ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಲಾಲಾಬಾದ್‌ನಲ್ಲಿ ಮಸೀದಿ ಧ್ವಂಸ, ಒಮರ್‌ ಸಂಬಂಧಿಗಳ ಸಾವು

By Staff
|
Google Oneindia Kannada News

ಕಾಬೂಲ್‌ : ಬುಧವಾರ ರಾತ್ರಿ ಅಮೆರಿಕಾ ನಡೆಸಿರುವ ಭಾರೀ ಬಾಂಬ್‌ ದಾಳಿಯಿಂದ ಜಲಾಲಾಬಾದ್‌ನ ಮಸೀದಿಯಾಂದು ಹಾಳಾಗಿದೆ ಎಂದು ತಾಲಿಬಾನ್‌ನ ಶಿಕ್ಷಣ ಸಚಿವ ಅಮೀರ್‌ ಖಾನ್‌ ಮುತಾಕ್ಕಿ ಗುರುವಾರ ತಿಳಿಸಿದ್ದಾರೆ.

ಕಾಬೂಲ್‌, ಕಾಂದಹಾರ್‌ ಮತ್ತು ಜಲಾಲಾಬಾದ್‌ ಮೇಲೆ ನಾಲ್ಕು ರಾತ್ರಿ ಅಮೆರಿಕಾ ಸುರಿಸಿರುವ ಬಾಂಬ್‌ಗಳು ಅಸಂಖ್ಯ ಜನರನ್ನು ಕೊಂದಿವೆ. ಮಸೀದಿಯ ಗೋಡೆಗಳು ಉರುಳಿ ಬಿದ್ದಿದ್ದು, ಅದರಲ್ಲಿ ಯಾರಾದರೂ ಮೃತಪಟ್ಟಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಕಾಂದಹಾರ್‌ನಲ್ಲಿ 28 ಹಾಗೂ ಕಾಬೂಲ್‌ನಲ್ಲಿ 25 ಮಂದಿ ಸತ್ತಿದ್ದಾರೆ. ಕರ್ಫ್ಯೂ ವಿಧಿಸಿರುವುದರಿಂದ ಇಂತಿಷ್ಟೇ ಜನ ಮೃತಪಟ್ಟಿದ್ದಾರೆ ಎಂಬ ನಿಖರ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂದು ಅಮೀರ್‌ ಖಾನ್‌ ಹೇಳಿದರು.

ಬುಧವಾರದ ಬೆಳಗಿನ ದಾಳಿಯಲ್ಲಿ ಸುರಕ್ಷಿತ ಸ್ಥಳಗಳನ್ನು ಕಾಪಾಡಬಲ್ಲ ಕೆಲವು ಮೇಲ್ಸೇತುವೆಗಳನ್ನು ಅಮೆರಿಕಾ ಬೃಹತ್‌ ಬಾಂಬ್‌ಗಳಿಂದ ಕೆಡವಿಹಾಕಿದೆ. ಸುಮಾರು 30 ಬೃಹತ್‌ ಬಾಂಬ್‌ಗಳ ದಾಳಿ ಈಗಾಗಲೇ ನಡೆದಿದ್ದು, ಇಲ್ಲಿನ ನಾಗರಿಕರು ತಲ್ಲಣಗೊಂಡಿದ್ದಾರೆ. ತಾಲಿಬಾನ್‌ ಮುಖಂಡ ಮುಲ್ಲಾ ಮೊಹಮ್ಮದ್‌ ಒಮರ್‌ನ ಸಂಬಂಧಿಗಳೂ ದಾಳಿಯಿಂದ ಹತರಾಗಿದ್ದಾರೆ. ಒಮರ್‌ ಹಾಗೂ ಒಸಾಮ ಸುರಕ್ಷಿತವಾಗಿದ್ದಾರೆ ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X