ಫೆ.1,2 : ವಾಷಿಂಗ್ಟನ್‌ನಲ್ಲಿ ಇಂಡಿಯಾ ಇನ್‌ವೆಸ್ಟ್‌ಮೆಂಟ್ ಸ್ಟ್ರಾಟಜೀಸ್ 2001
*ಇಳಾ ದತ್
ನ್ಯೂಯಾರ್ಕ್ : ಬರುವ ವರ್ಷ ಫೆಬ್ರವರಿ 1 ಹಾಗೂ 2 ರಂದು ವಾಷಿಂಗ್ಟನ್ ಡಿಸಿಯಲ್ಲೊಂದು, ಭಾರತದ ಮಾಹಿತಿ ತಂತ್ರಜ್ಞಾನಕ್ಷೇತ್ರದಲ್ಲಿ ಎಷ್ಟು ಹಣ ಹೂಡಬೇಕೆಂದು ತೀರ್ಮಾನಿಸುವ ಸಮ್ಮೇಳನ ‘ಇಂಡಿಯಾ ಇನ್‌ವೆಸ್ಟ್‌ಮೆಂಟ್ ಸ್ಟ್ರಾಟಜೀಸ್ 2001’ ನಡೆಯಲಿದೆ. ಸುಮಾರು 500 ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಕಂಪನಿಗಳ ಹಣ ಹೂಡಿಕೆ ತಂತ್ರ ಈ ಸಮ್ಮೇಳನದ ಚರ್ಚೆಯ ವಸ್ತು.
ಸಮ್ಮೇಳನದಲ್ಲಿ ಕೇವಲ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಷ್ಟೇ ಅಲ್ಲದೆ ದೂರಸಂಪರ್ಕ ಕ್ಷೇತ್ರದಲ್ಲೂ ಹಣ ಹೂಡುವ ಬಗೆಗೆ ಕಂಪನಿಗಳು ಚರ್ಚಿಸಲಿವೆ. ಇಂಟರ್ ನ್ಯಾಷನಲ್ ಎಡ್ಜ್, ಎಲ್‌ಎಲ್‌ಸಿ, ಎ ರಾಕ್‌ವಿಲ್ಲೆ, ಮೇರಿಲ್ಯಾಂಡ್ ಮೂಲದ ಮಾರ್ಕೆಟಿಂಗ್, ಪಾಲಿಸಿ ರಿಸರ್ಚ್ ಮತ್ತು ಕನ್ಸಲ್ಟಿಂಗ್ ಕಂಪನಿಗಳು ಸಮ್ಮೇಳನವನ್ನು ಪ್ರಾಯೋಜಿಸಲಿವೆ.
‘ಭಾರತ ಹಿಂದಿನ ಮಡಿವಂತಿಕೆ ಬಿಟ್ಟಿದೆ. ತನ್ನಲ್ಲಿನ ಅವಕಾಶಗಳಿಗೆ ವೀದೇಶೀ ಕಂಪನಿಗಳಿಗೆ, ಅದರಲ್ಲೂ ವಿಶೇಷವಾಗಿ ಅಮೆರಿಕದ ಕಂಪನಿಗಳಿಗೆ ಕಾರ್ಪೆಟ್ ಹಾಸಿದೆ. ಹಿಂದಿನ ನಿಯಂತ್ರಣಗಳು ಈಗ ಮಾಯವಾಗಿವೆ. ಮಾರುಕಟ್ಟೆಗೆ ತಕ್ಕಂತೆ ಪ್ರಗತಿಯತ್ತ, ಉತ್ಪಾದನೆಯತ್ತ ಕಣ್ಣು ಹರಿಸಿ ಯೋಚನೆ- ದೃಷ್ಟಿಕೋನ ಬದಲಿಸಿಕೊಳ್ಳುವ ಚಾಕಚಕ್ಯರು ಹೆಚ್ಚಾಗಿದ್ದಾರೆ. ಭಾರತದಂಥ ಐಟಿ ಫಲವತ್ತತೆ ಭೂಮಿಯ ಮೇಲೆ ಕಾಸಿನ ಬೀಜ ಚೆಲ್ಲಿ, ಹೊನ್ನಿನ ಬೆಳೆ ತೆಗೆಯಲು ನಾವೂ ಉತ್ಸುಕರಾಗಿದ್ದೇವೆ’ ಎನ್ನುತ್ತಾರೆ ಎಲ್‌ಎಲ್‌ಸಿಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಶಹಾನಿ.
ಸರ್ಕಾರದ ಯೋಜನೆ- ಧೋರಣೆಗಳು, ಪ್ರಸ್ತುತ ಬಂಡವಾಳ ಮಾರುಕಟ್ಟೆ, ಜಂಟಿ ವೆಂಚರ್‌ಗಳು, ಇ- ವ್ಯಾಪಾರ ತಂತ್ರ, ದೂರಸಂಪರ್ಕ ನಿಯಂತ್ರಣ ರಚನೆ, ನಿಸ್ತಂತು ಮಾರುಕಟ್ಟೆ, ‘ಇಂಟರ್‌ನೆಟ್ ಈ ಹೊತ್ತು’ ಮುಂತಾದ ಭಾರತಕ್ಕೆ ಸಂಬಂಧಿಸಿದ ಹಾಗೂ ಅದರಿಂದ ಅಮೆರಿಕೆಗೆ ಏನು ಲಭ್ಯ ಎಂಬ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು.
(ಐಎಎನ್‌ಎಸ್)
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications