ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಜೋಶ್‌ನಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರದಿಂದ ನಂತರ ಪಶ್ಚಾತ್ತಾಪ ಪಡಬೇಕಾದೀತು. ಮಂದ ಬುದ್ಧಿಯ ಮಾತುಗಳಿಗೆ ಬೆಲೆ ಕೊಡಬೇಡಿ. ಹಾಗೇ ಬಣ್ಣದ ಮಾತಿಗೂ.ವೃಷಭ : ಕಾರ್ಯ ಜಯ. ಅಂದ ಮೇಲೆ ಮುಗಿಯಿತು ಬಿಡಿ. ಇವತ್ತಿನ ದಿನವೆಲ್ಲಾ ಬಿರಿkುಯಾಗಿದ್ದರೂ ಆ ಆಯಾಸ ಗೊತ್ತಾಗುವುದಿಲ್ಲ. ಮನೆ ಮಂದಿಯಾಂದಿಗೂ ಚೆನ್ನಾಗಿ ಹರಟೆ ಹೊಡೆಯುತ್ತೀರಿ.
ಮಿಥುನ : ಪ್ರವಚನ, ಭಾಷಣಗಳಿಂದ ಮತ್ತಷ್ಟು ತಲೆ ಕೆಡಿಸಿಕೊಳ್ಳುವುದಕ್ಕಿಂತ ಮೌನವಾಗಿರುವುದು ಒಳ್ಳೆದು. ನಿಮ್ಮ ಗೊಂದಲಗಳನ್ನು ಇನ್ನೊಬ್ಬರಿಗೆ ಹರಡಿಸಿದರೆ ಇರುವ ಕೆಲವೇ ಸ್ನೇಹಿತರೂ ದೂರವಾಗಬಹುದು.
ಕಟಕ : ಇವತ್ತು ನಿಮ್ಮ ದೂರದ ಬಂಧುಗಳು ನಿಮ್ಮ ಮನೆಗೆ ಬರಬಹುದು. ಅಥವಾ ಅವರು ಏನಾದರೂ ಶುಭ ಸುದ್ದಿ ಕಳುಹಿಸಬಹುದು. ಎಂದೋ ಪ್ಲಾನ್ ಹಾಕಿಕೊಂಡು ಕೈ ಬಿಟ್ಟಿರುವ ಯೋಜನೆ ಮತ್ತೆ ನಿಮಗೆ ನೆನಪಾಗುತ್ತದೆ.
ಸಿಂಹ : ತುಂಬಾ ದಿನಗಳಿಂದ ಮರೆತು ಹೋಗಿರುವ ಸ್ನೇಹಿತರ ನೆನಪು ಕಾಡುತ್ತವೆ. ಆದರೆ ನಿಮ್ಮ ಕ್ಷುಲ್ಲಕತನದಿಂದ ಅವರು ರೋಸಿ ಹೋಗಿಬಿಟ್ಟಿದ್ದಾರೆ. ನೆನಪುಗಳು ಸಹಕರಿಸಲೊಲ್ಲವು. ಯಾಕೆ ಸಿನೆಮಾ ಪ್ರೋಗ್ರಾಂ ಹಾಕಿಕೊಂಡು ಸ್ವಲ್ಪ ರಿಲ್ಯಾಕ್ಸ್ ಆಗಬಾರದು.
ಕನ್ಯಾ : ಹುಲ್ಲು ಕಡ್ಡಿಯಿಂದಾಗುವ ಕೆಲಸಕ್ಕೆ ಬೆಟ್ಟ ಕಿತ್ತಿಡುವ ಪ್ರಯತ್ನ ಯಾಕೆ ? ಎಲ್ಲ ಇವತ್ತು ನಿಮ್ಮ ಮೂಡ್‌ನ್ನು ಅವಲಂಬಿಸಿರುತ್ತದೆ.
