ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಂಚ ಬಟ್ಟೆ ಹಾಕಿಕೊಳ್ಳಲು ಒಪ್ಪಿ ಬಚಾವಾದ ಎಫ್‌ಟಿವಿ

By Staff
|
Google Oneindia Kannada News

*ಬಿ.ಬಿ.ನಾಗಪಾಲ್‌

ನವದೆಹಲಿ : ಅಕ್ಷರಶಃ ಬೆತ್ತಲೆ ಕಾರ್ಯಕ್ರಮಗಳನ್ನು ಅಳಿಸಿಕೊಂಡು, ಹಿತಮಿತವಾದ ದೇಹ ಪ್ರದರ್ಶನ ತೋರಲು ಫ್ಯಾಷನ್‌ ಟಿವಿ ಅಧಿಕಾರಿಗಳು ಒಪ್ಪಿದ್ದು, ಟಿವಿ ಪರದೆಯಿಂದ ಅದು ಎತ್ತಂಗಡಿಯಾಗುವುದರಿಂದ ಬಚಾವಾಗಿದೆ.

ಎಫ್‌ಟಿವಿಯ ಮುಖ್ಯ ನಿರ್ದೇಶಕ ಫ್ರಾಂಕೋಸ್‌ ಥೀಲ್ಲೆಟ್‌ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಈ ಬಗ್ಗೆ ಆಶ್ವಾಸನೆ ಕೊಟ್ಟಿದ್ದು, ಸ್ಥಳೀಯ ಚಾನೆಲ್‌ ಪ್ರಸಾರ ಸಂಯೋಜಕ ಸಂಸ್ಥೆಯಾಂದಿಗೆ ಸದ್ಯದಲ್ಲೇ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಭಾರತದ ಸಂಸ್ಕೃತಿಯ ಇತಿಮಿತಿಗಳನ್ನು ಸಹೃದಯರ ಗುಂಡಿಗೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಪ್ರದರ್ಶಿಸುವುದು ಒಪ್ಪಂದದ ಉದ್ದಿಶ್ಯ.

ಪ್ರಸಾರ ಇಲಾಖೆ ಕಾರ್ಯದರ್ಶಿ ರಾಕೇಶ್‌ ಮೋಹನ್‌ ಅವರನ್ನು ಭೇಟಿಯಾದ ಥೀಲ್ಲೆಟ್‌ 2 ತಾಸುಗಳ ಮಾತುಕತೆ ನಡೆಸಿದರು. ಸಂಸತ್ತಿನ ಸಲಹಾ ಮಂಡಳಿ ಸದಸ್ಯರು ಮುದ್ರಿಸಿಕೊಂಡಿದ್ದ ಎಫ್‌ಟಿವಿಯ ಅಶ್ಲೀಲ ದೃಶ್ಯಗಳ ಕೆಸೆಟ್ಟನ್ನು ರಾಕೇಶ್‌ ತೋರಿಸಿದರು. ಸಂಸತ್‌ ಸದಸ್ಯರು ಇಂಥ ಪೂರ್ಣ ನಗ್ನ ದೃಶ್ಯಗಳ ಪ್ರದರ್ಶನಕ್ಕೆ ವಿರೋಧ ತೋರಿರುವುದನ್ನೂ ವಿವರಿಸಿದರು. ಈಬಗ್ಗೆ ಸಿದ್ಧವಾಗಿರುವ ವರದಿ, ಉಲ್ಲೇಖಗಳನ್ನೂ ಮನದಟ್ಟು ಮಾಡಿಸಿದರು. ಥೀಲ್ಲೆಟ್‌, ಇಲ್ಲಿನ ಜನರ ಭಾವನೆಗಳಿಗೆ ಪೆಟ್ಟು ಕೊಡುವ ಕೆಲಸ ನಾವು ಮಾಡುವುದಿಲ್ಲ ಎಂದು ಹೇಳಿ, ತೀರಾ ಸೊಂಟದ ಕೆಳಗಿನ ಮನರಂಜನೆಯನ್ನು ಎಡಿಟ್‌ ಮಾಡಿ ತೋರುವ ಭರವಸೆ ಕೊಟ್ಟರು.

ಎಫ್‌ಟಿವಿಯನ್ನು ನಿಷೇಧಿಸಬೇಕೆಂಬ ಸಂಸದರ ಒಕ್ಕೊರಲಿನ ನಡುವೆ ಅದರ ಪ್ರದರ್ಶನವನ್ನು ಸಮರ್ಥಿಸಿದ್ದು ಸಿನಿಮಾ ತಾರೆ ಹಾಗೂ ಸಂಸತ್‌ ಸದಸ್ಯೆ ಶಬಾನ ಆಜ್ಮಿ. ಚಾನೆಲ್ಲನ್ನೇ ನಿಷೇಧಿಸುವುದು ವ್ಯಕ್ತಿ ಸ್ವಾತಂತ್ರ್ಯಕ್ಕೇ ಧಕ್ಕೆ ತಂದಂತೆ. ರೂಪದರ್ಶಿಗಳಿಗೂ ವ್ಯಕ್ತಿ ಸ್ವಾತಂತ್ರ್ಯ ಉಂಟು. ಹಾಗಾಗಿ ಚಾನೆಲ್‌ ನಿಷೇಧ ಕೂಡದು ಎಂದು ಶಬಾನ ಹೇಳಿದ್ದರು.

(ಯುಎನ್‌ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X