Get Updates
Get notified of breaking news, exclusive insights, and must-see stories!

ಭೂಗತಲೋಕ- ಬಾಲಿವುಡ್‌ಗೆ 15 ವರ್ಷಗಳ ನಂಟು- ಕಮಲ್‌

*ಸಾನು ಜಾರ್ಜ್‌

ತಿರುವನಂತಪುರ : ಬಾಲಿವುಡ್‌ ನಿರ್ಮಾಪಕರು ಭೂಗತ ದೊರೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಅನ್ನೋ ಕಾರಣಕ್ಕಾಗೇ ನಾನು ಹಿಂದಿ ಚಿತ್ರಗಳಿಂದ ದೂರ ಸರಿದೆ. ಹಿರಿಯ ಬಹುಭಾಷಾ ನಟ ಕಮಲ ಹಾಸನ್‌ ಶುಕ್ರವಾರ ನಗರಕ್ಕೆ ಕೊಟ್ಟ ಚಿಕ್ಕ ಭೇಟಿಯ ವೇಳೆ ಹೇಳಿದ ಮಾತಿದು.

ಇದು ಇಂದು ನಿನ್ನೆಯದಲ್ಲ. 15 ವರ್ಷಗಳಿಂದ ಬಾಲಿವುಡ್‌ ಹಾಗೂ ಭೂಗತ ಲೋಕ, ಒಂದಕ್ಕೊಂದು ಅಂಟಿಕೊಂಡಿವೆ. ಇತ್ತೀಚೆಗೆ ಹೃತಿಕ್‌ ತಂದೆ ರಾಕೇಶ್‌ ರೋಷನ್‌, ನಟ ಹಾಗೂ ನಿರ್ಮಾಪಕ ಅಜಯ್‌ ದೇವಗನ್‌ ಅವರಿಗೆ ಬಂದ ಕೊಲೆ ಬೆದರಿಕೆಯ ಹಿನ್ನೆಲೆಯಲ್ಲಿ ಕಮಲ ಹಾಸನ್‌ ಐಎಎನ್‌ಎಸ್‌ಗೆ ಈ ಮಾತನ್ನು ತಿಳಿಸಿದರು.

ಈ ವಿಷಯದಿಂದ ತುಸು ಹೊರಗೆಳೆದು ಹಿಂದಿ ಸಿನಿಮಾ ಗುಣ ಮಟ್ಟದ ಬಗೆಗೆ ಕೇಳಿದಾಗ, ‘ಕಸುಬು ಗೊತ್ತಿಲ್ಲದ ಎಷ್ಟೋ ಜನ ಅಲ್ಲಿ ತೂರಿಕೊಳ್ಳುತ್ತಿದ್ದಾರೆ. ಬಾಲಿವುಡ್‌ನಲ್ಲಿ ಪ್ರತಿಭೆಗಳಿಗಿಂತ ಹೀಗೆ ಎಲ್ಲಿಂದಲೋ ತೂರಿಕೊಳ್ಳುವವರೇ ಹೆಚ್ಚಾಗುತ್ತಿರುವ ಕಾರಣ ಚಿತ್ರಗಳ ಗುಣ ಮಟ್ಟ ದಿನೇ ದಿನೇ ಕುಸಿಯುತ್ತಿದೆ’ ಎಂದರು.

(ಐಎಎನ್‌ಎಸ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+