ಹಾಸನ: ದೇಶಕ್ಕೇ ಮಾದರಿ ಈ ಅಂಚೆ ನೌಕರರು
ಹಾಸನ : ಡಿಸೆಂಬರ್ 5ನೇ ತಾರೀಖಿನಿಂದಲೂ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪಟ್ಟು ಹಿಡಿದು ಅನಿರ್ದಿಷ್ಟಕಾಲದ ಮುಷ್ಕರ ಹೂಡಿದ್ದ ಅಂಚೆ ನೌಕರರು ಮತ್ತೆ ಕೆಲಸಕ್ಕೆ ಹಾಜರಾಗಿ ವಾರವೇ ಕಳೆದಿದೆ. ಆದರೂ, 15ಕ್ಕೂ ಹೆಚ್ಚು ದಿನಗಳ ಕಾಲ ಬಟವಾಡೆ ಆಗದೆ ಉಳಿದಿದ್ದ ಪತ್ರಗಳ ರಾಶಿ ಕಡಿಮೆ ಏನಿಲ್ಲ.
ರಾಜ್ಯವೂ ಸೇರಿದಂತೆ ರಾಷ್ಟ್ರದ ಅನೇಕ ಕಡೆಗಳಲ್ಲಿ ಇನ್ನೂ ಪತ್ರಗಳ ವಿಂಗಡಣೆ, ವಿತರಣೆ ಮಾಮೂಲಿ ಸ್ಥಿತಿಗೆ ಮರಳಿಲ್ಲ. ಆದರೆ, ಹಾಸನ ನಗರದ ಅಂಚೆ ನೌಕರರು, ಕ್ರಿಸ್ಮಸ್ ಪ್ರಯುಕ್ತ ಸರ್ಕಾರಿ ರಜೆ ದಿನವಾಗಿದ್ದ ಸೋಮವಾರ ಸ್ವಯಂ ಪ್ರೇರಿತರಾಗಿ ಕೆಲಸಕ್ಕೆ ಹಾಜರಾಗಿ 13ಸಾವಿರಕ್ಕೂ ಹೆಚ್ಚು ಅಂಚೆ ಪತ್ರಗಳನ್ನು ವಿಂಗಡಿಸಿ, ವಿತರಣೆ ಮಾಡಿ, ದೇಶಕ್ಕೇ ಮಾದರಿಯಾಗಿದ್ದಾರೆ.
ರಿಜಿಸ್ಟರ್ಡ್ ಪತ್ರ, ಮನಿಯಾರ್ಡರ್, ಸ್ಪೀಡ್ ಪೋಸ್ಟ್ಗಳನ್ನು ಹೊರತು ಪಡಿಸಿ, ಸಾಮಾನ್ಯ ಅಂಚೆ ಪತ್ರಗಳನ್ನೂ ವಿಂಗಡಿಸಿ, ವಿತರಿಸಲಾಗಿದೆ ಎಂದು ಇಲ್ಲಿನ ಅಂಚೆ ನೌಕರರ ಸಂಘದ ಪ್ರಕಟಣೆ ತಿಳಿಸಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ವಿಶೇಷ ಭತ್ಯೆ ಬಯಸದೆ ಸ್ವಯಂ ಪ್ರೇರಿತರಾಗಿ, ಜನಸೇವೆ ಮಾಡಿರುವ ಹಾಸನ ಅಂಚೆ ನೌಕರರ ಈ ಜನಪರ ಕಾಳಜಿ ನಿಜಕ್ಕೂ ಪ್ರಶಂಸನಾರ್ಹ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications