ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್‌ನ ರೆಡ್‌ಕ್ರಾಸ್‌ ಸಂಗ್ರಹಣಾ ಮಳಿಗೆ ಮೇಲೆ ಬಾಂಬ್‌ದಾಳಿ

By Staff
|
Google Oneindia Kannada News

ಕಾಬೂಲ್‌ : ಅಮೆರಿಕನ್‌ ಯುದ್ಧ ವಿಮಾನಗಳು ರೆಡ್‌ ಕ್ರಾಸ್‌ ಅಂತರರಾಷ್ಟ್ರೀಯ ಸಮಿತಿಯ ಸಂಗ್ರಹಣಾ ಮಳಿಗೆಯ ಮೇಲೆ ಮಂಗಳವಾರ ರಾತ್ರಿ ಬಾಂಬ್‌ ದಾಳಿ ನಡೆಸಿರುವುದಾಗಿ ಸಿಎನ್‌ಎನ್‌ ವರದಿ ಮಾಡಿದೆ.

ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ನೌಕರನಿಗೆ ಗಾಯಗಳಾಗಿದ್ದು, ಉಳಿದಂತೆ ಮಳಿಗೆ ಎಂದಿನಂತೆಯೇ ಕೆಲಸ ನಿರ್ವಹಿಸುತ್ತಿದೆ ಎಂದು ವರದಿ ಹೇಳಿದೆ. ಸಂಗ್ರಹಣಾ ಮಳಿಗೆ ರೆಡ್‌ ಕ್ರಾಸ್‌ಗೆ ಸೇರಿದ್ದು, ಕಟ್ಟಡದ ಗೋಡೆಯ ಮೇಲೆ ಇದನ್ನು ನಿಚ್ಛಳವಾಗಿ ಸೂಚಿಸಿದ್ದರೂ ಅಮೆರಿಕದ ಯುದ್ಧ ವಿಮಾನಗಳು ಬಾಂಬ್‌ ದಾಳಿ ನಡೆಸಿರುವ ಬಗ್ಗೆ ರೆಡ್‌ಕ್ರಾಸ್‌ ಬಾತ್ಮೀದಾರ ತಮ್ಮ ಅಚ್ಚರಿ ವ್ಯಕ್ತಪಡಿಸಿದ್ದಾರೆ. 1986ರಿಂದ ರೆಡ್‌ ಕ್ರಾಸ್‌ ಅಫ್ಘಾನಿಸ್ತಾನದಲ್ಲಿ ಕೆಲಸ ನಿರ್ವಹಿಸುತ್ತಿದೆ.

ಪೆಂಟಗನ್‌ ಹೇಳಿಕೆ : ನೌಕಾ ಯೋಧರ ಕಣ್ತಪ್ಪಿನಿಂದಾಗಿ ರೆಡ್‌ಕ್ರಾಸ್‌ ಸಂಗ್ರಹಣಾ ಮಳಿಗೆಯ ಮೇಲೆ ಬಾಂಬ್‌ ದಾಳಿ ನಡೆಸಲಾಯಿತು. ಯಾಕೆಂದರೆ ಈ ಕಟ್ಟಡವನ್ನು ಯುದ್ಧ ಶಸ್ತ್ರಾಸ್ತ್ರ ಸಂಗ್ರಹಣಾ ಮಳಿಗೆ ಎಂದು ಭಾವಿಸಲಾಗಿತ್ತು ಎಂದು ಪೆಂಟಗನ್‌ ಹೇಳಿಕೆ ನೀಡಿದೆ.

ಆದರೂ ಈ ಬಗ್ಗೆ ಸ್ಪಷ್ಟ ವಿವರಗಳನ್ನು ತನಿಖೆ ನಡೆಸಿದ ನಂತರವಷ್ಟೇ ಹೇಳಬಹುದು. ಯಾಕೆಂದರೆ ಸಾಕಷ್ಟು ಸಂಗ್ರಹಣಾ ಮಳಿಗೆಗಳನ್ನು ತಾಲಿಬಾನ್‌ ಯುದ್ಧಶಸ್ತ್ರಾಸ್ತ್ರ ಸಂಗ್ರಹಣೆಗೆಂದು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈ ಪ್ರದೇಶದಲ್ಲಿ ಮಿಲಿಟರಿ ವಾಹನಗಳು ನಿಂತಿರುತ್ತವೆ. ಈ ಮಳಿಗೆಗಳ ನ್ನು ರೆಡ್‌ ಕ್ರಾಸ್‌ ಬಳಸಿಕೊಳ್ಳುತ್ತಿವುದು ಅಮೆರಿಕಾಕ್ಕೆ ತಿಳಿದಿರಲಿಲ್ಲ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

( ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X