ಅಸಂಖ್ಯ ಅಲ್-ಕ್ವೆ ೖದಾ ತರಪೇತಿ ಶಿಬಿರಗಳು ನುಚ್ಚುನೂರು-ಮೈಯರ್ಸ್
ವಾಷಿಂಗ್ಟನ್ : ಅಮೆರಿಕಾ ಪಡೆಗಳು ಬಾಂಬ್ ದಾಳಿ ಮೂಲಕ ಅಸಂಖ್ಯ ಅಲ್- ಕ್ವೆ ೖದಾ ತರಪೇತಿ ಶಿಬಿರಗಳನ್ನು ನುಚ್ಚುನೂರು ಮಾಡಿವೆ ಎಂದು ಪೆಂಟಗಾನ್‌ನ ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್ ಜನರಲ್ ರಿಚರ್ಡ್ ಮೈಯರ್ಸ್ ತಿಳಿಸಿದ್ದಾರೆ.
ಎಬಿಸಿ ಟೆಲಿವಿಷನ್‌ಗೆ ನೀಡಿದ ಸಂದರ್ಶನದಲ್ಲಿ ಮೈಯರ್ಸ್ ಈ ವಿಷಯ ಹೇಳಿದರು. ಎರಡು ವಾರಗಳ ಯುದ್ಧದಲ್ಲಿ ಅಮೆರಿಕಾ ಸಾಧಿಸಿದ್ದೇನು ಎಂಬ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು. ಒಸಾಮನ ಕೂಸು ಅಲ್- ಕ್ವೆ ೖದಾ ಸಂಘಟನೆಯ ಬೇರುಗಳನ್ನು ಕಿತ್ತೆಸೆಯುವುದು ಹಾಗೂ ತಾಲಿಬಾನಿಗಳ ಅಟ್ಟಹಾಸ ಮಟ್ಟ ಹಾಕುವುದು ತಮ್ಮ ಗುರಿ. ಈ ಹಾದಿಯಲ್ಲಿ ಸಾಕಷ್ಟು ಮುನ್ನಡೆದಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರರ ಹುಟ್ಟುಹಾಕುವ ತರಪೇತಿ ಕೇಂದ್ರಗಳೇ ಆಫ್ಘನ್ನಿನಲ್ಲಿ ಇರುವುದಿಲ್ಲ ಎಂದರು.
ಪಾತಕಿ ಒಸಾಮನನ್ನು ಕೊಂದು ಹಾಕಿ ಎಂದು ಕೇಂದ್ರ ಬೇಹುಗಾಕಾ ದಳ (ಸಿಐಎ) ಕ್ಕೆ ಅಮೆರಿಕಾ ಅಧ್ಯಕ್ಷ ಬುಷ್ ಹೇಳಿದ್ದರೂ ಕೂಡ ಅವನನ್ನು ಜೀವಂತ ಹಿಡಿಯಲು ಮೊದಲು ಪ್ರಯತ್ನಿಸುತ್ತೇವೆ. ತೀರಾ ಮೇಲೆರಗಿ ಬಂದರೆ ರಕ್ಷಣಾ ತಂತ್ರದ ಸಲುವಾಗಿ ಗುಂಡು ಹಾರಿಸಲೇಬೇಕು. ಒಸಾಮ ಜೀವಂತ ಸಿಗುತ್ತಾನೋ ಹೆಣವಾಗಿ ಸಿಗುತ್ತಾನೋ ಕಾಲವೇ ನಿರ್ಧರಿಸಲಿದೆ ಎಂದು ಮೈಯರ್ಸ್ ಹೇಳಿದರು.
(ಎಎಫ್‌ಪಿ)












Click it and Unblock the Notifications