ತುಲಾ : ದೂರದ ಪ್ರಯಾಣ ಸದ್ಯದಲ್ಲಿಯೇ ನಿಮ್ಮ ಹಣ ಖಾಲಿ ಮಾಡಲಿದೆ. ಹಿರಿಯರು ಹೇಳುವ ವಿಚಾರಗಳ ಕುರಿತು ಅಸಡ್ಡೆ ಬೇಡ. ನೀವು ಮನಸ್ಸು ಮಾಡಿದರೆ ಶುಭ ಕಾರ್ಯಕ್ಕೂ ಇದು ಅನುಕೂಲ ಕಾಲ.
ವೃಶ್ಚಿಕ : ಬೆಟ್ಟದಷ್ಟು ನೋವು ಎದೆಯಲ್ಲಿ ಇಟ್ಟುಕೊಂಡಿರುವುದನ್ನು ಮರೆತು ಮನೆ ಮಂದಿಯಾಂದಿಗೆ ಖುಷಿಯಿಂದ ನಲಿಯುತ್ತೀರಿ. ಉಳಿದಂತೆ ಮನೆಯಲ್ಲಿನ ಮಾತುಕತೆಗಳು ಸಹಜ ತಾನೇ ? ಅದಕ್ಕೆಲ್ಲಾ ಕಿರಿಕಿರಿ ಮಾಡಿಕೊಂಡರೆ ಆಗುತ್ತದಾ ?
ಧನಸ್ಸು : ತಂತಿ ಮೇಲೆ ನಡೆಯುತ್ತಿರುವಷ್ಟು ಜಾಗ್ರತೆಯಿಂದಿರಬೇಕು. ವಿಶ್ವಾಸ, ನಂಬಿಕೆ ಎಲ್ಲ ಸ್ವಲ್ಪ ಸಮಯ ತುಸು ದೂರವಿರಲಿ. ಈ ಸಮಯವನ್ನು ನಿಭಾಯಿಸಿಕೊಂಡು ಬಿಟ್ಟರೆ ಆಮೇಲೆ ಗೆಲ್ಲುತ್ತೀರಿ.
ಮಕರ : ವಾದ ವಿವಾದಗಳು ಪ್ರಯೋಡಜನವಿಲ್ಲ. ಸ್ನೇಹಿತರನ್ನು ಕನ್ವಿನಸ್ ಮಾಡುವ ಹುಚ್ಚು ಸಾಹಸ ಬೇಡ. ನಿಮ್ಮ ಯೋಚನೆಗಳು ಇತರರಿಗೆ ತೊಂದರೆ ಕೊಡಬಹುದು ಅನ್ನುವುದು ನಿಮಗೆ ಸರಿಯಾಗಿ ಮನವರಿಕೆ ಆದ ಮೇಲೆ ಕೂಡ ಯಾಕೆ ಈ ನೋವು ?
ಕುಂಭ : ಪ್ರಶಸ್ತಿ ಸನ್ಮಾನಗಳ ಸುದ್ದಿ ಇವತ್ತು ನಿಮ್ಮನ್ನು ತಲುಪಬಹುದು. ಎಂದೋ ಕೊಟ್ಟಿರುವ ಸಾಲ ಇವತ್ತು ನಿಮ್ಮ ಕೈ ಸೇರುತ್ತದೆ. ಒಂದರ್ಥದಲ್ಲಿ ಧನಲಾಭವೇ.
ಮೀನ : ಆಫೀಸಿನಲ್ಲಿ ಕೈ ತುಂಬಾ ಕೆಲಸಗಳಿರುವುದರಿಂದ ಬೇರೆ ಯೋಚನೆಗಳಿರುವುದಿಲ್ಲ. ಅಲ್ಲದೆ ಸ್ಪರ್ಧೆ, ಪೈಪೋಟಿಗಳಿಗೆ ನಿಮಗೆ ವೇದಿಕೆಗಳು ಸಿಗುವುದು ತುಂಬಾ ಕಷ್ಟ. ಆದ್ದರಿಂದ ನೀವು ನಿಮ್ಮ ಅಧ್ಯಯನದತ್ತ ಹೆಚ್ಚು ಗಮನ ಕೊಡುವುದಕ್ಕಾಗುತ್ತದೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications