Get Updates
Get notified of breaking news, exclusive insights, and must-see stories!

ಮೋಟರ್‌ ಸೈಕಲ್‌ ಬೆಲೆ ಇಳಿಕೆ, ಬೆರಳು ಸುಡುವ ಸಿಗರೆಟ್‌

ನವದೆಹಲಿ : ಪ್ರತಿಪಕ್ಷದ ಸದಸ್ಯರ ಸದ್ದು ಗದ್ದಲದ ನಡುವೆ ಕೇಂದ್ರ ವಿತ್ತ ಸಚಿವ ಯಶವಂತ ಸಿನ್ಹ 2001-2002ರ ಸಾಲಿನ ಕೇಂದ್ರ ಬಜೆಟ್‌ ಮಂಡಿಸಿದರು. ಮಾಹಿತಿ ತಂತ್ರಜ್ಞಾನ, ಸೀಮಾ ಶುಲ್ಕ ಕಡಿತ, ಸಿಗರೇಟ್‌, ಪಡಿತರ ಸಕ್ಕರೆ ದುಬಾರಿ, ಗ್ರಾಮೀಣ ಪ್ರದೇಶಗಳಿಗೆ ಇನ್ನಾರು ವರ್ಷದಲ್ಲಿ ವಿದ್ಯುದೀಕರಣ, ಸಮರ್ಪಕ ವಿಮಾ ಯೋಜನೆ ಈ ಬಾರಿಯ ಬಜೆಟ್‌ನ ಕೆಲವು ಮುಖ್ಯಾಂಶಗಳು.

ಕೃಷಿ ದಾಸ್ತಾನಿನಲ್ಲಿ ದಾಖಲೆಯ ಸಂಗ್ರಹ, ಕೃಷಿ ಆರ್ಥಿಕ ಸುಧಾರಣೆಗೆ ಆದ್ಯತೆ, ಖಾಸಗೀಕರಣದ ವೇಗ ಹೆಚ್ಚಳ, ಕೃಷಿ ನ್ಯೂನತೆಯ ನಿವಾರಣೆಗೆ ಹೊಸ ಕೃಷಿ ನೀತಿ. ಈಶಾನ್ಯ ರಾಜ್ಯಗಳಿಗೆ 61 ಕೋಟಿ ರುಪಾಯಿ ನೆರವು. ಆರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಎಲ್ಲ ಗ್ರಾಮೀಣ ಪ್ರದೇಶಗಳಿಗೆ ವಿದ್ಯುತ್‌ ಪೂರೈಕೆಗೆ ಕ್ರಮ ಬಜೆಟ್‌ನಲ್ಲಿ ಪ್ರಸ್ತಾಪವಾದ ವಿಷಯಗಳು. ಅಂತೆಯೇ ವಿದ್ಯುತ್‌ ಕ್ಷೇತ್ರದಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಕಳವಳ. ಉದಾರೀಕರಣ ನೀತಿಯ ಸಮರ್ಥನೆ.

ಆರ್ಥಿಕ ಉದಾರೀಕರಣದ ಮುಂದಿನ ಹಂತದ ಕಾರ್ಯಾಚರಣೆಯ ಸೂಚನೆ. ಖಾಸಗೀಕರಣದ ವೇಗದಲ್ಲಿ ಹೆಚ್ಚಳ, ಔಷಧ ನೀತಿಗೆ ತಿದ್ದುಪಡಿ ಪ್ರಸ್ತಾಪ - ಪ್ರತಿಪಕ್ಷಗಳಿಂದ ಈ ನಿಲುವಿಗೆ ತೀವ್ರ ವಿರೋಧ. ಗ್ರಾಮೀಣ ರಸ್ತೆಗಳ ಯೋಜನೆಗಾಗಿ ಡೀಸೆಲ್‌ ಸೆಸ್‌. ತಂಪು ಪಾನೀಯ, ಕಾರು, ಅಬಕಾರಿ ಸುಂಕದಲ್ಲಿ ಕಡಿತ. ನಕಲಿ ಆಭರಣ, ಸುಗಂಧದ್ರವ್ಯ, ಅಲಂಕಾರಿಕ ವಸ್ತುಗಳ ಬೆಲೆ ಏರಿಕೆ. ಎಲ್ಲಕ್ಕಿಂತ ಮಿಗಿಲಾಗಿ ಮೋಟರ್‌ ಸೈಕಲ್‌ಗಳ ಬೆಲೆ ಇಳಿಕೆ ನಿಶ್ಚಿತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+