Get Updates
Get notified of breaking news, exclusive insights, and must-see stories!

ಕಾಶ್ಮೀರದ ಕುರಿತು ಯಾವುದೇ ರಾಜಿ ಅಸಾಧ್ಯ- ಪ್ರಧಾನಿ ವಾಜಪೇಯಿ

ಮುಂಬಯಿ : ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಆ ಕುರಿತು ಯಾವುದೇ ರಾಜಿಗೆ ಭಾರತ ಸಿದ್ಧವಿಲ್ಲ ಎಂದು ಪ್ರಧಾನಿ ವಾಜಪೇಯಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಜೂನ್‌ 7 ರಂದು ಬಲ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ವಾಜಪೇಯಿ, ಎರಡು ವಾರಗಳ ನಂತರ ಮಂಗಳವಾರ ದೆಹಲಿಗೆ ಮರಳುವ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಜುಲೈ ತಿಂಗಳಲ್ಲಿ ಪಾಕಿಸ್ತಾನದ ಮಿಲಿಟರಿ ಆಡಳಿತಗಾರ ಜನರಲ್‌ ಪರ್ವೇಜ್‌ ಮುಷರ್ರಫ್‌ ಅವರೊಂದಿಗೆ ನಡೆಸುವ ಮಾತುಕತೆ ಯಾವುದೇ ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಾನೊಬ್ಬ ಆಶಾವಾದಿ. ವಿವಿಧ ವಿಷಯಗಳನ್ನು ಸಹಕಾರ ಮನೋಭಾವದಲ್ಲಿ ತಿಳಿಗೊಳಿಸುವ ಉದ್ದೇಶದಿಂದ ಶಾಂತಿ ಮಾತುಕತೆಗೆ ತಕ್ಕ ಪರಿಸರ ಸೃಷ್ಟಿಸಿದ್ದೇವೆ ಎಂದು ಮುಷರ್ರಫ್‌ ಅವರೊಂದಿಗಿನ ತಮ್ಮ ಮಾತುಕತೆ ಕಾರ್ಯಕ್ರಮವನ್ನು ಬಣ್ಣಿಸಿಕೊಂಡ ಅವರು, ಪಾಕಿಸ್ತಾನ ತನ್ನ ರಕ್ಷಣಾ ವೆಚ್ಚವನ್ನು ತಗ್ಗಿಸಿಕೊಂಡಿರುವುದಕ್ಕೂ ಉದ್ದೇಶಿತ ಮಾತುಕತೆಗೂ ಯಾವುದೇ ಸಂಬಂಧ ಕಾಣಿಸುವುದಿಲ್ಲ ಎಂದರು.

ಮಣಿಪುರದಲ್ಲಿ ಹಿಂಸಾಚಾರ ದುರದೃಷ್ಟಕರವೆಂದು ಬಣ್ಣಿಸಿದ ಪ್ರಧಾನಿ, ಶಾಂತ ಚಿತ್ತತೆಯನ್ನು ಕಾಯ್ದುಕೊಂಡು ಬರುವಂತೆ ಮಣಿಪುರದ ಜನತೆಯಲ್ಲಿ ಮನವಿ ಮಾಡಿದರು. ಮಾತುಕತೆಗಳ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆ ಹೊರತು ಹಿಂಸಾಚಾರ ಯಾವುದಕ್ಕೂ ಪರಿಹಾರವಲ್ಲ ಎಂದು ಅವರು ಹೇಳಿದರು.

ಮುಂಬಯಿ ಜನತೆಗೆ ಧನ್ಯವಾದ : ಇನ್ನೊಂದು ವಾರದಲ್ಲಿ ತಾವು ಮಾಮೂಲಿನಂತೆ ಓಡಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದ ವಾಜಪೇಯಿ, ಮುಂಬಯಿ ನಾಗರಿಕರ ಆತಿಥ್ಯ- ಸಹಕಾರಕ್ಕಾಗಿ ಧನ್ಯವಾದ ವ್ಯಕ್ತಪಡಿಸಿದರು. ಎಂಟು ತಿಂಗಳ ಹಿಂದೆ ಮುಂಬಯಿಯ ಬ್ರೀಚ್‌ಕ್ಯಾಂಡಿ ಆಸ್ಪತ್ರೆಯಲ್ಲಿಯೇ ನಡೆದ ಎಡ ಮಂಡಿ ಶಸ್ತ್ರಚಿಕಿತ್ಸೆ ಸನ್ನಿವೇಶವನ್ನು ನೆನಪಿಸಿಕೊಂಡ ಅವರು, ಇಲ್ಲಿನ ಜನತೆಯ ಆತಿಥ್ಯ ನನ್ನ ಮನ ಮುಟ್ಟಿದೆ. ಈಗ ನನ್ನ ಎರಡೂ ಮಂಡಿಗಳು ಸಮರ್ಪಕವಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಆಸ್ಪತ್ರೆಯಲ್ಲಿ ಅಟಲ್‌ / ಶುಭಕಾಮನೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+