ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಸ್‌ಕಾಂ ಅಧ್ಯಕ್ಷ ದೇವಾಂಗ್‌ ಮೆಹ್ತಾ ನಿಧನ

By Staff
|
Google Oneindia Kannada News

ಸಿಡ್ನಿ : ಸಾಫ್ಟ್‌ವೇರ್‌ ಮತ್ತು ಸೇವಾ ಕಂಪನಿಗಳ ರಾಷ್ಟ್ರೀಯ ಒಕ್ಕೂಟ (ನಾಸ್‌ಕಾಂ) ಅಧ್ಯಕ್ಷ ದೇವಾಂಗ್‌ ಮೆಹ್ತಾ ಗುರುವಾರ ಮುಂಜಾನೆ ಇಲ್ಲಿನ ಹೊಟೇಲೊಂದರಲ್ಲಿ ನಿಧನರಾದರು.

ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್‌ ಮಹಾಜನ್‌ ನೇತೃತ್ವದ ತಂತ್ರಜ್ಞಾನ ಪರಿಣತರ ನಿಯೋಗದಲ್ಲಿನ ಸದಸ್ಯರಾಗಿ ಮೆಹ್ತಾ ಇಲ್ಲಿಗೆ ಆಗಮಿಸಿದ್ದರು. ಗುರುವಾರ ಮುಂಜಾನೆಯ ವಿಮಾನದಲ್ಲಿ ತವರಿಗೆ ವಾಪಸ್ಸಾಗಬೇಕಿದ್ದ ಅವರು ತಾವು ತಂಗಿದ್ದ ಹೊಟೇಲಿನ ಕೋಣೆಯಲ್ಲಿ ಮೃತಪಟ್ಟಿದ್ದನ್ನು ಹೊಟೇಲ್‌ ಸಿಬ್ಬಂದಿ ಕಂಡಿದ್ದಾರೆ.

ದೇವಾಂಗ್‌ ಮೆಹ್ತಾ ಅವರಿಗೆ ವಿಮಾನ ಮಿಸ್‌ ಆಯಿತು ಅನ್ನುವ ಸುದ್ದಿ ಕೇಳಿದ ನಂತರವೇ ಹೊಟೇಲ್‌ ಸಿಬ್ಬಂದಿ ಅವರು ತಂಗಿದ್ದ ಕೋಣೆಗೆ ಹೊಕ್ಕಿದ್ದು ಎಂದು ಭಾರತದ ಹೈ ಕಮಿಷನರ್‌ ಆರ್‌.ಎಸ್‌.ರಾಥೋಡ್‌ ಸ್ಪಷ್ಟಪಡಿಸಿದ್ದಾರೆ. ಸಾವಿಗೆ ಖಚಿತ ಕಾರಣ ಏನು ಎಂಬುದು ಇನ್ನೂ ತಿಳಿದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X