ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರುತಿ ಉದ್ಯೋಗ್‌ ಭಾಗಶಃ ಮಾರಾಟ

By Staff
|
Google Oneindia Kannada News

Maruti Zenನವದೆಹಲಿ : ಮಾರುತಿ ಉದ್ಯೋಗ್‌ ಸಂಸ್ಥೆಯಲ್ಲಿ ತಾನು ತೊಡಗಿಸಿರುವ ಬಂಡವಾಳದ ಒಂದು ಭಾಗವನ್ನು ತತ್ವಶಃ ಮಾರಾಟ ಮಾಡಲು ಕೇಂದ್ರ ಸರಕಾರ ಶನಿವಾರ ನಿರ್ಧರಿಸಿತು. ಕೇಂದ್ರ ಸಚಿವ ಸಂಪುಟ ಈ ನಿಟ್ಟಿನಲ್ಲಿ ಕೈಗೊಂಡಿರುವ ತೀರ್ಮಾನವು ಮಹತ್ವವಾದ ಒಂದು ‘ನಾಟಕೀಯ ಬೆಳವಣಿಗೆ ’ . ಬಂಡವಾಳ ಮಾರಾಟದ ವಿಧಿವಿಧಾನಗಳನ್ನು ರೂಪಿಸಲು ಸರಕಾರ ಒಂದು ಸಮಿತಿಯನ್ನೂ ರಚಿಸಿದೆ.

ಇಂಡಿಯಾದ ಅತಿದೊಡ್ಡ ಕಾರು ಉತ್ಪಾದಕ ಸಂಸ್ಥೆ ಎನಿಸಿರುವ ಮಾರುತಿ ಕಂಪನಿಯಲ್ಲಿ ಸರಕಾರದ ಪಾಲು ಶೇ 50. ಉಳಿದರ್ಧ ಪಾಲು ಜಪಾನಿನ ಸುಜುಕಿ ಕಂಪನಿಯದು.

ಸರಕಾರದ ಈ ನಿರ್ಧಾರದಿಂದಾಗಿ ಮಾರುತಿ ಕಂಪನಿಯು ಇನ್ನು ಮುಂದೆ ಖಾಸಗಿ ಕ್ಷೇತ್ರದ ಪಾಲಾಗಲಿದೆ. ಸ್ವಾರಸ್ಯದ ಸಂಗತಿ ಎಂದರೆ ಭಾರತ ಸರಕಾರ ಮಾರಾಟ ಮಾಡುವ ಬಹುತೇಕ ಎಲ್ಲ ಶೇರುಗಳನ್ನು ಸುಜುಕಿ ಕಂಪನಿಯೇ ಕೊಂಡುಕೊಳ್ಳುವ ನಿರೀಕ್ಷೆ ಇದೆ. ಆಟೋ- ಉತ್ಪಾದಕ ಪ್ರಪಂಚದ ದಿಗ್ಗಜ ಎನಿಸಿರುವ ಜನರಲ್‌ ಮೋಟಾರ್ಸ್‌ ಕಂಪನಿ, ಮಾರುತಿ ಕಂಪನಿಯನ್ನು ತಾನೇ ಖರೀದಿಸುವುದಾಗಿಯೂ ಈ ಹಿಂದೆ ಹೇಳಿಕೊಂಡಿತ್ತು.

ಸುಜುಕಿ ಕಂಪನಿಯಲ್ಲಿ ಜನರಲ್‌ ಮೋಟಾರ್ಸ್‌ ಅಲ್ಪ ಪ್ರಮಾಣದ ಬಂಡವಾಳವನ್ನು ಹೊಂದಿದೆ ಎನ್ನುವುದು ಬೇರೆ ಮಾತು.

ಭಾರತದ ಕಾರು ಮಾರುಕಟ್ಟೆಯಲ್ಲಿ ನ ತೀವ್ರ ಪೈಪೋಟಿಯಿಂದಾಗಿ ಮಾರುತಿ ಉದ್ಯೋಗ್‌ನ ಮಾರುಕಟ್ಟೆ ಮೌಲ್ಯ ಈ ದಿನಗಳಲ್ಲಿ ಕುಸಿದಿದೆ. ಅದೇನೇ ಇದ್ದರೂ , ಮಾರಾಟ ನಿರ್ಧಾರದಿಂದ ಕೇಂದ್ರ ಸರಕಾರ ಭಾರೀ ಲಾಭ ಮಾಡಿಕೊಳ್ಳುವುದಂತೂ ನಿಜ.

(ಇಂಡಿಯಾ ಇನ್‌ಫೋ ವರದಿ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X