Get Updates
Get notified of breaking news, exclusive insights, and must-see stories!

ಇದು ಅಮೆರಿಕಾದ ಆತ್ಮಹತ್ಯೆ

Imran Khanಇಸ್ಲಾಮಾಬಾದ್‌ : ತಮ್ಮ ಎರಡಂತಸ್ತಿನ ಚಿನ್ನದಂಥಾ ಮನೆಯ ದಿವಿನಾದ ಸೋಫಾ ಮೇಲೆ ಪಾಕಿಸ್ತಾನದ ಮಾಜಿ ಕ್ರಿಕೆಟ್‌ ತಾರೆ ಇಮ್ರಾನ್‌ ಕುಂತಿದ್ದಾರೆ. ಟಿವಿಯಲ್ಲಿ ಸಿಎನ್‌ಎನ್‌ ಚಾನೆಲ್‌ನ ಸುದ್ದಿಗಳು. ಕೈಯಲ್ಲಿ ‘ಡಸ್‌ ಅಮೆರಿಕ ನೀಡ್‌ ಎ ಫಾರಿನ್‌ ಪಾಲಿಸಿ’ ಎಂಬ ಹೆನ್ರಿ ಕಿಸ್ಸಿಂಗರ್‌ ಬರೆದಿರುವ ಹೊಸ ಪುಸ್ತಕ. ಎಲ್ಲಕ್ಕೂ ಮಿಗಿಲಾಗಿ ಮುಖದಲ್ಲಿ ಭಾರೀ ಕೋಪ; ಆಫ್ಘನ್ನರ ಮೇಲೆ ಅಮೆರಿಕಾ ಬಾಂಬ್‌ ಸುರಿಸುತ್ತಿರುವುದಕ್ಕೆ.

ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ, ತತ್ವಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳನ್ನು ಓದಿ ಪದವಿ ಪಡೆದಿರುವ ಪಶ್ತುನ್‌ ವಂಶಸ್ಥ ಇಮ್ರಾನ್‌ ಖಾನ್‌ ಮದುವೆಯಾಗಿರುವುದು ಬ್ರಿಟಿಷ್‌ನ ಜುವೂ ಧರ್ಮದ ಜೆಮಿನಾ ಎಂಬಾಕೆಯನ್ನು. ತನ್ನ ಮದುವೆ ವಿಚಾರವನ್ನು ಇಮ್ರಾನ್‌ ಘೋಷಿಸಿದಾಗ, ಆತ ಬ್ರಿಟನ್ನಿನಲ್ಲೇ ಬೇರೂರಲಿದ್ದಾನೆ ಎಂಬ ಗುಲ್ಲೆದ್ದಿತ್ತು. ಆದರೆ ಅದನ್ನು ಹುಸಿಯಾಗಿಸಿದ ಇಮ್ರಾನ್‌ ಪಾಕ್‌ನ ಸಾಂಸ್ಕೃತಿಕ ನಗರಿ ಲಾಹೋರಿನಲ್ಲೇ ನೆಲೆಯೂರಿದ್ದಾರೆ.

ಹುಟ್ಟು ಮುಸಲ್ಮಾನರಾದರೂ ಪಶ್ಚಿಮದ ಗಂಧವನ್ನೂ ಅನುಭವಿಸಿರುವ ಖಾನ್‌ ಅಮೆರಿಕಾ ದಾಳಿ ಬಗ್ಗೆ ಮನಬಿಚ್ಚಿ ಮಾತಾಡಿರುವುದು ಹೀಗೆ...

  • ಆಫ್ಘಾನಿಸ್ತಾನದ ಮೇಲೆ ಒಂದೊಂದು ಬಾಂಬ್‌ ಬಿದ್ದಾಗಲೂ ಅಮೆರಿಕಾ ವಿರೋಧಿಗಳ ಸಂಖ್ಯೆ ಏರುತ್ತಾ ಹೋಗುತ್ತದೆ.
  • ಒಸಾಮ ಒಬ್ಬ ಆರೋಪಿ. ಆತನ ಬಗ್ಗೆ ನಾನು ಏನೂ ಹೇಳಬಯಸುವುದಿಲ್ಲ. ತನ್ನ ದೇಶದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡ ಹಾಗೂ ಪೆಂಟಗಾನ್‌ ಸೇನಾ ಸಮುಚ್ಚಯ ಕೆಡವಿದ್ದು ಯಾಕೆ ಎಂಬುದರ ಆಳಕ್ಕೆ ಹೋಗದೆ, ಹೀಗೆ ಅಮೆರಿಕಾ ದಾಳಿ ನಡೆಸಿರುವುದು ತರವಲ್ಲ.
  • ‘ಒಸಾಮ ಜೀವಂತ ಸಿಗಲಿ, ಇಲ್ಲವೇ ಹೆಣವಾಗಿಯಾದರೂ’. ಅಮೆರಿಕಾ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ರ ಈ ಘೋಷಣೆ ಅಸಂಖ್ಯ ಆಫ್ಘನ್‌ ಅಮಾಯಕರನ್ನು ಬಲಿತೆಗೆದುಕೊಳ್ಳುತ್ತಿದೆ.
  • ಬಿನ್‌ ಲ್ಯಾಡೆನ್‌ಗೆ ಬೇಕಿರುವುದೂ ಇದೇ. ಜಗತ್ತಿನ ಎಲ್ಲಾ ಮುಸ್ಲಿಂ ಸಮುದಾಯ ಅಮೇರಿಕಾ ವಿರೋಧಿ ಭಾವನೆ ತಳೆಯಲಿ ಎಂಬುದೇ ಆತನ ಉದ್ದಿಶ್ಯ. ಅಮೆರಿಕಾ ಅದನ್ನು ದಿಟವಾಗಿಸುತ್ತಿದೆ.
  • ಅಮೆರಿಕಾ ವಿರೋಧಿ ಮುಸ್ಲಿಂ ದಂಡನ್ನು ಒಗ್ಗೂಡಿಸಿ ಲ್ಯಾಡೆನ್‌ ಅಮೆರಿಕಾಕ್ಕೆ ಸಿಕ್ಸರ್‌ ಹೊಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.
  • ದಾಳಿಗೆ ಕಾರಣಗಳೇನು ಎಂಬುದನ್ನು ತಾನೇ ಪತ್ತೆ ಮಾಡಲಾರದೆ ಜನರನ್ನು ಕತ್ತಲೆಯಲ್ಲಿಡುತ್ತಿದ್ದೀರಿ ಎಂದು ಮಾಧ್ಯಮಗಳನ್ನು ದೂಷಿಸುತ್ತಿದೆ ಅಮೆರಿಕಾ.
  • ಅಮೆರಿಕಾ ಮಾಧ್ಯಮಗಳಲ್ಲಾಗಲೀ ಕಾಂಗ್ರೆಸ್‌ನಲ್ಲಾಗಲೀ ಇಸ್ರೇಲಿ ಲಾಬಿ ಎಷ್ಟಿದೆಯೆಂದರೆ, ಯಾವುದೇ ವಿಷಯ ಬಗ್ಗೆ ಅಲ್ಲಿ ಚರ್ಚೆಯಾಗುವುದೇ ಇಲ್ಲ.
