ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂಕೋಲಾ ಬಳಿ ರಸ್ತೆ ಅಪಘಾತಕ್ಕೆ ಏಳು ಮಂದಿ ಬಲಿ

By Staff
|
Google Oneindia Kannada News

ಅಂಕೋಲಾ: ಇಲ್ಲಿನ ಅಗಸೂರು ಸಮೀಪದ ಕಂಚಿನಬಾಗಿಲು ಬಳಿ ಮಿನಿ ಆಟೋಗೆ ಲಾರಿಯಾಂದು ಹಿಮ್ಮುಖವಾಗಿ ಗುದ್ದಿದಾಗ ಏಳು ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.

ಅಂಕೋಲಾದಿಂದ ಹೊನ್ನಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದ ಮಿನಿ ಡೋರ್‌ ಆಟೋ ಪ್ರಯಾಣಿಕರನ್ನು ಇಳಿಸಲು ನಿಂತಿದ್ದಾಗ ಮುಂದಿನಿಂದ ನಿಂತಿದ್ದ ಲಾರಿಯಾಂದು ಹಿಮ್ಮುಖವಾಗಿ ಆಟೋದ ಮೇಲೆಯೇ ಚಲಿಸಿದ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡ ಎಂಟು ಮಂದಿಯನ್ನು ಅಂಕೋಲಾ ಮತ್ತು ಮಣಿಪಾಲ ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತಪಟ್ಟವರನ್ನು ಶಾಲಿನಿ ಚಂದ್ರಹಾಸ ನಾಯ್ಕ ಮತ್ತು ಆಕೆಯ ಮಕ್ಕಳಾದ ಆಶ್ರಯ(2), ಅನುಪಮಾ (1) ಮಾರುತಿ ವೆಂಕಟ್ರಮಣ ಶೆಟ್ಟಿ (32), ಶ್ರೀ ರಾಮ ಸಣ್ಣ ಗೌಡ (45), ಅಡ್ಲೂರು, ನಾಗಮ್ಮ ಸೋಮು ಗೌಡ (32), ನಾಗಮ್ಮ (70) ಎದು ಗುರುತಿಸಲಾಗಿದೆ.

ಕಮಲಾಕರ ಹನುಮೇಶ ಪರಿಕಂತ್ರ, ಆಂಧ್ರದ ಅಂಜಿನಯ್ಯ ಪಿಚ್ಚಯ್ಯ, ರವಿ ತಳಗದ್ದೆ, ತಿಮ್ಮ ಮಂಜುಗೌಡ ಹೆಗ್ಗಾರಮಕ್ಕಿ, ಸುಮಿತ್ರ ಸುಬ್ಬರಾಯ ಗೌಡ, ಗೀತಾ, ಮಾರುತಿ ಅಂಬಾರಕೊಡ್ಲ ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X