Get Updates
Get notified of breaking news, exclusive insights, and must-see stories!

ಬೆಂಗಳೂರಿನ ವಿಜಯನ್‌ಗೆ ಓಂ ಪ್ರಕಾಶ್‌ ಭಾಸಿನ್‌ ಪ್ರಶಸ್ತಿ

ನವದೆಹಲಿ : ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಎಂ. ವಿಜಯನ್‌ ಸೇರಿದಂತೆ ಐವರು ವಿಜ್ಞಾನಿಗಳನ್ನು 2000 ಸಾಲಿನ ಪ್ರತಿಷ್ಠಿತ ಓಂ ಪ್ರಕಾಶ್‌ ಭಾಸಿನ್‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜೈವಿಕ ವಿಜ್ಞಾನ ಕ್ಷೇತ್ರದಲ್ಲಿ ವಿಜಯನ್‌ ಅವರು ಸಲ್ಲಿಸಿರುವ ಮಹತ್ತರ ಸೇವೆಯನ್ನು ಗುರ್ತಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಎನ್‌.ಕೆ. ಮೆಹ್ರಾ, ಕೃಷಿ ತಂತ್ರಜ್ಞಾನ ಸಂಶೋಧನೆಗಾಗಿ ಲಕ್ನೋದ ಔಷಧಿ ಮತ್ತು ಸುವಾಸನೆ ಬೀರುವ ಸಸ್ಯ ಕೇಂದ್ರದ ಸುಶಿಲ್‌ ಕುಮಾರ್‌, ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಾಗಿ ಪುಣೆಯ ವಿಜ್ಞಾನ ಸಂಶೋಧನಾ ಕೇಂದ್ರದ ವಿಜಯ್‌ ಪಿ. ಭಾಟ್ಕರ್‌ ಹಾಗೂ ಎಂಜಿನಿಯರಿಂಗ್‌ ಕ್ಷೇತ್ರದ ಸಾಧನೆಗಾಗಿ ಚೆನ್ನೈನ ಚರ್ಮ ಸಂಶೋಧನಾ ಸಂಸ್ಥೆಯ ಟಿ. ರಾಮಸ್ವಾಮಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

ವೈಜ್ಞಾನಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ದೇಶದ ವಿಜ್ಞಾನಿಗಳನ್ನು ಗುರ್ತಿಸಿ ಸಮ್ಮಾನಿಸುವ ಉದ್ದೇಶದಿಂದ ಪ್ರತಿವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಒಂದು ಲಕ್ಷ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಪ್ರಶಸ್ತಿ ಹೊಂದಿದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+