ಬೆಳ್ತಂಗಡಿ : ಹತ್ತು ಲಕ್ಷ ರೂ ಮೌಲ್ಯದ ಗಾಂಜಾ ನಾಶ
ಬೆಳ್ತಂಗಡಿ : ಸುಮಾರು ಹತ್ತು ಲಕ್ಷ ರೂಪಾಯಿ ಬೆಲೆಯ ಗಾಂಜಾ ಬೆಳೆಯನ್ನು ಬೆಳ್ತಂಗಡಿ ಸಮೀಪ ತೆರಿಗೆ ವಿಭಾಗ ಮತ್ತು ಅರಣ್ಯ ವಿಭಾಗದ ಅಧಿಕಾರಿಗಳು ಗುರುವಾರ ನಾಶ ಮಾಡಿದ್ದಾರೆ.
ಬೆಳ್ತಂಗಡಿಯಿಂದ 45 ಕಿ.ಮೀ. ದೂರದಲ್ಲಿ ಅಂದರೆ ಬಂಟ್ವಾಳ ಮತ್ತು ಕಡೂರು ರಸ್ತೆಯ ಬಳಿ ಅಕ್ರಮವಾಗಿ ಗಾಂಜಾ ಬೆಳೆಯಲಾಗಿತ್ತು. ರೇಂಜ್ ಫಾರೆಸ್ಟ್ ಆಫೀಸರ್ ಪಿ. ಮಂಜುನಾಥ್ ಶೆಟ್ಟಿ ಮತ್ತು ಅಧೀಕ್ಷಕ ಪಿ. ಎ. ಮೊಹಮ್ಮದ್ ಅವರ ನೇತೃತ್ವದ ಅಧಿಕಾರಿಗಳ ಗುಂಪು 2,650 ಗಾಂಜಾ ಗಿಡಗಳನ್ನು ನಾಶ ಮಾಡಿದೆ. ಸುಮಾರು 50 ಕೆ.ಜಿಯಷ್ಟು ಒಣಗಿದ ಗಾಂಜಾ ಎಲೆಗಳನ್ನೂ ಸುಡಲಾಗಿದೆ.
ಈ ಗಾಂಜಾ ಬೆಳೆಯನ್ನು ಯಾರು ಬೆಳೆಯುತ್ತಿದ್ದರು ಎಂಬುದು ಇನ್ನೂ ಪತ್ತೆಯಾಗಿಲ್ಲದಿರುವುದರಿಂದ ಯಾರನ್ನೂ ಬಂಧಿಸುವುದು ಸಾಧ್ಯವಾಗಿಲ್ಲ.
(ಇನ್ಫೋ ವಾರ್ತೆ)












Click it and Unblock the Notifications