ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಮತ್ತು ಗುಲ್ಬರ್ಗಾದಲ್ಲಿ ಫೊರೆನ್ಸಿಕ್‌ ಲ್ಯಾಬ್‌ಗಳು

By Staff
|
Google Oneindia Kannada News

ಬಿಜಾಪುರ : ಮೊನ್ನೆಯಷ್ಟೇ ಉತ್ತರ ಕರ್ನಾಟಕದ ಅಭಿವೃದ್ಧಿಯತ್ತ ಸರಕಾರ ಗಮನ ಹರಿಸದೇ ಇದ್ದರೆ ಪ್ರತ್ಯೇಕ ರಾಜ್ಯ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ವೈಜನಾಥ್‌ ಪಾಟೀ-ಲ್‌ ಹೇಳಿರುವ ಬೆನ್ನಿಗೇ ಸರಕಾರ ಗುಲ್ಬರ್ಗಾ ಮತ್ತು ಬೆಳಗಾವಿಗ-ಳಲ್ಲಿ ಫೊರೆನ್ಸಿಕ್‌ ಲ್ಯಾಬ್‌ಗಳನ್ನು ಸ್ಥಾಪಿಸಲು ನಿರ್ಧರಿಸಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸದ್ಯದಲ್ಲಿಯೇ ಇವೆರಡು ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದರು. ಹೈದರಾಬಾದ್‌ ಕರ್ನಾಟಕ ಮತ್ತು ಮುಂಬ-ಯಿ ಕರ್ನಾಟಕ ಪ್ರದೇಶದಲ್ಲಿ ಅಪರಾಧ ಪತ್ತೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಈ ಎರಡು ಘಟಕಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದರು.

ಪ್ರತಿಯಾಂದು ಲ್ಯಾಬ್‌ಗೆ 75 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಗಿದೆ. ಐಜಿಪಿ ಮತ್ತು ಎಸ್‌ಪಿ ನೇತೃತ್ವದಲ್ಲಿ ಪೊಲೀಸ್‌ ಮತ್ತು ಸಾರ್ವಜನಿಕರ ಪ್ರತಿನಿಧಿಗಳನ್ನೊಳಗೊಂಡ ಸಮಿತಿಯನ್ನು ಈಗಾಗಲೇ ರಚಿಸಲಾಗಿದೆ. ಪ್ರತಿಯಾಂದು ಪ್ರಕರಣವನ್ನು ಈ ಸಮಿತಿ ಪರಿಶೀಲಿಸಿ ನಂತರ ತನಿಖೆಯನ್ನು ಮುಂದುವರೆಸಲಾಗುವುದು ಎಂದು ಖರ್ಗೆ ವಿವರಿಸಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X