• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದು ವಿಶ್ವ ಯುದ್ಧ- 3?

By Staff
|

Twin Buildings of World RTade Centre after 2 aircraks crashನ್ಯೂಯಾರ್ಕ್‌ : ವೈಟ್‌ ಹೌಸ್‌, ರಾಜ್ಯ ಇಲಾಖಾ ಕಚೇರಿಗಳು, ಕಾಂಗ್ರೆಸ್‌ ಹಾಗೂ ಅಮೆರಿಕಾ ರಾಷ್ಟ್ರೀಯ ಪ್ರಧಾನ ಕಚೇರಿಗಳು ತೆರವಾಗಿವೆ. ಅಮೆರಿಕಾ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಹಾಗೂ ಕುಟುಂಬವನ್ನು ರಹಸ್ಯ ಸುರಕ್ಷತಾ ಸ್ಥಳಕ್ಕೆ ವರ್ಗಾಯಿಸಲಾಗಿದೆ. ಅಮೆರಿಕಾ ಈ ಹೊತ್ತು ಅಕ್ಷರಶಃ ಸ್ತಂಭೀಭೂತವಾಗಿದೆ.


ಮಂಗಳವಾರ ಮುಂಜಾನೆ ವಿಶ್ವ ವ್ಯಾಪಾರಿ ಕೇಂದ್ರದ ಅವಳಿ ಕಟ್ಟಡಗಳಿಗೆ ಎರಡು ವಿವಿಧ ಅಪಹೃತ ವಿಮಾನಗಳು ಅಪ್ಪಳಿಸಿದ ಪರಿಣಾಮ ಕಟ್ಟಡಗಳ ಕುಸಿತ ಇನ್ನೂ ನಿಂತಿಲ್ಲ. ಜೊತೆಗೆ ಪೆಂಟಗಾನ್‌ನಲ್ಲಿರುವ ಅಮೆರಿಕಾ ಸೇನಾ ಸಮುಚ್ಚಯಕ್ಕೂ ಮತ್ತೊಂದು ವಿಮಾನ ಅಪ್ಪಳಿಸಿದೆ. ಪೆನ್ಸಿವೇನಿಯಾದಲ್ಲೂ ನೆಲಕ್ಕೆ ವಿಮಾನ ಅಪ್ಪಳಿಸಿದ ವರದಿಗಳಿವೆ. ಈ ಭಯೋತ್ಪಾದನಾ ಧಾಳಿಯನ್ನು ಕೆಲವು ಅಧಿಕಾರಿಗಳು ಹಾಗೂ ಪತ್ರಕರ್ತರು ಯುದ್ಧ ಎಂದೇ ಬಣ್ಣಿಸುತ್ತಿದ್ದಾರೆ.

ಈ ನಾಲ್ಕೂ ವಿಮಾನಗಳನ್ನು ಭಯೋತ್ಪಾದಕರು ಅಪಹರಿಸಿದ್ದು, ಈ ಪೈಕಿ 2 ಅಮೆರಿಕಾ ಏರ್‌ಲೈನ್ಸ್‌ಗೆ ಸೇರಿದವು. ಈ ದುರಂತದಿಂದ ಸತ್ತವರ ಸಂಖ್ಯೆ ಎಷ್ಟೆಂಬುದು ಇದುವರೆಗೆ ತಿಳಿದು ಬಂದಿಲ್ಲ. ಅಧಿಕಾರಿಗಳ ಅಂದಾಜಿನ ಪ್ರಕಾರ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ. ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಲ್ಲಿ 40 ಸಾವಿರ ನೌಕರರು ಕೆಲಸ ಮಾಡುತ್ತಾರೆ. ಆದರೆ ದಿರಂತ ಸಂಭವಿಸಿದ ವೇಳೆ ಎಷ್ಟು ನೌಕರರು ಕಚೇರಿ ತಲುಪಿದ್ದರೆಂಬುದು ಅವರವರ ಕುಟುಂಬದ ಸದಸ್ಯರಿಗೇ ಇನ್ನೂ ಗೊತ್ತಾಗಿಲ್ಲ.

Fire to the sky, WTC tower burning after the crash110 ಅಂತಸ್ತಿನ ಅವಳಿ ಕಟ್ಟಡ. ಇದರಲ್ಲಿ 25 ದೇಶಗಳ 400ಕ್ಕೂ ಹೆಚ್ಚು ಕಚೇರಿಗಳು. ಅಲ್ಲಿಗೆ ಕೆಲಸಕ್ಕೆಂದು ಹೋದವರೆಷ್ಟು? ಅವರು ದುರಂತ ಸಂಭವಿಸುವ ಹೊತ್ತಿಗೆ ಕಚೇರಿ ತಲುಪಿದ್ದರಾ? ಹೀಗೆ ಅನುಮಾನ, ಗೊಂದಲ, ಆತಂಕಗಳಲ್ಲಿ ಮುಳುಗಿರುವ ಜನ ತಮ್ಮವರ ಹುಡುಕಾಟದಲ್ಲಿ ಇಳಿ ಹೊತ್ತಲ್ಲೂ ಕಳೆದು ಹೋಗಿದ್ದಾರೆ.

