ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹತ್ತು ವರ್ಷಗಳಲ್ಲಿ ದುಪ್ಪಟ್ಟಾದ ‘ಭಾರತೀಯ- ಅಮೇರಿಕೆಯನ್ನರು’

By Staff
|
Google Oneindia Kannada News

ವಾಷಿಂಗ್ಟನ್‌ : ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿನ ಭಾರತೀಯ- ಅಮೇರಿಕೆಯನ್ನರ ಸಂಖ್ಯೆ ದುಪ್ಪಟ್ಟಾಗಿರುವುದು 2000 ಸಾಲಿನ ಜನಗಣತಿಯಿಂದ ತಿಳಿದುಬಂದಿದೆ. 1990 ರಲ್ಲಿ 8 ಲಕ್ಷ 15 ಸಾವಿರವಿದ್ದ ಭಾರತೀಯ- ಅಮೇರಿಕೆಯನ್ನರ ಸಂಖ್ಯೆ ಪ್ರಸ್ತುತ ಜನಗಣತಿಯಲ್ಲಿ 1.7 ಮಿಲಿಯನ್‌ಗೆ (ಶೇ.106 ಹೆಚ್ಚಳ)ಏರಿದೆ.

ಆದರೆ, ಅಮೆರಿಕದಲ್ಲಿರುವ ಇತರ ಏಷ್ಯನ್‌ ರಾಷ್ಟ್ರೀಯರ ಪೈಕಿ ಅಗ್ರಸ್ಥಾನ ಭಾರತೀಯರದ್ದಲ್ಲ. ಈ ನಿಟ್ಟಿನಲ್ಲಿ ಚೀನಾ ಹಾಗೂ ಫಿಲಿಫೈನ್ಸ್‌ ಭಾರತಕ್ಕಿಂತ ಮುಂದಿವೆ. ಚೀನಿ- ಅಮೇರಿಕನ್ನರ ಸಂಖ್ಯೆ 2.4 ಮಿಲಿಯನ್‌ ಆದರೆ, ಫಿಲಿಫೈನ್ಸ್‌ ದೇಶೀಯರ ಸಂಖ್ಯೆ 1.8 ಮಿಲಿಯನ್‌. ಭಾರತದ ನಂತರದ ನಾಲ್ಕನೇ ಸ್ಥಾನ 1.1 ಮಿಲಿಯನ್‌ ಸಂಖ್ಯೆಯಿರುವ ವಿಯಾಟ್ನೀಸ್‌- ಅಮೇರಿಕನ್ನರದು.

ಭಾರತೀಯ- ಅಮೇರಿಕೆಯನ್ನರ ಸಂಖ್ಯೆಯ ಹೆಚ್ಚಳ, ಅತ್ಯುನ್ನತ ಪರಿಣತಿ ಅಪೇಕ್ಷಿಸುವ ಕ್ಷೇತ್ರಗಳಲ್ಲಿ ಕೆಲಸಗಾರರು ಹಾಗೂ ಸಂಶೋಧಕ ವಲಯಗಳಲ್ಲಿ ಕಂಡುಬಂದಿದೆ. 1999 ರಲ್ಲಿ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಅತ್ಯುನ್ನತ ಪರಿಣತ ಕೆಲಸಗಾರರಿಗೆ ನೀಡಿದ 1 ಲಕ್ಷ 15 ಸಾವಿರ ಎಚ್‌-1ಬಿ ವೀಸಾಗಳಲ್ಲಿ ಅರ್ಧದಷ್ಟನ್ನು ಭಾರತೀಯರೇ ಪಡೆದಿದ್ದಾರೆ ಅನ್ನುವುದು ಗಮನಾರ್ಹ.

1998 ರಲ್ಲಿ , The Immigration

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X