Get Updates
Get notified of breaking news, exclusive insights, and must-see stories!

ಪತ್ರಕರ್ತ ವಿ.ಎನ್‌.ಸುಬ್ಬರಾವ್‌ಗೆ ಟಿಳಕ-ಮೊಹರೆ ಪ್ರಶಸ್ತಿ ಪ್ರದಾನ

ಹುಬ್ಬಳ್ಳಿ : ‘ಇಲೆಕ್ಟ್ರಾನಿಕ್‌ ಹಾಗೂ ಇಂಟರ್‌ನೆಟ್‌ ಮಾಧ್ಯಮಗಳ ಜತೆ ಪೈಪೋಟಿ ನಡೆಸಿರುವ ಮುದ್ರಣ ಮಾಧ್ಯಮಕ್ಕೆ ತನ್ನದೇ ಆದ ಛಾಪು ಇದ್ದು, ಅದು ಎಂದಿಗೂ ಸಾಯುವುದಿಲ್ಲ. ಈ ಬಗ್ಗೆ ಯಾವುದೇ ಆತಂಕ ಬೇಡ’- ಸಿನಿಮಾ ಪತ್ರಕರ್ತರಾಗಿ ಗುರ್ತಿಸಿಕೊಂಡು ರಾಜಕೀಯ ಬರಹಗಳ ಮೂಲಕವೂ ಹೆಸರು ಮಾಡಿದ ಹಿರಿಯ ಪತ್ರಕರ್ತ ವಿ.ಎನ್‌.ಸುಬ್ಬರಾವ್‌, ‘ಟಿಳಕ- ಮೊಹರೆ’ ಪ್ರಶಸ್ತಿ ಸ್ವೀಕರಿಸಿದ ನಂತರ ಭಾನುವಾರ ಆಡಿದ ಮಾತುಗಳಿವು.

ತಮ್ಮನ್ನು ರಾಜ್ಯದ ಜನತೆಗೆ ಪರಿಚಯಿಸಿದ ಸಂಯುಕ್ತ ಕರ್ನಾಟಕ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಕೆ.ಶಾಮರಾಯರು ಹಾಗೂ ಸಿನಿಮಾ ಪತ್ರಕರ್ತನೆಂಬ ಹಣೆಪಟ್ಟಿಯ ನಡುವೆಯೂ ರಾಜಕೀಯ ಬರಹಗಳನ್ನು ಬರೆಯಲು ಪ್ರೇರೇಪಿಸಿದ ಟಿ.ಎಸ್‌.ರಾಮಚಂದ್ರರಾಯರನ್ನು ಸುಬ್ಬರಾವ್‌ ಸ್ಮರಿಸಿಕೊಂಡರು. ಅವರು ಪಡೆದ ಈ ಪ್ರಶಸ್ತಿಗೆ ಕಾರಣವಾಗಿರುವ ಇಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.

ಮುಖ್ಯ ಅತಿಥಿ ಭಾಷಣ ಮಾಡಿದ ಮಂಗಳೂರು ವಿವಿ ನಿವೃತ್ತ ಕುಲಪತಿ ಡಾ.ಎಂ.ಐ.ಸವದತ್ತಿ, ಸಮಾಜದಲ್ಲಿ ಒಳಿತನ್ನು ಹೆಕ್ಕುವ ಪ್ರಯತ್ನಗಳು ಕಡಿಮೆಯಾಗುತ್ತಿರುವ ಈವತ್ತಿನ ಸಂದರ್ಭದಲ್ಲೂ ಒಳ್ಳೆಯದನ್ನು ಗುರ್ತಿಸುವ ಕೆಲವರಾದರೂ ಇದ್ದಾರಲ್ಲ ಎಂಬುದೇ ಸಮಾಧಾನ. ಪತ್ರಕರ್ತರು ಹಾಗೂ ನ್ಯಾಯಾಂಗ ಜನತಂತ್ರದ ವ್ಯವಸ್ಥೆಯನ್ನು ಉಳಿಸಲು ಹೋರಾಡುತ್ತಿವೆ ಎಂದರು.

ನ್ಯಾಯಾಲಯ ಕೊಡುವ ತೀರ್ಪನ್ನು ವಿಮರ್ಶಿಸಿ, ಜನರಿಗೆ ತಲುಪಿಸುವ ಮತ್ತೊಬ್ಬ ನ್ಯಾಯಾಧೀಶನಾಗಿ ಪತ್ರಿಕೆ ಕಾರ್ಯ ನಿರ್ವಹಿಸುತ್ತಿದೆ. ಜನರ ಅಭಿಪ್ರಾಯಗಳಿಗೆ ಹಿಡಿದ ಕನ್ನಡಿ ಮಾಧ್ಯಮ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಕೆ.ಶ್ರೀಧರ್‌ ರಾವ್‌ ಹೇಳಿದರು.

ಡಾ.ಪಾಟೀಲ ಪುಟ್ಟಪ್ಪ, ಎಂ.ಎಚ್‌.ಕೌಜಲಗಿ, ಹಿರಿಯ ನ್ಯಾಯವಾದಿ ಜಿ.ಎಂ.ಪಾಟೀಲ ಮೊದಲಾದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+