ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು ವಿವಿ: ರಾಘವೇಂದ್ರರಿಗೆ ಅಮೆರಿಕ ಸೊಸೈಟಿ ಪುರಸ್ಕಾರ

By Staff
|
Google Oneindia Kannada News

ಮಂಗಳೂರು : ಮಂಗಳೂರು ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಎನ್‌. ರಾಘವೇಂದ್ರ , ಅಮೆರಿಕಾದ ಆರ್ಕಿಯೋಲಜಿಕಲ್‌ ಸೊಸಾೖಟಿಯ ಅನುದಾನಕ್ಕೆ ಪಾತ್ರರಾಗಿದ್ದಾರೆ.

ಮಂಗಳ ಗಂಗೋತ್ರಿಯ ಜೀವಶಾಸ್ತ್ರ ವಿಭಾಗದಲ್ಲಿ ಎಂ.ಎಸ್ಸಿ ಮಾಡುತ್ತಿರುವ ರಾಘವೇಂದ್ರ ಅವರು ಜೇಡದ ಬಗ್ಗೆ ಮಾಡಿರುವ ಸಂಶೋಧನಾ ಅಧ್ಯಯನವನ್ನು ಪುರಸ್ಕರಿಸಿ ಈ ಅನುದಾನವನ್ನು ನೀಡಲಾಗಿದೆ. ವಿದ್ಯಾರ್ಥಿಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಪಡೆಯುವ ಸಂದರ್ಭದಲ್ಲಿಯೇ ಅಧ್ಯಯನವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಅನುದಾನ ನೀಡಲಾಗುವುದು.

ಆನ್ವಯಿಕ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ರಾಜಶೇಖರ್‌ ಪಾಟೀಲ್‌ ಅವರ ಮಾರ್ಗದರ್ಶನದಲ್ಲಿ ರಾಘವೇಂದ್ರ ಅವರು ಅಧ್ಯಯನ ನಡೆಸಿದ್ದರು. ಗೇರು ಹಣ್ಣಿನ ಮರದ ಮೇಲಿರುವ ಜೇಡಗಳು ಆ ಮರದ ಮೇಲಿರುವ ಸೊಳ್ಳೆಗಳನ್ನು ನಿಯಂತ್ರಿಸುತ್ತವೆ. ಆದ್ದರಿಂದ ಈ ಜೇಡಗಳು ಗೇರು ಮರಕ್ಕೆ ಹಾನಿ ಮಾಡುವ ಸೊಳ್ಳೆ ನಾಶಕವಾಗಿ ಕೆಲಸ ಮಾಡುತ್ತವೆ ಎಂಬುದನ್ನು ರಾಘವೇಂದ್ರ ಅವರು ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದರು. ಅನುದಾನ 10 ಸಾವಿರ ರೂಪಾಯಿಯನ್ನೊಳಗೊಂಡಿರುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X