ಹಂಪೆ ಸ್ಮಾರಕ ರಕ್ಷಣೆ, ರಾಜ್ಯದ ಕ್ರಮದ ಬಗೆಗೆ ಯುನೆಸ್ಕೋ ತೃಪ್ತಿ
ಬಳ್ಳಾರಿ : ಹಂಪೆಯ ಸ್ಮಾರಕಗಳ ರಕ್ಷಣೆ ಕುರಿತಂತೆ ರಾಜ್ಯ ಸರಕಾರವು ತೆಗೆದುಕೊಂಡಿರುವ ಕ್ರಮಗಳ ಬಗೆಗೆ ಯುನೆಸ್ಕೋ ತನ್ನ ತೃಪ್ತಿ ವ್ಯಕ್ತಪಡಿಸಿದೆ.
ರಾಜ್ಯ ಸರಕಾರದ ಕ್ರಮಗಳ ಬಗೆಗೆ ಯುನೆಸ್ಕೋ ನಿರ್ದೇಶಕರು ತಮ್ಮ ಹರ್ಷ ವ್ಯಕ್ತ ಪಡಿಸಿದ್ದಾರೆ. ಆನೆಗೊಂದಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಂಪೆಯನ್ನು ವಿಶ್ವ ಸ್ಮಾರಕಗಳ ಪಟ್ಟಿಯಿಂದ ತೆಗೆದು ಹಾಕುವುದಾಗಿ ಯುನೆಸ್ಕೋ ರಾಜ್ಯ ಸರಕಾರವನ್ನು ಎಚ್ಚರಿಸಿತ್ತು. ಎರಡು ಸೇತುವೆಗಳಲ್ಲಿ ಒಂದು ಸೇತುವೆಯ ಕಾಮಗಾರಿ ಮುಕ್ತಾಯವಾಗುತ್ತಿದ್ದು, ವಿರೂಪಾಕ್ಷ ದೇವಾಲಯದ ಬಳಿಯ ಎರಡನೇ ಸೇತುವೆ ಕೆಲಸ ಮುಂದುವರೆಯುತ್ತಿದೆ.
ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದ ಯುನೆಸ್ಕೋದ 24ನೇ ಜಾಗತಿಕ ಸಮಾವೇಶದಲ್ಲಿ ಯುನೆಸ್ಕೋ ಅಧಿಕಾರಿಗಳು ಹಂಪೆಯ ರಕ್ಷಣಾ ಪ್ರಕ್ರಿಯೆಯನ್ನು ವಿಮರ್ಶಿಸಿದ್ದು, ವಿಶ್ವ ಸ್ಮಾರಕಗಳ ಪಟ್ಟಿಯಿಂದ ಹಂಪೆಯ ಹೆಸರನ್ನು ತೆಗೆದು ಹಾಕುವ ಯೋಚನೆಯನ್ನು ಯುನೆಸ್ಕೋ ಕೈ ಬಿಟ್ಟಿದೆ.
(ಯುಎನ್‌ಐ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications