ಆಫ್ಘನ್ನರಿಂದ ಕಾಬೂಲ್‌ನ ಅಮೆರಿಕ ರಾಯಭಾರ ಕಚೇರಿಗೆ ಬೆಂಕಿ
ದೋಹ : ಆಫ್ಘಾನಿಸ್ತಾನದ ಮೇಲೆ ಅಮೆರಿಕದ ಉದ್ದೇಶಿತ ದಾಳಿಯ ವಿರುದ್ಧ ಸಿಡಿದೆದ್ದಿರುವ ಸಹಸ್ರಾರು ಆಫ್ಘನ್ನರು ಬುಧವಾರ ಕಾಬೂಲ್‌ನಲ್ಲಿರುವ ಅತ್ಯಂತ ಹಳೆಯ ಅಮೆರಿಕ ರಾಯಭಾರ ಕಚೇರಿಯ ಆವರಣ ಗೋಡೆ ಒಡೆದು, ಕಚೇರಿಗೆ ಬೆಂಕಿ ಹಚ್ಚಿದ್ದಾರೆ.
ಆಫ್ಘನ್ನರ ಆಕ್ರೋಶಕ್ಕೆ ಕಟ್ಟಡದ ಒಳಗೆ ನಿಂತಿದ್ದ ಐಷಾರಾಮಿ ಕಾರುಗಳು ಸುಟ್ಟು ಭಸ್ಮವಾಗಿವೆ. ನಿರ್ಜನ ಕಟ್ಟಡದ ಮೇಲೆ ಪ್ರತಿಭಟನಕಾರರು ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿದರು. ಈ ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ತಾಲಿಬಾನ್ ಸರಕಾರ ಮಾಡಿರುವ ಪ್ರಯತ್ನ ವಿಫಲವಾಗಿದೆ.
ಅಮೆರಿಕ ರಾಯಭಾರ ಕಚೇರಿಯ ಪ್ರಧಾನ ಕಚೇರಿಗೆ ಯಾವುದೇ ಹಾನಿ ಆಗಿಲ್ಲ. ತಾಲಿಬಾನ್ ಮಿಲಿಟರಿ ಆಡಳಿತ ಬಂದಂದಿನಿಂದಲೇ ಅಮೆರಿಕ ಆ ದೇಶದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿತ್ತು . ದಾಳಿ ನಡೆದ ಸಮಯದಲ್ಲಿ ಕಚೇರಿಯಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರಲಿಲ್ಲ.
ಪ್ರತಿಭಟನಕಾರರು ಬುಷ್ ಸಾಯಲಿ, ಇಸ್ಲಾಮ್ ಬಹುಕಾಲ ಉಳಿಯಲಿ ಎಂದು ಘೋಷಣೆ ಕೂಗುತ್ತಿದ್ದರು. ಕಾಬೂಲ್‌ನಲ್ಲಿ ಈ ಹೊತ್ತು ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ ಜಜೀರಾ ಸೆಟಲೈಟ್ ಟಿ.ವಿ. ಚಾನಲ್ ವರದಿ ಮಾಡಿದೆ.
ದಾಳಿ : ಆಪ್ಘನ್‌ನ ಉತ್ತರ ಪ್ರಾಂತ್ಯದ ಮೂಲಕ ಅಮೆರಿಕ ದಾಳಿ ಆರಂಭಿಸಲು ಸಜ್ಜಾಗಿದೆ. ಅಮೆರಿಕದ ಸೇನಾಪಡೆ ಹಾಗೂ ಬ್ರಿಟಿಷ್ ಎಸ್‌ಎಎಸ್ ಕಮಾಂಡೋಗಳು ಉಜ್ಬೇಕಿಸ್ತಾನದಲ್ಲಿ ಬಂದಿಳಿದಿದ್ದು, ಈ ಪ್ರದೇಶದಲ್ಲಿ ಗುಂಡಿನ ಶಬ್ದವೂ ಕೇಳಿಬರುತ್ತಿದೆ.
