Get Updates
Get notified of breaking news, exclusive insights, and must-see stories!

ರಾಜ್‌ ಬದಲಿಗೆ ನೂರಾರು ಕೋಟಿ ಹಣ, ಮಾರಣಾಯುಧ- ಜಯಲಲಿತಾ

ಚೆನ್ನೈ : ನರಹಂತಕನ ಕಪಿ ಮುಷ್ಟಿಯಿಂದ ರಾಜ್‌ಕುಮಾರ್‌ ಬಿಡುಗಡೆಯ ಬಗೆಗೆ ಸಂತೋಷ ವ್ಯಕ್ತ ಪಡಿಸಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕುಮಾರಿ ಜಯಲಲಿತಾ ಅವರು, ರಾಜ್‌ಕುಮಾರ್‌ ಬಿಡುಗಡೆಗಾಗಿ ಉಭಯ ಸರ್ಕಾರಗಳು ನೂರಾರು ಕೋಟಿ ರುಪಾಯಿ ಹಾಗೂ ಭಾರೀ ಪ್ರಮಾಣದ ಮಾರಕಾಯುಧ- ಸ್ಫೋಟಕಗಳನ್ನು ಕಳೆದ ಮೂರು ತಿಂಗಳಲ್ಲಿ ವೀರಪ್ಪನ್‌ಗೆ ರವಾನಿಸಿವೆ ಎಂದು ಆಪಾದಿಸಿದ್ದಾರೆ.

ಗುರುವಾರ ಚೆನ್ನೈನಲ್ಲಿ ಬಿಡುಗಡೆ ಮಾಡಿರುವ ಹೇಳಿಕೆಯಾಂದರಲ್ಲಿ , ವೀರಪ್ಪನ್‌ ವಿರುದ್ಧ ಕಾರ್ಯಾಚರಣೆ ನಡೆಸುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾದಲ್ಲಿ , ಕೇಂದ್ರ ಸರ್ಕಾರವೇ ನರಹಂತಕನ ವಿರುದ್ಧ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಕಾಡುಗಳ್ಳನ ಅಟ್ಟಹಾಸವನ್ನು ಕೊನೆಗಾಣಿಸಲೇ ಬೇಕು ಎಂದು ಒತ್ತಿ ಹೇಳಿರುವ ಅವರು, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಈ ಬಗ್ಗೆ ಪ್ರಯತ್ನಗಳನ್ನು ಮುಂದುವರಿಸುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ವೀರಪ್ಪನ್‌ನನ್ನು ಜೀವಂತ ಹಿಡಿಯಲು ಅಥವಾ ಕೊಲ್ಲಲು ರಾಜ್ಯವು ಸಮರ್ಥ ಪೊಲೀಸ್‌ ಅಧಿಕಾರಿಗಳ ವಿಶೇಷ ಕಾರ್ಯಪಡೆ ರಚಿಸಬೇಕು, ಈ ನಿಟ್ಟಿನಲ್ಲಿ ಐಜಿಪಿ ವಿಜಯ್‌ಕುಮಾರ್‌ ಅವರ ನೆರವನ್ನು ಪಡೆಯಬಹುದು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ರಾಜ್‌ ಬಿಡುಗಡೆಯ ವಿಷಯವನ್ನು ತಮ್ಮ ರಾಜಕೀಯ ಸಾಧನೆಯನ್ನಾಗಿ ಬಳಸಿಕೊಳ್ಳದಂತೆ ಕರುಣಾನಿಧಿ ಅವರನ್ನು ಎಚ್ಚರಿಸಿರುವ ಜಯಲಲಿತಾ, ಇನ್ನು ಮುಂದಾದರೂ ವೀರಪ್ಪನ್‌ನ ಭಯೋತ್ಪಾದಕ ಚಟುವಟಿಕೆಗಳಿಗೆ ತಡೆ ಒಡ್ಡಲು ತಮ್ಮ ರಾಜಕೀಯ ಎದುರಾಳಿಗೆ ಬುದ್ಧಿವಾದ ಹೇಳಿದ್ದಾರೆ.

(ಯುಎನ್‌ಐ)

ಮುಖಪುಟ / ರಾಜ್‌ ಬಿಡುಗಡೆ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+