ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ.8ರಂದು ಕ್ಯಾಂಪ್ಕೋದಿಂದ ಪಾಕಿಸ್ತಾನಕ್ಕೆ 160 ಟನ್‌ ಅಡಿಕೆ ರಫ್ತು

By Staff
|
Google Oneindia Kannada News

ಮಂಗಳೂರು : ಸುಮಾರು 60 ಲಕ್ಷ ರೂಪಾಯಿ ಮೌಲ್ಯದ 160 ಟನ್‌ ಅಡಿಕೆಯನ್ನು ಕ್ಯಾಂಪ್ಕೋ ಸಂಸ್ಥೆಯು ಸೆಪ್ಟೆಂಬರ್‌ 8ರಂದು ಪಾಕಿಸ್ತಾನಕ್ಕೆ ರಫ್ತು ಮಾಡಲಿದೆ.

ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ನಾಗಾರಾಜ ಶೆಟ್ಟಿ ಅವರು ಈ ವಿಷಯವನ್ನು ತಿಳಿಸಿದ್ದು 1998ರಲ್ಲಿ 60 ಟನ್‌ಗಳಷ್ಟು ಅಡಿಕೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲಾಗಿತ್ತು. ಆದರೆ ನಂತರದಲ್ಲಿ ಕಾರಣಾಂತರಗಳಿಂದ ರಫ್ತನ್ನು ಮುಂದುವರೆಸುವುದು ಸಾಧ್ಯವಾಗಲಿಲ್ಲ. ಈ ಬಗ್ಗೆ ಮಾತುಕತೆ ನಡೆಸಿದ ಬಳಿಕ , 10 ಕಂಟೈನರ್‌ಗಳಲ್ಲಿ 160 ಟನ್‌ ಅಡಿಕೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲು ಎಲ್ಲ ಸಿದ್ಧತೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಪಾಕಿಸ್ತಾನಕ್ಕೆ ಪ್ರತಿವರ್ಷ 1.20 ಲಕ್ಷ ಟನ್‌ ಅಡಿಕೆಯ ಅಗತ್ಯವಿದೆ. ಆದ್ದರಿಂದ ರಫ್ತು ಮಾಡುವ ಈ ಅವಕಾಶವನ್ನು ಕ್ಯಾಂಪ್ಕೋ ಬಳಸಿಕೊಂಡಿದೆ. ಆದರೆ ಪಾಕಿಸ್ತಾನಕ್ಕೆ ಆಮದಾಗುವ ಅಡಿಕೆ ಮೇಲಿನ ತೆರಿಗೆಯನ್ನು ಶೇ. 30ರಷ್ಟಾಗಿದ್ದು ಇದನ್ನು ಶೇ 10ಕ್ಕೆ ಇಳಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಲಾಗಿದೆ.

ಇದಲ್ಲದೆ, ಬಾಂಗ್ಲಾದೇಶ, ಭೂತಾನ್‌, ನೇಪಾಳ, ಮಾಲ್ಡೀವ್ಸ್‌ಗಳಿಗೂ ಅಡಿಕೆ ರಫ್ತು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಡಿಕೆ ರಫ್ತು ಮಾಡುವ ಉದ್ದೇಶದಿಂದ ಇಂಡೋನೇಶ್ಯಾ, ತೈವಾನ್‌ಗಳಿಗೂ ಭೇಟಿ ನೀಡಿ ಮಾರುಕಟ್ಟೆ ಪರಿಶೀಲನೆ ನಡೆಸಲಾಗುವುದು. ಈ ಅಡಿಕೆ ರಫ್ತಿನಿಂದ ಅಡಿಕೆ ಬೆಲೆ ಸ್ಥಿರಗೊಳ್ಳುವ ವಿಶ್ವಾಸವಿದೆ ಎಂದ ಅವರು ವಿದೇಶಗಳಿಂದ ಆಮದಾಗಿರುವ ಸುಮಾರು 30 ಸಾವಿರ ಟನ್‌ ಅಡಿಕೆಯ ಗುಣಮಟ್ಟ ಕಳಪೆಯಾಗಿದೆ. ಗುಣ ಮಟ್ಟ ಪರಿಶೀಲನೆಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ಯಾಂಪ್ಕೊ ಸಂಸ್ಥೆಯನ್ನು ಪ್ರಮುಖ ಏಜೆನ್ಸಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X