ಕಾಶ್ಮೀರ ಸೇರಿದಂತೆ ಜಗತ್ತಿನಾದ್ಯಂತ ಭಯೋತ್ಪಾದನೆ ಅಳಿಸಿಹಾಕುವವರೆಗೆ ಹೋರಾಟ ನಿಲ್ಲದು ಎಂದು ಅಮೆರಿಕಾ ಘೋಷಿಸಿದೆ.
ಆಫ್ಘನ್ ವಿರುದ್ಧದ ಅಮೆರಿಕದ ದಾಳಿಗೆ ಯಾವುದೇ ನೆರವು ನೀಡುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ.
ಭಯೋತ್ಪಾದಕ ಬಿನ್ ಲಾಡೆನ್‌ನನ್ನು ಒಪ್ಪಿಸಿ ಇಲ್ಲವೇ, ಯುದ್ಧ ಎದುರಿಸಿ ಎಂದು ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನೆ ವಿರುದ್ಧ ಅಮೆರಿಕ ಸಾರಿರುವ ಯುದ್ಧಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಉತ್ತರ ಮೈತ್ರಿಕೂಟ ಹೇಳಿದೆ.
ಆಫ್ಘನ್ ನಿರಾಶ್ರಿತರಿಗೆ ಆಹಾರ ಒದಗಿಸಲು ಅಡ್ಡಿಯುಂಟು ಮಾಡುವವರಿಗೆ ವಿಶ್ವಸಂಸ್ಥೆ ಕಾರ್ಯದರ್ಶಿ ಕೋಫಿ ಅನ್ನಾನ್ ಎಚ್ಚರಿಕೆ ನೀಡಿದ್ದಾರೆ.
ಹಸಿವಿನಿಂದ ನರಳುತ್ತಿರುವ ಆಫ್ಘನ್ ನಿರಾಶ್ರಿತರಿಗಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಸರಬರಾಜು ಮಾಡುವ ಆಹಾರ ಸಾಮಗ್ರಿ ತಡೆಯದಂತೆ ತಾಲಿಬಾನ್ ಮಿಲಿಟರಿ ಆಡಳಿತಕ್ಕೆ ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.
ಸರಕಾರ ಮಾಡಿದ ತಪ್ಪಿಗೆ ಮುಗ್ಧ ಜನರನ್ನು ಶಿಕ್ಷಿಸುವುದು ತರವಲ್ಲ ಎಂದಿರುವ ಅನ್ನಾನ್, ನಿರಾಶ್ರಿತರಿಗೆ ಗಡಿ ತೆರೆಯುವಂತೆ ಸಲಹೆ ಮಾಡಿದ್ದಾರೆ.
ಭಯೋತ್ಪಾದನೆ ವಿರುದ್ಧದ ಪ್ರತಿಭಟನೆಯನ್ನು ಕರಾಚಿಯ ಆಡಳಿತ ನಿಷೇಧಿಸಿದೆ. ಪಾಕ್ ಅಮೆರಿಕಕ್ಕೆ ನೆರವು ನೀಡುತ್ತಿರುವುದನ್ನು ಪ್ರತಿಭಟಿಸುತ್ತಿರುವವರಿಂದ ಈ ಪ್ರದರ್ಶನ ವೇಳೆ ಗುಂಪು ಘರ್ಷಣೆ ನಡೆಯಬಹುದೆಂಬ ಕಾರಣದಿಂದ ಅದು ಈ ನಿಷೇಧ ವಿಧಿಸಿದೆ.
ಅಮೆರಿಕವು ಜಾಗತಿಕ ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟಕ್ಕೆ 'ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ' ಎಂಬ ಹೊಸ ಹೆಸರು ನೀಡಿದೆ.(ಪಿ.ಟಿ.ಐ/ಇನ್‌ಫೋ ವಾರ್ತೆ)
-
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ












Click it and Unblock the Notifications