ಕಳೆದ ವರ್ಷ ಕಾಡು, ಈ ವರ್ಷ ನಾಡು : ಡಾ. ರಾಜ್ ಹರ್ಷ

ನಗರದ ಕುಮಾರ ಕೃಪ ರಸ್ತೆಯ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಆವರಣದಲ್ಲಿ , ಗುರುವಾರ ಬೆಳಗ್ಗೆ ಜರುಗಿದ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿ ಮಾತನಾಡುತ್ತಿದ್ದ ವರನಟ ಡಾ। ರಾಜ್‌ಕುಮಾರ್ ಭಾವುಕರಾಗಿದ್ದರು. ಜೊತೆಯಲ್ಲಿ ಪಾರ್ವತಮ್ಮ ಅವರಿದ್ದರು.
ಕಾಡಿನಲ್ಲಿದ್ದಾಗಲೂ ನನಗೆ ರಾಜ್ಯೋತ್ಸವದ ನೆನಪುಗಳು ಕಾಡುತ್ತಿದ್ದವು. ರಾಜ್ಯೋತ್ಸವದ ಸಂಭ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದೆ ಹೋದದ್ದಕ್ಕೆ ಸಂಕಟವಾಗಿತ್ತು . ಈ ವರ್ಷ ನಿಮ್ಮ ನಡುವೆ ಇರುವುದಕ್ಕೆ ಸಂತೋಷವಾಗಿದೆ. ಈಗ ಸಿಹಿ ತಿನ್ನುವ ಯೋಗ ಬಂದಿದೆ. ತಾಯಿ ಭುವನೇಶ್ವರಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ರಾಜ್ ಹೇಳಿದರು.
ನಾಡಹಬ್ಬದ ಸಂಭ್ರಮದಲ್ಲಿ ರಾಜ್ ಅವರೊಂದಿಗೆ ಪುಟ್ಟದೊಂದು ಗುಂಪು ಚಲನಚಿತ್ರ ವಾಣಿಜ್ಯ ಮಂಡಳಿ ಆವರಣದಲ್ಲಿ ನೆರೆದಿತ್ತು . ಪಾರ್ವತಮ್ಮನವರಿಗೆ ಸಿಹಿ ತಿನ್ನಿಸುವ ಮೂಲಕ ರಾಜ್ ಸಂಭ್ರಮ ಹಂಚಿಕೊಂಡರು. ನೆರೆದವರಿಗೂ ಸಿಹಿ ವಿತರಿಸಲಾಯಿತು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್.ಚಂದ್ರಶೇಖರ್, ಅಖಿಲ ಕರ್ನಾಟಕ ಡಾ।ರಾಜ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಚಿತ್ರನಟ ಶಿವಕುಮಾರ್, ಅಪ್ಪು ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು.












Click it and Unblock the Notifications