ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ :ಇಂದು ನಿಮ್ಮ ಬದುಕಿನ ತಂಗಾಳಿಯಾಗಿ ನಿಮಗಿಷ್ಟವಿರುವವರು ನಿಮ್ಮನ್ನು ಭೇಟಿಯಾಗುತ್ತಾರೆ. ನಿಮ್ಮ ಅದೃಷ್ಟದ ದಿನ . ಜೋಪಾನವಾಗಿ ಬಳಸಿಕೊಳ್ಳಿ.ವೃಷಭ : ಎಂದೋ ಹಾಕಿದ ಬಂಡವಾಳ ಕೈ ಸೇರಬಹುದು. ಅದೇನೋ ಪ್ರೋಗ್ರಾಂ ಹಾಕಿಕೊಂಡಿದ್ದೀರಲ್ಲ , ಅದನ್ನು ಕೊಳೆಸಬೇಡಿ. ಆರಂಭಿಸಲು ಇದು ಸಕಾಲ.
ಮಿಥುನ : ಇಂದು ಧನಲಕ್ಷ್ಮಿ ನಿಮ್ಮತ್ತ ನಡೆದು ಬರಲಿದ್ದಾಳೆ. ದಾಕ್ಷಿಣ್ಯ, ಕಟ್ಟು ಪಾಡುಗಳಿಗೆ ಹೆಚ್ಚು ಒತ್ತು ಕೊಟ್ಟರೆ ಸೋಲುತ್ತೀರಿ. ಸ್ವಂತಿಕೆಯನ್ನು ಉಪಯೋಗಿಸಿಕೊಳ್ಳಬೇಕು.
ಕಟಕ : ಎಂಥ ಸುದಿನ ಇದು ಗೊತ್ತಾ. ಆತ್ಮ ತೃಪ್ತಿಗಿಂತ ಬೇರೇನು ಬೇಕು ? ಮನೆ ಮಠ ಅಂತ ತಲೆ ಕೆಡಿಸಿಕೊಳ್ಳುವುದು ನಿಮಗಿಷ್ಟ ತಾನೇ... ದಿನ ಪೂರ್ತಿ ಆ ಯೋಗ ನಿಮ್ಮ ಮುಂದಿದೆ.
ಸಿಂಹ : ಮಿತ್ರ ವಿಯೋಗ. ಬೆಚ್ಚನೆಯಾಗಿ, ಹಿತವಾಗಿ ಸಲಹುತ್ತಿದ್ದ, ಪ್ರಾಮಾಣಿಕವಾಗಿ ಪ್ರೀತಿಸುತ್ತಿದ್ದ ನಿಮ್ಮ ಸ್ನೇಹಿತ ದೂರವಾಗಲಿದ್ದಾನೆ.
ಕನ್ಯಾ : ಸಮಸ್ಯೆಗಳ ರಾಶಿ ನಿಮ್ಮ ಮುಂದೆ ಕೂತಿದೆ ಅಂತ ತಲೆ ಬಿಸಿ ಬೇಡ. ಸಮಸ್ಯೆಯನ್ನು ಅಗೆದು ತೆಗೆಯಿರಿ. ಅಲ್ಲಿ ಚಿನ್ನವಿದೆ. ಪ್ರೇಯಸಿಯನ್ನು ಅಷ್ಟೊಂದು ಸದರ ಮಾಡುವುದೇ, ಒಳ್ಳೆದಲ್ಲ.
ತುಲಾ : ಇವತ್ತು ದಾನಿಯಾಗುವ ಭಾಗ್ಯವಿದೆ. ಆ ಜೀವ ಸಾಯುವ ವರೆಗೆ ನಿಮ್ಮ ಸ್ಮರಿಸಿಕೊಳ್ಳುತ್ತದೆ. ಕಿಸೆ ಖಾಲಿಯಾಯಿತೆಂದು ಸಿಡುಕು ಸಲ್ಲ. ಎಷ್ಟು ಬೇಲ್‌ಪುರಿ ಖಾಲಿ ಮಾಡಿಲ್ಲ, ಸಿಗರೇಟುಗಳನ್ನು ಸುಟ್ಟಿಲ್ಲ ನೀವು ?
ವೃಶ್ಚಿಕ : ಕೆಲಸಗಳು ಗುಡ್ಡೆ ಬಿದ್ದಿವೆ. ಯಾರದಾದ್ರೂ ಸಹಾಯ ಸಿಕ್ಕರೆ, ಖಂಡಿತಾ ಗೆಲ್ಲುತ್ತೀರಿ. ತಾಳ್ಮೆ , ಗೆಲುವನ್ನು ತನ್ನ ಪಕ್ಕ ಕೂರಿಸಿಕೊಂಡಿದೆ.
ಧನಸ್ಸು : ಇವತ್ತಿನ ಸಂಜೆ ನಿಮ್ಮದಲ್ಲ. ಪ್ರೇಯಸಿಯದ್ದು. ಅವಳ ಸಂತೋಷ ನಿಮ್ಮ ಮುದಗೊಳಿಸದೇ. ಸೋ ಡೋಂಟ್ ವರಿ.
ಮಕರ : ಈ ಖಾಲಿತನದಿಂದ ಏನೂ ಆಗುವುದಿಲ್ಲ. ಕೊಡವಿ ಎದ್ದು ಬಿಡಿ. ನಡೆಯಲು ನಿಮಗೆ ಬೇರೆಯವರು ಹೇಳಿಕೊಡಬೇಕೇ ?
ಕುಂಭ : ಇವತ್ತು ನಡೆಯುವ ಬದಲಾವಣೆಗಳು ಕ್ಷಣ ನಿಮ್ಮ ಧೃತಿ ಗೆಡಿಸಿದರೂ, ಆಗೋದೆಲ್ಲಾ ಒಳ್ಳೆಯದಕ್ಕೇ. ಜಗಳ ಕಾದಿದೆ. ಭಯ ಬೇಡ.
ಮೀನ : ಕೆಲಸವಾಗಬೇಕಿದ್ದರೆ ಸ್ವಲ್ಪ ಗಟ್ಟಿ ಮನಸ್ಸಿರಬೇಕು. ಪರಿಸ್ಥಿತಿಯ ಲಾಭ ಪಡೆಯುವ ಬುದ್ಧಿ ಇಲ್ಲಿ ನಡೆಯುವುದಿಲ್ಲ. ನೇರ ವ್ಯಕ್ತಿತ್ವವಿದ್ದರೆ ಬದುಕುತ್ತೀರಿ. ಜಗಜ್ಜಾಹೀರಾಗಿರುವ ವಿಷಯವನ್ನು ಮುಚ್ಚಿಟ್ಟಿದ್ದೇನೆ ಎಂಬ ಜಂಭ ಬೇಡ.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications