ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಲ್ಲಿ ಅಮೆರಿಕಾ ವಿರೋಧಿಗಳ ಪ್ರತಿಭಟನೆ : ಹೊಟೇಲಿಗೆ ಬೆಂಕಿ

By Staff
|
Google Oneindia Kannada News

ಕರಾಚಿ : ಆಫ್ಘಾನಿಸ್ತಾನದ ಮೇಲೆ ಅಮೆರಿಕಾ ನಡೆಸುತ್ತಿರುವ ದಾಳಿ ವಿರೋಧಿಸಿ ಪಾಕಿಸ್ತಾನಿ ಇಸ್ಲಾಮಿಕ್‌ ಸಂಘಟನೆಯ ನೂರಾರು ಕಾರ್ಯಕರ್ತರು ಶುಕ್ರವಾರ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತು. ಪೊಲೀಸ್‌ ಹಾಗೂ ಪ್ರತಿಭಟನಾಕಾರರ ನಡುವೆ ತಿಕ್ಕಾಟ ನಡೆಯಿತು. ಕರಾಚಿಯಲ್ಲಿ ಹೊಟೇಲೊಂದಕ್ಕೆ ಬೆಂಕಿಯೂ ಬಿದ್ದಿತು.

ಕೆಂಟಕಿ ಫ್ರೆೃಡ್‌ ಚಿಕನ್‌ (ಕೆಎಫ್‌ಸಿ) ಗೆ ಸೇರಿದ್ದು ಎನ್ನಲಾಗಿರುವ ಹೊಟೇಲಿಗೆ ಇಸ್ಲಾಮಿಕ್‌ ಸಂಘಟನೆಯವರು ಬೆಂಕಿ ಇಟ್ಟರು. ಹೊಟೇಲು ಅಮೆರಿಕಾದ ಫಾಸ್ಟ್‌ ಫುಡ್‌ ಸೆಂಟರ್‌ಗೆ ಸೇರಿರುವುದರಿಂದ ಮತಾಂಧರು ಬೆಂಕಿ ಇಟ್ಟಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಲ್ಲಿ ಕಲ್ಲುತೂರಾಟ ಮೊದಲಾದ ವಿಧ್ವಂಸಕ ಕೃತ್ಯಗಳು ವರದಿಯಾಗಿದ್ದು, ರಸ್ತೆಯ ಕೆಲವೆಡೆ ಬೆಂಕಿ ಹಚ್ಚಲಾಗಿದೆ. ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಅನೇಕ ಮುಸ್ಲಿಂ ಕರಣಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಹಿಂಸಾಚಾರಗಳು ನಡೆದಿದ್ದರೂ, ಸಾವು ನೋವಿನ ಬಗ್ಗೆ ಖಚಿತ ಮಾಹಿತಿ ಇನ್ನೂ ದೊರೆತಿಲ್ಲ.

(ಏಜೆನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X