ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓ ಕಲಕತ್ತ ! ಇನ್ನು ಮುಂದೆ ನೀನು ಕೋಲ್‌ಕಟ

By Staff
|
Google Oneindia Kannada News

ನವದೆಹಲಿ : ಸ್ಥಳನಾಮಗಳನ್ನು ಬದಲಾಯಿಸುವ ಟ್ರೆಂಡ್‌ ಇದೀಗ ಜೋರು ಚಾಲ್ತಿಯಲ್ಲಿದೆ. ಇದೊಂದು ಜಾಗತಿಕ ಕಾಯಿಲೆ ಎಂದು ಕರೆದರೂ ಅಡ್ಡಿಯಿಲ್ಲ. ಭಾರತದಲ್ಲಿ ಈ ಟ್ರೆಂಡ್‌ ವಿಚಾರಾತ್ಮಕವಾಗಿರುವುದು ಬಿಟ್ಟು ಭಾವನಾತ್ಮಕವಾಗಿ ಬೆಳೆಯುತ್ತಿರುವುದು ಇನ್ನೊಂದು ಸೋಜಿಗ. ಇವತ್ತಿನ ಸುದ್ದಿ ಹೇಳುವುದಕ್ಕೆ ಮುಂಚೆ ನಿಮಗೊಂದು ವಿಚಾರ ಹೇಳಬೇಕೆನಿಸುತ್ತಿದೆ. ಕರ್ನಾಟಕದಲ್ಲಿ ಎಷ್ಟೋ ಊರು, ರಸ್ತೆಗಳ ಹೆಸರು ನಿರಂತರ ಬದಲಾಗುತ್ತಲೇ ಇವೆ. ಇವತ್ತು ರಾಜೀವಗಾಂಧೀ ರಸ್ತೆ ಇದ್ದದ್ದು ನಾಳೆ ಇಂದಿರಾಗಾಂದೀ ರಸ್ತೆ ಆಗಿಬಿಟ್ಟಿರುತ್ತದೆ. ಇಲ್ಲಿ ಯಾರೂ ಶಾಶ್ವತ ಅಲ್ಲ ಎನ್ನುವ ಸೂಚನೆ ಇದಾಗಿರಬಹುದೇ ? ನಗೆಯು ಬರುತಿದೆ.

ಅದೇನೇ ಇರಲಿ. ವಿಧಾನ ವೀಧಿ ಅಂಥ ಒಳ್ಳೆ, ಅರ್ಥಪೂರ್ಣ, ಗುಣವಾಚಕ ನಾಮಧೇಯವನ್ನು ಅಳಿಸಿ ಅಂಬೇಡ್ಕರ್‌ ರಸ್ತೆ ಎಂದು ಬದಲಾಯಿಸಿದಾಗ ಪೇಚು ಪಟ್ಟುಕೊಂಡವರಲ್ಲಿ ನೀವೂ ಒಬ್ಬರಾಗಿರಬಹುದು. ಯಾರನ್ನೋ ಓಲೈಸುವ ನಿಮಿತ್ತ ನಮ್ಮ ಮೈಮನಗಳ ಸುಳಿಯಲ್ಲಿ ಅವಿಭಾಜ್ಯ ಅಂಗವೇ ಆಗಿ ನೆಲೆಸಿರುವ ಪ್ರೀತಿಯ ಹೆಸರುಗಳನ್ನು ಬದಲಾಯಿಕೊಳ್ಳುತ್ತಾ ಹೋಗುವುದು ಮುಜಗರ ತರಿಸುತ್ತದೆ. ನಮ್ಮ ಹೆಸರೇ ಬದಲಾದ ಹಾಗೆ ಭಾಸವಾಗುತ್ತದೆ.

ಈ ಹೊತ್ತು ಬದಲಾಗುತ್ತಿರುವ ಊರು, ಕೇರಿ, ರಾಜ್ಯ, ರಾಷ್ಟ್ರಗಳ ಹೆಸರಿನ ಸಾಲಿಗೆ ಈಗ ಕಲಕತ್ತ ಸೇರ್ಪಡೆಯಾಗುತ್ತಿದೆ. ರಾಜ್ಯದ ಹೆಸರನ್ನು ಕಲಕತ್ತದಿಂದ ಕೋಲ್‌ಕಟ ಎಂದು ಬದಲಾಯಿಸಬೇಕೆಂಬ ಆ ರಾಜ್ಯದ ಮನವಿಗೆ ಕೇಂದ್ರ ಸರಕಾರ ಶನಿವಾರ ಹಸಿರು ನಿಶಾನೆ ತೋರಿಸಿದೆ. ಕೂಲಂಕಷವಾಗಿ ಪರಿಶೀಲಿಸಿದ ನಂತರ ಹೆಸರನ್ನು ಬದಲಾಯಿಸಬೇಕೆಂಬ ರಾಜ್ಯದ ಮನವಿಯನ್ನು ಕೇಂದ್ರ ಒಪ್ಪಿಕೊಂಡಿತು ಎಂದು ಅಧಿಕೃತ ಪ್ರಕಟಣೆ ಹೆಳುತ್ತಿದೆ.

ಬಾಂಬೆ ಮತ್ತು ಮದರಾಸು ಮಹಾನಗರಗಳ ಹೆಸರು ಕ್ರಮವಾಗಿ ಮುಂಬೈ ಮತ್ತು ಚೆನ್ನೈ ಎಂದು ಈಗಾಗಲೇ ಬದಲಾಗಿದೆ. ಹೆಸರನ್ನು ಬದಲಿಸಿಕೊಳ್ಳುತ್ತಿರುವ ಮೂರನೇ ಮಹಾನಗರದ ಸಾಲಿಗೆ ಇದೀಗ ಕಲಕತ್ತ , ಸಾರಿ ಕೋಲ್‌ಕಟ ಸೇರುತ್ತಿದೆ.

( ಇನ್‌ಫೋ ವಾರ್ತೆ )
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X