ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.13,14 ರಂದು ಪಂಡಿತ ಪಂಚಾಕ್ಷರಿಗವಾಯಿಗಳ 8ನೇ ಸಂಗೀತೋತ್ಸವ

By Staff
|
Google Oneindia Kannada News

ಬೆಂಗಳೂರು: ಅಕ್ಟೋಬರ್‌ 13 ರಿಂದ ಎರಡು ದಿನಗಳ ಕಾಲ ವಿಜಯನಗರ ಬಡಾವಣೆಯ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಂಗಣದಲ್ಲಿ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಎಂಟನೇ ಸಂಗೀತೋತ್ಸವ ನಡೆಯಲಿದೆ.

ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಆರಂಭವಾಗುವ ಸಮ್ಮೇಳವನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್‌ ಉದ್ಘಾಟಿಸುವರು. ಸಿದ್ಧಗಂಗಾ ಕ್ಷೇತ್ರದ ಸಿದ್ಧಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಕ್ಟೋಬರ್‌ 14 ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಎಂ.ಪಿ. ಪ್ರಕಾಶ್‌ ವಹಿಸುತ್ತಾರೆ ಎಂದು ಶಾಸಕ ವಿ.ಸೋಮಣ್ಣ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಉತ್ಸವದಲ್ಲಿ ಗದಗಿನ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರಾದ ಡಾ.ಪುಟ್ಟರಾಜ ಗವಾಯಿ ಅವರನ್ನು ಸನ್ಮಾನಿಸಲಾಗುತ್ತದೆ, ಪಂಚಾಕ್ಷರಿ ಗವಾಯಿ ಜಯಂತ್ಯುತ್ಸವ ಸಮಿತಿ ಹಮ್ಮಿಕೊಳ್ಳುತ್ತಿರುವ ಉತ್ಸವದ ಶಾಶ್ವತ ನಿಧಿಗೆ ಜನಸ್ಪಂದನ ಸಂಘಟನೆ 50 ಸಾವಿರ ರುಪಾಯಿ ನೀಡಲಿದೆ ಎಂದು ಸೋಮಣ್ಣ ಹೇಳಿದರು. ಶರಣ ಸಾಹಿತ್ಯ ಪರಿಷತ್ತಿನ ಗೊ.ರು.ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಸಮ್ಮೇಳನದಲ್ಲಿ ಸುಮಾರು 40 ಮಂದಿ ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ.
ಉತ್ಸವದಲ್ಲಿ ಭಾಗವಹಿಸುವ ಕೆಲವು ಪ್ರಮುಖ ಕಲಾವಿದರೆಂದರೆ-

ಮಹಾರಾಷ್ಟ್ರದ ಭಾರತಿ ವೈಶಂಪಾಯನ, ಆಂಧ್ರಪ್ರದೇಶದ ಮರಿಸ್ವಾಮಿ ಮದರಿ, ಕರ್ನಾಟಕದ ನರಸಿಂಹಲು ವಡಿವಾಟಿ, ಎಂ.ವೆಂಕಟೇಶ ಕುಮಾರ್‌, ಡಾ.ಹನುಮಣ್ಣ ನಾಯಕ ದೊರೆ, ಡಾ.ಎಚ್‌.ಎಸ್‌.ಅನಸೂಯ, ರೋಹಿಣಿ ಪದ್ಮನಾಭ ಜೋಕೆ, ಸೋಮನಾಥ ಮರಡೂರ್‌, ರವೀಂದ್ರನಾಥ ಹಂದಿಗನೂರ, ಡಾ.ಸರ್ವಮಂಗಳಾ ಶಂಕರ್‌, ಡಾ.ಕೆ.ಎಸ್‌. ವೈಶಾಲಿ, ಪ್ರೊ.ಬಿ.ಸೋಮಶೇಖರ್‌, ಸವಿತಾ ಅಮರೇಶ್‌, ತಮಿಳುನಾಡಿನ ವೀರೇಶ್ವರ ಮದರಿ, ವಿ.ಪಿ.ಪಟ್ನಾಯಕ್‌, ಈಶ್ವರ ಮೊರಗೇರಿ ಹಾಗೂ ಎಂ.ಆರ್‌.ರಾಜಶೇಖರ್‌.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X