ರಾಯಚೂರಿನಲ್ಲಿ ಸುರಿದ ಅಕಾಲ ಜಡಿಮಳೆಗೆ ಒಬ್ಬ ವ್ಯಕ್ತಿ ಬಲಿ
ರಾಯಚೂರು : ಮಂಗಳವಾರ ನಡುರಾತ್ರಿ ರಾಯಚೂರಿನಲ್ಲಿ ಆರಂಭವಾದ ಜಡಿ ಮಳೆಗೆ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಬಲಿಯಾಗಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ಹಟ್ಟಿ ಗ್ರಾಮದ ಮನೆಯಾಂದಕ್ಕೆ ಮಂಗಳವಾರ ರಾತ್ರಿ ಮಿಂಚು ಬಡಿದು ಯರಗಟ್ಟಿಯ ರಂಗಪ್ಪ(20) ಅವರು ಮೃತರಾಗಿದ್ದಾರೆ. ಮನೆಯಲ್ಲಿದ್ದ ನಾಲ್ಕು ಮಂದಿಗೆ ಗಾಯವಾಗಿದೆ. ಇನ್ನೊಂದು ಪ್ರಕರಣದಲ್ಲಿ 15 ಆಡುಗಳು ಸತ್ತಿದ್ದು, ಇಬ್ಬರು ಹುಡುಗರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ.
ಅಕಾಲವಾಗಿ ಸುರಿದ ಜಡಿ ಮಳೆಗೆ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಜೋಳ ಮತ್ತು ನೆಲಗಡಲೆ ಬೆಳೆ ಹಾನಿಗೊಂಡಿದೆ. ರಾಯಚೂರಿನಲ್ಲಿ 40 ಮಿಲಿಮೀಟರ್ ಮಳೆಯಾಗಿದ್ದರೆ, ದೇವದುರ್ಗ ತಾಲ್ಲೂಕಿನಲ್ಲಿ 21 ಮಿಲಿಮೀಟರ್ ಮಳೆ ಸುರಿದಿದೆ. ಮಾನ್ವಿಯಲ್ಲಿ 2.5 ಮಿಲಿ ಮೀಟರ್, ಸಿಂಧನೂರು ಮತ್ತು ಲಿಂಗಸಗೂರಿನಲ್ಲಿ 2 ಮಿಲಿಮೀಟರ್ ಮಳೆಯಾಗಿದೆ.
ಬೇಸಗೆ ಸುಡು ಬಿಸಿಲಿಗೆ 41 ಡಿಗ್ರಿಗೇರಿದ್ದ ಉಷ್ಣಾಂಶದಿಂದ ರಾಯಚೂರು ಉರಿಯುತ್ತಿದ್ದ ಸಂದರ್ಭದಲ್ಲಿ ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಗಡುಗು ಮಿಂಚಿನ ಮಳೆ ಆರಂಭವಾದಾಗ ಮಂದಿ ಖುಷಿ ಪಟ್ಟಿದ್ದರು. ಆದರೆ ಆರಂಭವಾದ ಮಳೆ ನಿಲ್ಲುವ ಸೂಚನೆ ಕಾಣಲಿಲ್ಲ. ಮಳೆಗಾಲಕ್ಕೆ ರೆಡಿಯಾಗಿರದ ಮಂದಿ ರೆಚ್ಚೆ ಹಿಡಿದು ಸುರಿದ ಮಳೆಯಿಂದ ನಷ್ಟ ಅನುಭವಿಸುವಂತಾಗಿದೆ. ಬುಧವಾರ ಬೆಳಗು ಹರಿಯುವುದರೊಳಗೆ ಜಿಲ್ಲೆಯ ಉಷ್ಣಾಂಶ 35 ಡಿಗ್ರಿಗಿಳಿದಿತ್ತು.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications