Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಶುಭ್ರಾಕಾಶವನ್ನು ಕಾಣುವಿರಿ

ಸಿಗರೇಟು ಕೈ ಸುಟ್ಟದ್ದೆಷ್ಟು ? ಸಕ್ಕರೆಯ ಸಿಹಿ ಕಡಿಮೆಯಾಯಿತಾ ? ಈ ವರ್ಷವಾದರೂ ಕಾರು ಕೊಳ್ಳಲು ಸಾಧ್ಯವಾ ? ಷೇರುಗಳ ಕತೆಯೇನು ? ಇಂಥಾ ಎಲ್ಲಾ ಪ್ರಶ್ನೆ, ಗೊಂದಲಗಳು ಬಜೆಟ್ಟಿಗೆ ಮುಖ ಮಾಡಿಕೊಂಡ ನಮ್ಮಂಥವರಿಗೆ. ಯಾವುದರ ಸೊಲ್ಲಿಗೂ ಕಿವಿ ಕೊಡದೆ ಮುಂದುವರೆಯುವುದು ಹವಾಮಾನದ ಜಮಾನ.

ಹವೆ ಸಾಗುವುದು ತನಗಿಷ್ಟ ಬಂದಂತೆ. ಅದರ ಕರುಣ- ಹುಚ್ಚು ಗಳ ಕೆರಳುವಿಕೆಗೆ ಯಾರೂ ಕಾರಣರಾಗಲು ಸಾಧ್ಯವಿಲ್ಲ . ನಮ್ಮ ಮಾಜಿ ಮಂತ್ರಿ ಜಾನ್‌ನಂತವರು ಏನನ್ನಾದರೂ ಅಪವಾದ ನುಡಿಯುವುದಾದಲ್ಲಿ ... ಆ ಮಾತು ಬೇಡ ಬಿಡಿ. ಅವರೀಗ ಜಾಣರಾಗಿದ್ದಾರೆ. ಜಾಣರು ಮಾತನಾಡುವುದಿಲ್ಲ (ಗಟ್ಟಿಯಾಗಿ).

ತನ್ನಿಚ್ಚೆಯಂತೆಯೇ ನಡೆದಿರುವ ಒಣಹವೆ ರಾಜ್ಯದಲ್ಲಿ ಮುಂದುವರಿದಿತ್ತು . ಉತ್ತರ ಕರ್ನಾಟಕದ ಒಳನಾಡು ಹಾಗೂ ಕರಾವಳಿ ಕರ್ನಾಟಕದ ಕೆಲ ಭಾಗಗಳಲ್ಲಿ ದಿನದ ಕನಿಷ್ಠ ತಾಪಮಾನ ಸ್ವಲ್ಪ ಬಾಡಿತ್ತು . ಉಳಿದಂತೆ ಬಿಸಿಲ ಬೇಗೆ ರಾಜ್ಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು . ದಿನದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಷಿಯಸ್‌ ಬೆಳಗಾವಿ ವಿಮಾನ ನಿಲ್ದಾಣ ಹಾಗೂ ಶಿವಮೊಗ್ಗದಲ್ಲಿ ದಾಖಲಾಗಿತ್ತು .

ಹವಾಮಾನ ಇಲಾಖೆಯ ವರದಿಯಂತೆ ಸದ್ಯಕ್ಕೆ ಹವಾಮಾನದಲ್ಲಿ ವೈಪರೀತ್ಯಗಳು ಕಂಡು ಬರುವ ಸಾಧ್ಯತೆಗಳಿಲ್ಲ . ಒಣಹವೆಯೇ ಮುಂದುವರಿಯುತ್ತದೆ. ಬೆಂಗಳೂರಿನಲ್ಲಿ ಶುಭ್ರಾಕಾಶವನ್ನು ಕಾಣಬಹುದು. ಗುರುವಾರದ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಷಿಯಸ್‌ ಆಸುಪಾಸಿನಲ್ಲಿರುತ್ತದೆ. ನಾಳೆ ಭೇಟಿಯಾಗುವ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+