‘ಮ್ಯಾಚ್‌ಫಿಕ್ಸರ್’ಗಳಿಗೆ ಶಿಕ್ಷೆ : ಬಿಸಿಸಿಐ ಸದಸ್ಯರಲ್ಲಿ ಭಿನ್ನಾಭಿಪ್ರಾಯ
ಕಲ್ಕತ್ತ : ಬಿಸಿಸಿಐ ವಿಶೇಷ ಆಯುಕ್ತ ಮಾಧವನ್ ವರದಿ ಸಿದ್ಧವಾಗಿ ವಾರವಾಗುತ್ತಾ ಬಂತು. ಇಷ್ಟಾದರೂ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಐವರು ಕ್ರಿಕೆಟಿಗರಿಗೆ ಯಾವ ಶಿಕ್ಷೆ ಕೊಡಬೇಕೆಂಬುದನ್ನು ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ.
ದೆಹಲಿಯಲ್ಲೊಂದು, ಕಲ್ಕತ್ತಾದಲ್ಲೊಂದು ಸಭೆ ನಡೆಸಿರುವ ಬಿಸಿಸಿಐ ಮತ್ತೆ ಚೆನ್ನೈನಲ್ಲಿ ಇನ್ನೊಂದು ಸಭೆ ನಡೆಸಲಿದ್ದು, ತಪ್ಪಿತಸ್ಥರೆನ್ನಲಾಗಿರುವ ಕ್ರಿಕೆಟಿಗರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಮಂಗಳವಾರ ನಿರ್ಧರಿಸುವ ಸಂಭವವಿದೆ.
ಬುಧವಾರ ಕಲ್ಕತ್ತಾದಲ್ಲಿ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಸಿಐ ಅಧ್ಯಕ್ಷ ಎ.ಸಿ.ಮುತ್ತಯ್ಯ, ಆರೋಪಿಗಳಿಗೆ ಯಾವ ಶಿಕ್ಷೆ ಕೊಡಬೇಕೆಂಬುದರ ಬಗೆಗೆ ಚರ್ಚಿಸಿದ್ದೇವೆ. ಅಂತಿಮ ನಿರ್ಣಯವನ್ನು ನಾನೂ ಸೇರಿದಂತೆ ಬಿಸಿಸಿಐನ ಮೂವರು ಸದಸ್ಯರ ಶಿಸ್ತು ಸಮಿತಿ ಕೈಗೊಳ್ಳಲಿದೆ ಎಂದರು.
ಶಿಸ್ತು ಸಮಿತಿಯಲ್ಲಿರುವ ಉಳಿದಿಬ್ಬರು ಸದಸ್ಯರು ಕಮಲ್ ಮೊರಾರ್ಕ ಹಾಗೂ ರಾಮ್ ಪ್ರಸಾದ್. ನಾವು ಕ್ರಿಕೆಟಿಗರು ಮಾಡಿರುವ ತಪ್ಪನ್ನಷ್ಟೇ ಲೆಕ್ಕಕ್ಕಿಟ್ಟುಕೊಳ್ಳದೆ ಕ್ರಿಕೆಟ್‌ಗೆ ಅವರು ಕೊಟ್ಟಿರುವ ಕಾಣಿಕೆಯನ್ನೂ ಗಮನದಲ್ಲಿಟ್ಟುಕೊಂಡು ಶಿಕ್ಷೆ ವಿಧಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ತೀರಾ ನಿರ್ದಾಕ್ಷಿಣ್ಯವಾಗಿ ವರ್ತಿಸುವುದು ತರವಲ್ಲ ಎಂಬ ತೀರ್ಮಾನಕ್ಕೆ ನಾವು ಬಂದಿದ್ದೇವೆ ಎಂದು ಅವರು ಹೇಳಿದರು.
ಬುಧವಾರದ ಸಭೆಯಲ್ಲಿ ಐಸಿಸಿಯ ಮಾಜಿ ಅಧ್ಯಕ್ಷ ಜಗನ್ಮೋಹನ್ ದಾಲ್ಮಿಯಾ, ಬಿಸಿಸಿಐ ವಿಶೇಷ ಆಯುಕ್ತ ಕೆ. ಮಾಧವನ್, ಬಿಸಿಸಿಐ ಮಾಜಿ ಅಧ್ಯಕ್ಷ ರಾಜ್‌ಸಿಂಗ್ ಡುಂಗಾರ್‌ಪುರ್ ಸೇರಿದಂತೆ ಅನೇಕ ಸದಸ್ಯರು ಭಾಗವಹಿಸಿದ್ದರು. ಸಭೆ ಸುಮಾರು 5 ಗಂಟೆಗಳ ಕಾಲ ನಡೆಯಿತು. ಶಿಕ್ಷೆ ನೀಡುವ ವಿಷಯವಾಗಿ ಬಿಸಿಸಿಐ ಸದಸ್ಯರಲ್ಲಿ ಭಿನ್ನಾಭಿಪ್ರಾಯಗಳು ಕೇಳಿ ಬಂದವು. ಅಸಮಾಧಾನಿತರಾಗೋ ಏನೋ ಮಾಧವನ್ ಸಭೆಯ ನಡುವೆಯೇ ಹೊರ ನಡೆದರು.
ಈಗ ಅಜರ್ ವಿರುದ್ಧ ಬಲವಾದ ಸೊಲ್ಲುಗಳು ಕೇಳಿಬರುತ್ತಿವೆ. ಆದರೂ ಅಜರ್ ವಿರುದ್ಧ ಭಾರತೀಯ ದಂಡ ಸಂಹಿತೆಯಡಿಯಲ್ಲಿ ಕಾನೂನು ಕ್ರಮ ಜರುಗಿಸುವಂಥ ಪುರಾವೆಗಳನ್ನು ಸಿಬಿಐ ಕೂಡ ಒದಗಿಸಿಲ್ಲ. ಈ ನಿಟ್ಟಿನಲ್ಲಿ ಬಿಸಿಸಿಐ ಮ್ಯಾಚ್‌ಫಿಕ್ಸರ್‌ಗಳಿಗೆ ಯಾವ ಶಿಕ್ಷೆ ಕೊಡಬೇಕೆಂಬುದನ್ನು ಪಕ್ಕಾ ನಿರ್ಧರಿಸಲು ವಿಳಂಬವಾಗುತ್ತಿದೆ.(ಇನ್ಫೋ ವಾರ್ತೆ)
-
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್ -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ












Click it and Unblock the Notifications