ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಕ್ರವಾರ ಮುಂಜಾನೆ ಬಾನಂಗಳದಲ್ಲಿ ಪಂಚಗ್ರಹಗಳ ಶೃಂಗಸಭೆ

By Staff
|
Google Oneindia Kannada News

ಬೆಂಗಳೂರು : ಖಗೋಳ ಶಾಸ್ತ್ರಜ್ಞರ ಪ್ರಕಾರ ಜುಲೈ ತಿಂಗಳಿನಲ್ಲಿ ಆಕಾಶದ ತುಂಬ ಮೋಡಗಳಿದ್ದರೂ, ಗ್ರಹಗಳೆಲ್ಲಾ ಸಭೆ ಸೇರುವ ತಿಂಗಳು. ಆಕಾಶ ಕಾಯಗಳನ್ನು ವೀಕ್ಷಿಸುವ ಚಾಳಿ ಇರುವವರಾದರೆ ಜುಲೈ 13ರಂದು ಬೆಳ್ಳಂಬೆಳಗ್ಗೆ ನಿಮಗೆ ಖುಷಿಯ ಸುದ್ದಿ. ಐದು ಗ್ರಹಗಳು ನಿಮ್ಮ ನೆತ್ತಿ ಮೇಲಿನ ಆಕಾಶದಲ್ಲಿ ಬರಿಗಣ್ಣಿಗೆ ಕಾಣಸಿಗುತ್ತವೆ.

ಗುರುವಾರ ಮುಂಜಾನೆಗೆ ಮುಂಚೆ ಈಶಾನ್ಯ ದಿಕ್ಕಿನಲ್ಲಿ ಗುರುಗ್ರಹ ಮಿಂಚುತ್ತಿರುತ್ತದೆ. ಅಲ್ಲಿಂದ ದಕ್ಷಿಣ ದಿಕ್ಕಿಗೆ ಸ್ವಲ್ಪ ಕತ್ತು ತಿರುಗಿಸಿದರೆ ಬುಧ ಗ್ರಹ ಕಾಣಸಿಗುತ್ತದೆ.

ಕೆಂಪಗಿನ ಮಂಗಳ ಗ್ರಹ ಮುಂಜಾವು 3 ಗಂಟೆಯ ಸುಮಾರಿಗೆ ಮೂಡಲಾರಂಭಿಸುತ್ತದೆ. ಪೂರ್ವದಲ್ಲಿ ಶುಕ್ರ ಮತ್ತು ಶನಿ ಗ್ರಹಗಳು ಕಾಣಿಸುತ್ತವೆ. ಜುಲೈ 17 ಮತ್ತು 18 ರ ಹೊತ್ತಿಗೆ ಸಣ್ಣದಾಗುತ್ತಿರುವ ಶುಕ್ರ ಮತ್ತು ಗುರು ಗ್ರಹದ ನಡುವೆ ಚಂದ್ರ ಬಂದರೆ ಬುಧ ಚಂದ್ರನ ಎಡಗಡೆಗೆ ಇರುತ್ತಾನೆ.

ಇಷ್ಟು ಮಾಹಿತಿಯಾಂದಿಗೆ ನೀವು ಶುಕ್ರವಾರ ಮುಂಜಾವು ಬಾನಿನಲ್ಲಿ ನಡೆವ ಗ್ರಹ ಸಮ್ಮೇಳನವನ್ನು ನೋಡಬಹುದು. ಆಕಾಶಕಾಯಗಳನ್ನು ವೀಕ್ಷಿಸುವ ಪ್ರವೃತ್ತಿಯವರಾದರೆ ಬಹಳ ಸುಲಭವಾಗಿ ಗ್ರಹಗಳನ್ನು ಪತ್ತೆ ಹಚ್ಚುತ್ತೀರಿ. ಇಲ್ಲದೇ ಇದ್ದಲ್ಲಿ ತುಸು ಹೊತ್ತಿನ ನಂತರವಾದರೂ ಈ ಪಂಚಗ್ರಹಕೂಟ ನಿಮಗೆ ಗೋಚರಿಸುತ್ತದೆ. ಬೈನಾಕ್ಯುಲರ್‌ ಉಪಯೋಗಿಸಿದರೆ ಸ್ಪಷ್ಟವಾಗಿ ಕಾಣಿಸುತ್ತವೆ. ಮೋಡಗಳ ದಯೆಯಾಂದಿದ್ದರೆ ಸಾಕು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X