ಕೋಲಾರ ಚಿನ್ನದ ಗಣಿ ಉಳಿಸಲು ವೇದಿಕೆ ಒತ್ತಾಯ

ಕೋಲಾರ : ನೂರಕ್ಕೂ ಹೆಚ್ಚು ವರ್ಷಗಳಷ್ಟು ಹಳೆಯದಾದ ನಾಡಿನ ಹೆಮ್ಮೆಯ ಚಿನ್ನದ ಗಣಿಯನ್ನು ಮುಚ್ಚುವ ನಿರ್ಧಾರವನ್ನು ಪುನರ್ವಿಮರ್ಶಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಲು ಗಣಿಯ ನೌಕರರು ಹೊಸ ವೇದಿಕೆಯನ್ನು ಹುಟ್ಟು ಹಾಕಿದ್ದಾರೆ.

ಈ ವೇದಿಕೆಯ ನೇತೃತ್ವವನ್ನು ಹೊತ್ತಿರುವ ಶಾಸಕ ಭಕ್ತವತ್ಸಲಂ ಅವರು, ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಪುನವಿಮರ್ಶಿಸುವಂತೆ ಪ್ರಧಾನಿ ಹಾಗೂ ಕೇಂದ್ರ ಸಚಿವರ ಮೇಲೆ ಒತ್ತಡ ಹೇರಲು ನಿಯೋಗವೊಂದನ್ನು ದೆಹಲಿಗೆ ಕೊಂಡೊಯ್ಯಲಿದ್ದಾರೆ.

ಒಂದೊಮ್ಮೆ ಕೇಂದ್ರ ಸರಕಾರ ತನ್ನ ನಿರ್ಧಾರವನ್ನು ಬದಲಿಸಲು ಸಮ್ಮತಿಸದಿದ್ದಲ್ಲಿ, ಹೋರಾಟವನ್ನು ತೀವ್ರಗೊಳಿಸಲೂ ವೇದಿಕೆ ನಿರ್ಧರಿಸಿದೆ ಎಂದು ವೇದಿಕೆಯ ಸಂಚಾಲಕರಾದ ಮಾಜಿ ಶಾಸಕ ಎಸ್‌. ರಾಜಗೋಪಾಲ್‌ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+