ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫರ್ನಾಂಡಿಸ್‌ ತೋಡಿದ ಹಳ್ಳಕ್ಕೆ ಎನ್‌ಡಿಎ - ಹೆಗಡೆ

By Staff
|
Google Oneindia Kannada News

*ಎಂ.ವಿ.ಮೀನಾಕ್ಷಿ ಸುಂದರಂ ಹಾಗೂ ಸುನಿಲ್‌ ಘಾಟಡೆ

ನವದೆಹಲಿ : ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಈಗ ಪೂರಾ ಬಿಐ . ದೇವೇಗೌಡರ ಜೊತೆಗೆ ಭೆಟ್ಟಿ ವಿಷಯ, ತೆಹಲ್ಕಾ ಮಸಿ ಬಳಿದುಕೊಂಡ ಎನ್‌ಡಿಎ- ಫರ್ನಾಂಡಿಸ್‌ಗೆ ಹಿಡಿ ಸಲಹೆ ಮೊದಲಾದವುಗಳಲ್ಲಿ ಕಳೆದುಹೋಗಿರುವ ಹೆಗಡೆ ಆಗ್ರಹಿಸುತ್ತಾರೆ- ತೆಹಲ್ಕಾ ಬಯಲಿಗೆಳೆದ ರಕ್ಷಣಾ ಹಗರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು. ಹೆಗಡೆ ಮಾತಿಗೆ ಸಿಕ್ಕಿದ್ದಾರೆ. ಅವರೇ ಮಾತಾಡಲಿ...

  • ಮಾಜಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌, ಹಗರಣ ಬಯಲಾದ ತಕ್ಷಣ ರಾಜೀನಾಮೆ ಕೊಡದೆ ತಮ್ಮ ಹುಂಬತನದಿಂದ ಕಾಂಗ್ರೆಸ್‌ ಕೈಗೆ ಜುಟ್ಟು ಕೊಟ್ಟುಬಿಟ್ಟಿದ್ದಾರೆ
  • ರಕ್ಷಣಾ ಹಗರಣವನ್ನು ತೆಹಲ್ಕಾ ಹೊರಗೆಡುಹಿದ ತಕ್ಷಣ ಪ್ರಧಾನಿ ವಾಜಪೇಯಿ ಜಾರ್ಜ್‌ ಅವರ ರಾಜೀನಾಮೆ ಕೇಳಿದ್ದರೆ ಪರಿಸ್ಥಿತಿ ಇಷ್ಟು ಹದಗೆಡುತ್ತಿರಲಿಲ್ಲ
  • ರಾಜಕೀಯ, ಆಡಳಿತ ಹಾಗೂ ರಕ್ಷಣಾ ವಲಯಗಳಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ತೆಹಲ್ಕಾ ಡಾಟ್‌ ಕಾಂ ಪ್ರಧಾನ ಸಂಪಾದಕ ತರುಣ್‌ ತೇಜಪಾಲ್‌ಗೆ ಧನ್ಯವಾದಗಳು. ಅವರು ಮಾಡಿರೋದು ದೇಶಸೇವೆ
  • ಸರ್ಕಾರ ಪ್ರಸ್ತುತ ಆದೇಶಿಸಿರುವ ನ್ಯಾಯಾಂಗ ತನಿಖೆಯಿಂದ ಅಗತ್ಯತೆಯನ್ನು ಭರಿಸಲಾಗದು. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು
  • ಭ್ರಷ್ಟಾಚಾರದ ಆರೋಪ ಹುಸಿ ಹಾಗೂ ವಾಸ್ತವದಲ್ಲಿ ರೈತರ ಸಮಸ್ಯೆ ಏನು ಎಂದು ಜನತೆಗೆ ಸಾರಲು ಎನ್‌ಡಿಎ ಹಮ್ಮಿಕೊಳ್ಳುತ್ತಿರುವ ರ್ಯಾಲಿಗಳು ಕುರ್ಚಿಯಿಂದ ಕೆಳಗಿಳಿದ ಒಬ್ಬ ವ್ಯಕ್ತಿಯ (ಫರ್ನಾಂಡಿಸ್‌) ಗುಣಗಾನ ಮಾಡುವ, ವೈಭವೀಕರಿಸುವ ವೇದಿಕೆಗಳಾಗುತ್ತಿವೆ
  • ತೆಹಲ್ಕಾ ಅಲೆ ಎನ್‌ಡಿಎಯನ್ನು ಯಾವ ತೀರಕ್ಕೆ ಒಯ್ಯುವುದೋ? ಈ ಕಾರಣಕ್ಕೆ ಮುಂದಿನ ತಿಂಗಳ ಅಸೆಂಬ್ಲಿ ಚುನಾವಣೆಗಳಲ್ಲಿ ರಾಜಕೀಯ ಹೊಂದಾಣಿಕೆಗಳ ಬಗ್ಗೆ ಯೋಚಿಸಿಲ್ಲ
  • ಎನ್‌ಡಿಎ ಸರ್ಕಾರಕ್ಕೆ ಮತ್ತೆ ಜೀವಕೊಡಬೇಕಾದರೆ, ತಮ್ಮ ಸಚಿವ ಸಂಪುಟದಲ್ಲಿನ ಕಳೆಗಳನ್ನು ವಾಜಪೇಯಿ ಕೀಳಬೇಕು. ಸಂಘ ಪರಿವಾರ ಆಡಳಿತದಲ್ಲಿ ಮೂಗು ತೂರಿಸದಂತೆ ಅದನ್ನು ದೂರ ಇಡಬೇಕು
  • ಬಂಗಾರು ಲಕ್ಷ್ಮಣ್‌ ಹಾಗೂ ಸಮತಾ ಪಕ್ಷದ ಮುಖ್ಯಸ್ಥೆ ಜಯಾ ಜೈಟ್ಲಿ ಸ್ಥಿತಿ ಮುಂದೇನು ಅನ್ನೋದನ್ನ ನ್ಯಾಯಾಂಗ ತನಿಖೆ ನಿರ್ಧರಿಸಲಿದೆ
  • ಪ್ರಧಾನಿ ವಾಜಪೇಯಿ ಅವರ ಕಚೇರಿಯಲ್ಲಿನ ವಿವಾದಿತ ಅಧಿಕಾರಿಗಳನ್ನು ತೆಗೆಯಬೇಕೆಂಬ ಎನ್‌ಡಿಎಯ ಕೆಲ ಬೆಂಬಲಿತರ ಒತ್ತಾಯದ ಬಗ್ಗೆ ನಾನು ಏನನ್ನೂ ಹೇಳಲಾರೆ
  • ಎನ್‌ಡಿಎಯ ಕೆಲ ಮಂತ್ರಿಗಳು ಫರ್ನಾಂಡಿಸ್‌ ನಿರ್ದೋಷಿ , ಸ್ವತಂತ್ರ ಭಾರತ ಕಂಡ ಯಶಸ್ವಿ ರಕ್ಷಣಾ ಸಚಿವ ನಾಲ್ಕು ತಿಂಗಳ ನಂತರ ಮತ್ತೆ ಗದ್ದುಗೆ ಏರಲಿದ್ದಾರೆ ಅಂತ ಷರಾ ಹೊರಡಿಸಿರೋದು ನ್ಯಾಯಾಂಗ ತನಿಖೆಯ ನೈತಿಕ ಸ್ಥೈರ್ಯವನ್ನೇ ಕುಗ್ಗಿಸಿದೆ
  • ಯಾವುದೇ ನ್ಯಾಯಾಧೀಶರಾಗಲಿ, ಏನಂತಾರೆ ?- ನನ್ನ ಕೆಲಸ ಏನಿದೆ. ಫರ್ನಾಂಡಿಸ್‌ ಸಭ್ಯಸ್ಥ ಅಂತ ನೀವೇ ತೀರ್ಮಾನಿಸಿದಿರಲ್ಲ. ನಾನಿರೋದು ನಿಮ್ಮ ಅಭಿಪ್ರಾಯಕ್ಕೆ ಠಸ್ಸೆ ಒತ್ತಲಷ್ಟೆ ಅನ್ನುತ್ತಾರೆ ಅಷ್ಟೆ
  • ಬರುವ ಲೋಕಸಭಾ ಚುನಾವಣೆಗಳಲ್ಲಿ ಎನ್‌ಡಿಎ ಸ್ವರೂಪದಲ್ಲಾಗಲೀ, ಒಡಂಬಡಿಕೆಯಲ್ಲಾಗಲೀ ಯಾವುದೇ ಬದಲಾವಣೆಯಿರುವುದಿಲ್ಲ. ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳಲ್ಲಿ ಬಿಜೆಪಿ ಚಿಕ್ಕದೊಂದು ಒಡನಾಡಿ ಪಕ್ಷವಾಗಿದೆ. ಒಟ್ಟಾರೆ ಲೆಕ್ಕಕ್ಕಿಲ್ಲ ಎಬಂತಿದೆ
  • ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ (ತೃಣಮೂಲ ಜೊತೆ ಕೈಜೋಡಿಸಿರುವುದರಿಂದ) ಮಾತ್ರ ಕಾಂಗ್ರೆಸ್‌ ಗೆಲುವು ಕಾಣಲಿದೆ
  • ಎನ್‌ಡಿಎ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸಲಿ ಎಂಬುದು ನನ್ನಾಸೆ. ಇಷ್ಟರ ಮೇಲೆ ಸರ್ಕಾರ ಉರುಳಿ ಬಿದ್ದರೆ, ಅದರ ಕ್ರೆಡಿಟ್ಟೆಲ್ಲಾ ಶ್ರೀಯುತ ಫರ್ನಾಂಡಿಸ್‌ ಅವರಿಗೇ ಸೇರಬೇಕು!
(ಪಿಟಿಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X