ಮಳೆ ಬರದಿದ್ದರೆ ವಿದ್ಯುತ್ತಿಗೂ ಬರ! ಅಕ್ಟೋಬರ್‌ನಿಂದ ಪವರ್ ಕಟ್!!
ಬೆಂಗಳೂರು : ಉತ್ತಮ ಮಳೆ ಬರದಿದ್ದಲ್ಲಿ ಅಕ್ಟೋಬರ್‌ನಿಂದ ರಾಜ್ಯದಲ್ಲಿ ವಿದ್ಯುತ್ ನಿಲುಗಡೆಯನ್ನು ಹೇರಲಾಗುವುದು ಎಂದು ವಿದ್ಯುತ್ ಖಾತೆ ಸಚಿವ ವೀರಕುಮಾರ್ ಪಾಟೀಲ್ ತಿಳಿಸಿದ್ದಾರೆ.
ಮಳೆಯ ಕೊರತೆಯಿಂದ ಜಲಾಶಯಗಳಲ್ಲಿನ ನೀರಿನ ಮಟ್ಟ ತೃಪ್ತಿಕರವಾಗಿಲ್ಲ . ಈ ಕಾರಣದಿಂದಾಗಿ ವಿದ್ಯುತ್ ಕ್ಷಾಮ ರಾಜ್ಯದಲ್ಲಿ ತಲೆದೋರುತ್ತಿದೆ. ಆದರೂ ಅಕ್ಟೋಬರ್ ಅಂತ್ಯದ ವೇಳೆಗೆ ಉತ್ತಮ ಮಳೆಯಾಗಿ ಪರಿಸ್ಥಿತಿ ಸುಧಾರಿಸಬಹುದೆನ್ನುವ ನಿರೀಕ್ಷೆಯಲ್ಲಿದ್ದೇವೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೀರಕುಮಾರ್ ತಿಳಿಸಿದರು.
ಪ್ರಸ್ತುತ 92.517 ದಶಲಕ್ಷ ಯೂನಿಟ್ ವಿದ್ಯುತ್ ಬಳಸಲಾಗುತ್ತಿದೆ. ಇದು 80 ದಶಲಕ್ಷ ಯೂನಿಟ್‌ಗೆ ಇಳಿಯುವಂತೆ ಗ್ರಾಹಕರು ಸಹಕರಿಸಬೇಕು. 2000ನೇ ವರ್ಷಕ್ಕಿಂತ ಈ ವರ್ಷ ವಿದ್ಯುತ್ ಉತ್ಪಾದನೆ 7 ದಶಲಕ್ಷ ಯೂನಿಟ್‌ಗಳಷ್ಟು ಹೆಚ್ಚಿದೆಯಾದರೂ, ಬೇಡಿಕೆ ಅದನ್ನೂ ಮೀರಿಸುವಂತಿದೆ ನಿರೀಕ್ಷೆಯಂತೆ ಮಳೆಯಾಗದಿದ್ದಲ್ಲಿ ಅಕ್ಟೋಬರ್‌ನಿಂದ ವಿದ್ಯುತ್ ನಿಲುಗಡೆ ತಪ್ಪದು, ಪ್ರಸ್ತುತ ಪರಿಸ್ಥಿತಿ ಗಂಭೀರವಾಗಿದೆ ಎಂದು ವೀರಕುಮಾರ್ ಪಾಟೀಲ್ ಹೇಳಿದರು. ಸಚಿವರ ಮಾತನ್ನು ಮಳೆರಾಯ ಕೇಳಿಸಿಕೊಂಡಾನೆ?
ಖಾಸಗೀಕರಣ : ನಗರ ಹಾಗೂ ಅದರ ಸುತ್ತಮುತ್ತಲ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವಿತರಣೆಯನ್ನು ಇನ್ನೊಂದು ವರ್ಷದಲ್ಲಿ ಖಾಸಗೀಕರಣಗೊಳಿಸಲಾಗುವುದು. ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ (ಕೆಪಿಟಿಸಿಎಲ್) ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ನಿಗಮದ ಅಧ್ಯಕ್ಷ ವಿ.ಪಿ.ಬಳಿಗಾರ್ ತಿಳಿಸಿದ್ದಾರೆ.
ಶುಕ್ರವಾರ ನಡೆದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್‌ನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಕೆಪಿಟಿಸಿಎಲ್‌ನ ಯೋಜನೆಗಳ ರೂಪುರೇಷೆ ವಿವರಿಸುತ್ತಿದ್ದರು. ಬೆಂಗಳೂರು ನಗರವಷ್ಟೇ ಅಲ್ಲದೆ ಕೋಲಾರ ಹಾಗೂ ತುಮಕೂರುಗಳಲ್ಲೂ
(ಪಿಟಿಐ/ಇನ್ಫೋ ವಾರ್ತೆ)












Click it and Unblock the Notifications