ಕಳೆದ ಒಂದು ದಶಕದಲ್ಲಿ ಅಮೆರಿಕಾ ಮೇಲೆ ಮೂರು ಬಾರಿ ಭಯೋತ್ಪಾದಕರು ಧಾಳಿ ಮಾಡಿದ್ದರೂ, ಈ ಪರಿಯ ಧಾಳಿ ಅವಾಗಿರಲಿಲ್ಲ. ನಾಲ್ಕು ವಿಮಾನಗಳನ್ನು ಏಕಕಾಲದಲ್ಲಿ ಅಪಹರಿಸಿ, ಅಮೆರಿಕಾದಂಥ ಬಲಾಢ್ಯ ರಾಷ್ಟ್ರದ ಬೇಹುಗಾರಿಕಾ ದಳಗಳಿಗೇ ಚಳ್ಳೆಹಣ್ಣು ತಿನ್ನಿಸಿರುವ ಭಯೋತ್ಪಾದಕರ ಈ ಕೃತ್ಯ ಒಂದು ವ್ಯವಸ್ಥಿತ ಸಂಚು.

ಬಿನ್‌ ಲ್ಯಾಡನ್‌ ಕೈವಾಡ ? : ಈ ಕೃತ್ಯದ ಹಿಂದೆ ಸೌದಿಯ ಭಯೋತ್ಪಾದಕ ಒಸಮಾ ಬಿನ್‌ ಲ್ಯಾಡನ್‌ ಕೈವಾಡವಿದೆ ಎಂದು ಅಮೆರಿಕಾದ ಕೆಲವು ಅಧಿಕಾರಿಗಳು ಶಂಕಿಸಿದ್ದಾರೆ. ಈತನಿಗೆ ಸಂಬಂಧಪಟ್ಟ ವ್ಯಕ್ತಿಗಳು ಅಮೆರಿಕಾವನ್ನು ಗುರಿಯಾಗಿಟ್ಟುಕೊಂಡು ಈ ಹೀನಾಯ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಆದರೆ ತಾಲಿಬಾನ್‌ ಇದನ್ನು ನಿರಾಕರಿಸಿದೆ.

ಅಮೆರಿಕೆಯ ಬಹುತೇಕ ಸರ್ಕಾರಿ ಕಚೇರಿಗಳನ್ನು ಹಠಾತ್ತನೆ ಗುಪ್ತ ಸ್ಥಳಗಳಿಗೆ ವರ್ಗಾಯಿಸಲಾಗಿದೆ. ವಿಶ್ವದ ವಿತ್ತ ವ್ಯವಸ್ಥೆಯ ಮೇಲೆ ಈ ದುರಂತ ಭಾರೀ ಪರಿಣಾಮ ಬೀರುವ ನಿರೀಕ್ಷೆಯಿದೆ.

ತಪ್ಪಿತಸ್ಥರನ್ನು ಬೇಟೆಯಾಡುತ್ತೇವೆ : ಇದು ಮಾನವೀಯತೆ ವಿರುದ್ಧ ನಡೆಸಿರುವ ಧಾಳಿಯಾಗಿದೆ. ಇದನ್ನು ಯಾರು ಮಾಡಿದ್ದಾರೋ ಅವರನ್ನು ಬೇಟೆಯಾಡಿ, ತಕ್ಕ ಶಾಸ್ತಿ ಮಾಡುತ್ತೇವೆ. ದುರಂತದಿಂದ ತೊಂದರೆಗೀಡಾಗಿರುವ ಅಮೆರಿಕನ್ನರಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುತ್ತೇವೆ ಎಂದು ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಚಿನ್ನದ ಬೆಲೆ ದಾಖಲೆ ಏರಿಕೆ : ಅಮೆರಿಕಾ ಅರ್ಥ ವ್ಯವಸ್ಥೆಯಲ್ಲೂ ಏರುಪೇರಾಗಿದ್ದು, ಚಿನ್ನದ ಬೆಲೆ ಏಕಾಏಕಿ 10 ಗ್ರಾಂಗೆ 275 ರುಪಾಯಿಯಷ್ಟು ಜಾಸ್ತಿಯಾಗಿದೆ. ಕಳೆದೆರಡು ವರ್ಷಗಳಲ್ಲಿ ಚಿನ್ನದ ಬೆಲೆಯಲ್ಲಿ ಈ ಪ್ರಮಾಣದ ಏರಿಕೆಯಾಗಿರಲಿಲ್ಲ. ಬುಧವಾರ ಚಿನ್ನದ ಬೆಲೆ ಇನ್ನಷ್ಟು ಏರುವ ಆತಂಕವಿದೆ.

ಭಾರತದ ಕಚೇರಿಗಳು ಬಂದ್‌ : ಭಾರತದಲ್ಲಿರುವ ಅಮೆರಿಕಾದ ರಾಯಭಾರಿ ಮತ್ತಿತರ ಕಚೇರಿಗಳು ಬುಧವಾರ ಕಾರ್ಯ ನಿರ್ವಹಿಸುವುದಿಲ್ಲ ಎಂದು ಆಯಾ ಕಚೇರಿಗಳ ಪ್ರಕಟಣೆಗಳು ಸ್ಪಷ್ಟಪಡಿಸಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more