  • ವಾಷಿಂಗ್ಟನ್‌ ಇಸ್ರೇಲನ್ನು ಬೆಂಬಲಿಸುತ್ತದೆ. ಪ್ಯಾಲಸ್ಟೀನಿಯನ್ನರ ಹಕ್ಕುಗಳನ್ನು ನಿರ್ಲಕ್ಷಿಸುತ್ತದೆ. ಆದರೆ ಅಮೆರಿಕಾ ಇವುಗಳ ಬಗ್ಗೆ ಮುಗುಮ್ಮಾಗೇ ಇರುತ್ತದೆ.
  • ಬಾಂಬ್‌ ಬಿಸುಡುವುದರಿಂದ ಅಪಾಯವನ್ನು ತನ್ನ ಮೈಮಲೆ ಎಳೆದುಕೊಳ್ಳುತ್ತಿರುವುದಲ್ಲದೆ ಜಗತ್ತನ್ನೂ ಸಂಕಟದ ಮಡುವಿಗೆ ತಳ್ಳುತ್ತಿದೆ ಅಮೆರಿಕಾ.
  • 1979 ಹಾಗೂ 89ರ ಅವಧಿಯಲ್ಲಿ ರಷ್ಯಾ ವಿರುದ್ಧ ಆಫ್ಘಾನಿಸ್ತಾನ ಯುದ್ಧ ಮಾಡಿದಾಗ ತನ್ನ ಉಪಗ್ರಹ ಬೇಹುಗಾರಿಕಾ ದಳದ ಮೂಲಕ ಬಿನ್‌ ಲ್ಯಾಡೆನ್‌ನನ್ನು ಬಲಾಢ್ಯನನ್ನಾಗಿಸಿದ್ದು ಇದೇ ಅಮೆರಿಕಾ. ಆತನನ್ನು ಈ ಮಟ್ಟಕ್ಕೆ ಬೆಳೆಸಿರುವುದು ಸಿಐಎ. ಈಗ ಅಮೆರಿಕಾ ನೆಟ್ಟ ಮುಳ್ಳಿನ ಗಿಡ ಅವರಿಗೇ ಮುಳುವಾಗುತ್ತಿದೆ.
  • ಒಸಾಮ ಸಾಯಬಹುದು. ಆದರೆ ಅಷ್ಟು ಹೊತ್ತಿಗೆ ಅದಿನ್ನೆಷ್ಟು ಒಸಾಮಗಳು ಹುಟ್ಟಿರುತ್ತಾರೋ?
  • ನನ್ನ ಪ್ರಕಾರ ಬೇಲಿ ಮೇಲಿರುವ ಬಟ್ಟೆಯನ್ನು ಮೆಲ್ಲನೆ ಬಿಡಿಸಿಕೊಳ್ಳಬೇಕು. ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಸೂಕ್ತ ಪುರಾವೆಗಳನ್ನು ಒದಗಿಸಿ, ಲ್ಯಾಡೆನ್‌ನನ್ನು ನ್ಯಾಯೋಚಿತವಾಗಿ ಸದೆಬಡಿಯಬೇಕು. ಅದು ಬಿಟ್ಟು ಆಫ್ಘಾನಿಸ್ತಾನದ ಮೇಲೆ ಬಾಂಬ್‌ ಸುರಿಸುತ್ತಿರುವುದು ತರವಲ್ಲ.
  • ಪಾಕಿಸ್ತಾನ ಅಮೆರಿಕಾವನ್ನು ಬೆಂಬಲಿಸಿರುವುದು ಸುತಾರಾಂ ಸರಿಯಲ್ಲ. ಇದರಿಂದ ಪಾಕಿಸ್ತಾನದಲ್ಲಿ ಮೂಲಭೂತವಾದಿಗಳು ರಕ್ತಬೀಜಾಸುರರಾಗುತ್ತಾರೆ. ಸರ್ಕಾರದ ಬುಡ ಅಲ್ಲಾಡುತ್ತದೆ. ಆಗ ಅಮೆರಿಕಾ ಹೇರುವ ಸರ್ಕಾರ ಭಯೋತ್ಪಾದಕರನ್ನು ಹುಟ್ಟಿಹಾಕಿದಿರಿ ಎಂದು ನಮ್ಮ ಮೇಲೇ ಬಾಂಬ್‌ ಎಸೆಯುತ್ತದೆ.
(ಎಎಫ್‌ಪಿ)
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+