ತೆಂಗು ಆಭಿವೃದ್ಧಿ ಮಂಡಳಿಯಿಂದ ಗುಜರಾತ್‌ಗೆ1 ಲಕ್ಷ ಎಳೆನೀರು
ಬೆಂಗಳೂರು : ರಾಜ್ಯದ ತೆಂಗು ಅಭಿವೃದ್ಧಿ ಮಂಡಳಿಯು ಗುಜರಾತ್ ಭೂಕಂಪ ಸಂತ್ರಸ್ತರಿಗೆ ಒಂದು ಲಕ್ಷ ಎಳೆ ನೀರು ಪ್ಯಾಕೆಟ್‌ಗಳನ್ನು ಭಾನುವಾರ ಕಳುಹಿಸಿಕೊಟ್ಟಿದೆ.
ಎಳೆನೀರು ಸ್ಯಾಚೆಟ್‌ಗಳನ್ನು ಹೊತ್ತ ಟ್ರಕ್‌ಗೆ ತೋಟಗಾರಿಕಾ ಸಚಿವ ಅಲ್ಲಂ ವೀರಭದ್ರಪ್ಪ ಲಾಲ್‌ಬಾಗಿನಲ್ಲಿ ಹಸಿರು ನಿಶಾನೆ ತೋರಿಸಿದರು. ವಿಟಮಿನ್‌ಯುಕ್ತ , ಸಂಸ್ಕರಿಸಿರುವ 200 ಮಿಲಿಲೀಟರ್ ಎಳೆನೀರು ತುಂಬಿದ ಪ್ಯಾಕೆಟ್‌ಗಳು, ಮತ್ತು 450 ಜಾಮ್ ಬಾಟಲಿಗಳನ್ನು ಗುಜರಾತ್‌ಗೆ ಕಳುಹಿಸಲಾಗಿದೆ. (ಇನ್ಫೋ ವಾರ್ತೆ)












Click it and Unblock the Notifications