೆ ಮನೆಯಲ್ಲಿ ಎಷ್ಟು ಕಾಲ ಇರುವುದು..ಇಳಿದ ಸಮಯವನ್ನೇನು ಮಾಡುವುದು. ಸಮಯದ ಲೆಕ್ಕಾಚಾರ ಹೇಳುವುದಾದರೆ- ಶೇ.33 ಮಂದಿ ಕ್ರಿಕೆಟ್ಟು, ಹಾಕಿ, ಚೆಸ್ಸು ಇತ್ಯಾದಿ ಆಟಗಳಲ್ಲಿ ಟೈಂಪಾಸ್‌ ಮಾಡಿದರೆ, ಶೇ.26 ಮಂದಿಗೆ ಸಂಗೀತವೇ ಕಸರತ್ತು . ಶೇ. 14 ಮಂದಿಗೆ ತೋಟಗಾರಿಕೆಯೆಂದರೆ ಇಷ್ಟ.

ಎಂಬರ್‌ಕಡೆರೊ ಪತ್ತೆ ಮಾಡಿರುವ ಮತ್ತೊಂದು ಸಂಗತಿಯೆಂದರೆ- ಈ ತಜ್ಞರಲ್ಲಿ ಬಹುಮಂದಿ ಉನ್ನತ ಶಿಕ್ಷಣ ಪಡೆದವರು. ಪ್ರತಿಶತ 52 ಮಂದಿ ವಿಶ್ವವಿದ್ಯಾಲಯದ ಪದವಿ ಹೊಂದಿದ್ದಾರೆ. ಸರಾಸರಿ 53,685 ಅಥವಾ ಅದಕ್ಕಿಂಥ ಹೆಚ್ಚು ಸಂಪಾದಿಸುವುದೆಂದರೆ ಅವರಿಗೆ ಖುಷಿ. ಬ್ರಿಟನ್‌ ಮಟ್ಟಿಗೆ ಹೇಳುವುದಾದರೆ, ಪ್ರಸ್ತುತ ಅಲ್ಲಿ ಸರಾಸರಿ 32, 210 ಯೂರೋ ಸಂಪಾದನೆ ಅಲ್ಲಿನ ಐಟಿ ತಜ್ಞರಿಗಿದೆ.

ಕನಸು ತುಂಬಾ ಝಣ ಝಣ ಕಾಸು

ಉತ್ತಮ ಸಂಬಳ, ಹುದ್ದೆ ಅರಸಿಕೊಂಡು ಕಂಪನಿಗಳಿಂದ ಕಂಪನಿಗಳಿಗೆ ಜಿಗಿಯುವುದರಲ್ಲೂ ಐಟಿ ಮಂದಿ ಹಿಂದೆ ಬಿದ್ದಿಲ್ಲ . ದೊಡ್ಡ ದೊಡ್ಡ ಸಾಫ್ಟ್‌ವೇರ್‌ ಕಂಪನಿಗಳಲ್ಲಿ ಸೇರುವುದು ಪ್ರತಿಶತ 356 ಮಂದಿಯ ಕನಸು. ಆದರೆ, ಮೈಕ್ರೋಸಾಫ್ಟ್‌ ಕನಸು ಕಾಣುತ್ತಿರುವವರ ಸಂಖ್ಯೆ ಶೇ. 14 ಮಾತ್ರ. ನೂರರಲ್ಲಿ 11 ಮಂದಿಗೆ ಒರ್ಯಾಕಲ್‌ನಲ್ಲಿ ಕೆಲಸ ಮಾಡುವ ಕನಸಿದೆ.

ಆಸೆ, ಕನಸುಗಳೇನೋ ಸರಿ. ಆದರೆ, ಈ ಸಮೀಕ್ಷೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಹಿನ್ನಡೆಯ ಬಗ್ಗೆ ಮಾತ್ರ ಚಕಾರವೆತ್ತಿಲ್ಲ . ಐಟಿ ಕ್ಷೇತ್ರದ ಸುಗ್ಗಿಯ ದಿನಗಳಲ್ಲಿ ಸಮೀಕ್ಷೆ ನಡೆಯಿತೇ ಅನ್ನುವುದೂ ತಿಳಿದುಬಂದಿಲ್ಲ .

(ಏಜೆನ್ಸೀಸ್‌)

Post our views

ಮುಖಪುಟ / ಲೋಕೋಭಿನ್ನರುಚಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+