ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ವೇದಾಂತ ಮಾತಾಡಲು ಶುರು ಮಾಡಿದ್ದೀರಿ. ಅತ್ತ ಕಡೆ ನಿಮಗೆ ಇರುವ ಆಸಕ್ತಿ ಯನ್ನು ಸದ್ಯಕ್ಕೆ ಪಕ್ಕಕ್ಕಿರಿಸಿ, ಆರಂಭಿಸಿರುವ ಕೆಲಸವನ್ನು ಪೂರ್ತಿಗೊಳಿಸಲು ಪ್ರಯತ್ನಿಸಿ.ವೃಷಭ : ರಾಜಕೀಯ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಏನೇನೂ ಸಾಲದು. ಸ್ವಲ್ಪ ದಿನ ನೀವು ಟ್ರೆೃನೀಯಾಗಿಯೇ ಮುಂದುವರೆಯುವುದು ಒಳ್ಳೆಯದು.
ಮಿಥುನ : ಹೊಲಿಗೆ, ಕಸೂತಿ ಕೆಲಸಗಳನ್ನು ತುಂಬಾ ಆಸಕ್ತಿಯಿಂದ ಹಚ್ಚಿಕೊಂಡರೆ, ನಿಮಗೆ ಆ ಕ್ಷೇತ್ರದಲ್ಲಿ ಗೆಲುವಿದೆ. ವ್ಯಾಪಾರೀ ಕ್ಷೇತ್ರದಲ್ಲಿ ಪಳಗುವುದು ಮುಖ್ಯ .
ಕಟಕ : ಬ್ಯಾಂಕ್ ಕೆಲಸ ಕಾರ್ಯಗಳು ಝೇಂಕುವುದರಿಂದ ಎಲ್ಲಾ ಕೆಲಸ ಕಾರ್ಯಗಳು ಬದಿಗೆ ಸರಿಯುತ್ತವೆ. ಈ ರಿಲ್ಯಾಕ್ಸಿಂಗ್ ಸಮಯವನ್ನು ಉಪಯೋಗಿಸಿಕೊಳ್ಳುವ ಜಾಣ್ಮೆ ನಿಮಗಿರಲಿ.
ಸಿಂಹ : ಸ್ನೇಹಿತರ ಪತ್ರವೊಂದು ನಿಮಗೆ ತುಂಬಾ ಖುಷಿ ತರುತ್ತದೆ. ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುವುದೆಂದರೆ ಅದೂ ಒಂಥರಾ ಮಜಾನೇ.
ಕನ್ಯಾ : ಖರ್ಚು ವೆಚ್ಚಗಳನ್ನು ನಿಭಾಯಿಸುವಲ್ಲಿಯೂ ಸ್ವಲ್ಪ ಎಚ್ಚರವಿರಬೇಕಲ್ಲವೇ ? ಹೆಂಡತಿ ಮಕ್ಕಳ ಬಳಿ ಇರುವ ಮುನಿಸು ನಿಮ್ಮ ವ್ಯವಹಾರದಲ್ಲೂ ಇದ್ದರೆ ಹೇಗೆ ಸ್ವಾಮಿ ?
ತುಲಾ : ಪಾಠ ಪ್ರವಚನಗಳ ಕಡೆಗೆ ನೀವು ಹರಿಸುವ ಗಮನ ಹೆಚ್ಚಾಯಿತು. ಯಾಕೆಂದರೆ ನೀವು ಕೈಗೆತ್ತಿಕೊಂಡ ಕೆಲಸ ಇನ್ನೂ ಮುಗಿದಿಲ್ಲ. ಸೋ, ಆಲ್ ದಬೆಸ್ಟ್.
ವೃಶ್ಚಿಕ : ಬೈಯಿಸಿ ಕೊಂಡರೆ ಅದು ನಿಮ್ಮ ಒಳ್ಳೆದಕ್ಕೇ ಆದ್ದರಿಂದ ಸ್ನೇಹಿತರೊಂದಿಗೆ ಅದನ್ನೂ ಹಂಚಿಕೊಳ್ಳಿ. ಸುಮ್ಮನೇ ಜಂಭವೇತಕೆ ಹೇಳಿ !
ಧನಸ್ಸು :ಇವತ್ತು ಸಂಜೆ ಸಾಲಗಾರರು ಮನೆ ಬಾಗಿಲಿಗೆ ಬರಬಹುದು. ಇರುಸು ಮುರುಸು ಮಾಡಿಕೊಂಡು ಸ್ವಲ್ಪ ಸಂಕಟ ಪಡುತ್ತೀರಿ. ಸಾಲವನ್ನು ಮರೆಯಬಾರದಲ್ವ.
ಮಕರ : ಬೇರೆಯವರ ಖುಷಿಯನ್ನು ಕಿತ್ತುಕೊಳ್ಳುವುದು ಸಭ್ಯತೆ ಅಲ್ಲ. ಸಹೋದ್ಯೋಗಿಗಳೊಂದಿಗೆ ಚೆನ್ನಾಗಿ ಬೆರೆಯಲು ಪ್ರಯತ್ನಿಸಿ.
ಕುಂಭ : ಇವತ್ತು ಆರ್ಥಿಕವಾಗಿ ಲಾಭ ಗಳಿಸುತ್ತೀರಿ. ಇಷ್ಟು ದಿನದ ಕಷ್ಟಗಳೆಲ್ಲಾ ಸದ್ಯಕ್ಕೆ ಪರಿಹಾರವಾಗುತ್ತದೆ. ಆದ್ದರಿಂದ ಇಂದು ಬಲು ಖುಷಿಯಾಗಿರುತ್ತೀರಿ.
ಮೀನ : ಆರ್ಥಿಕ ಮುಗ್ಗಟ್ಟು ಸದ್ಯಕ್ಕೆ ಬಗೆಹರಿಯುತ್ತದೆ. ಆದರೂ ಸ್ವಲ್ಪ ಕಾಳಜಿ ವಹಿಸುವುದು ಸೂಕ್ತ. ಸಂಜೆ ನೆಂಟರು ಬಂದರೆ ಮುನಿಸು ಬೇಡ.












Click it and Unblock the Notifications