ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟಂಬರ್‌ನಿಂದ ಬೆಂಗಳೂರು -ಜರ್ಮನಿ ನಡುವೆ ನೇರ ವಿಮಾನ

By Staff
|
Google Oneindia Kannada News

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ಭಾರತ ಹಾಗೂ ಜರ್ಮನಿಯ ನಡುವಿನ ದ್ವಿಪಕ್ಷೀಯ ಮಾತುಕತೆಯ ಫಲಿತಾಂಶವಾಗಿ ಸೆಪ್ಟಂಬರ್‌ 20 ರಿಂದ ಜರ್ಮನಿಯಿಂದ ಬೆಂಗಳೂರಿಗೆ ವಾರಕ್ಕೆ ಮೂರು ವಿಮಾನಗಳು ಹಾರಲಿವೆ.

ಲುಫ್ತಾನ್ಸಾ ಏರ್‌ಲೈನ್ಸ್‌ ಬೆಂಗಳೂರಿಗೆ ವಾರಕ್ಕೆ ಮೂರು ವಿಮಾನಗಳನ್ನು ಕಳುಹಿಸಲಿದೆ. ಈ ವಾಯುಮಾರ್ಗ, ಬೆಂಗಳೂರಿನಿಂದ ಯೂರೋಪಿಗೆ ಹಾಗೂ ಫ್ರಾಂಕ್‌ಪರ್ಟ್‌ ಮೂಲಕ ಉತ್ತರ ಅಮೇರಿಕಾಗೆ ಸಂಪರ್ಕ ಕಲ್ಪಿಸುವ ಏಕೈಕ ವಾಯು ಮಾರ್ಗ ಅನ್ನುವ ಅಗ್ಗಳಿಕೆಯನ್ನು ಹೊಂದಲಿದೆ.

ದೆಹಲಿ, ಚೆನ್ನೈ ಹಾಗೂ ಮುಂಬಯಿಗಳಿಗೆ ಲುಫ್ತಾನ್ಸಾ ಈಗಾಗಲೇ ವಿಮಾನಗಳ ಹಾರಾಟ, ನಡೆಸುತ್ತಿದೆ. ದೆಹಲಿಗೆ ವಾರಕ್ಕೆ 7 ವಿಮಾನಗಳು ಹಾರಿದರೆ, ಮುಂಬಯಿ ಹಾಗೂ ಚೆನ್ನೈಗಳಿಗೆ ತಲಾ 3 ವಿಮಾನಗಳು ಹಾರುತ್ತಿವೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X