‘ಲಿಂಗಾಯತ ಹಿಂದೂ ಧರ್ಮದ ಅಂಗವಲ್ಲ’
ಬೆಂಗಳೂರು : ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದ್ದು, ಅದು ಹಿಂದೂ ಧರ್ಮದ ಅಂಗವಲ್ಲ ಎಂಬ ನಿರ್ಣಯವನ್ನು ಬೆಂಗಳೂರಿನಲ್ಲಿ ಭಾನುವಾರ ನಡೆದ ಲಿಂಗಾಯತ ಧರ್ಮೀಯರ ಸಮಾವೇಶ ಕೈಗೊಂಡಿದೆ.
ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೆಂಬ ಕೂಡಲ ಸಂಗಮದ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಪ್ರತಿಪಾದನೆಗೆ ಬೆಂಬಲ ವ್ಯಕ್ತಪಡಿಸಿರುವ ಲಿಂಗಾಯುತ ಸಮುದಾಯದ ಗಣ್ಯರು, ಮುಂಬರುವ ಜನಗಣತಿ ಸಂದರ್ಭದಲ್ಲಿ ಜಾತಿ ಹಾಗೂ ಧರ್ಮಗಳನ್ನು ಲಿಂಗಾಯತ ಎಂದು ಬರೆಸುವ ನಿರ್ಧಾರ ಕೈಗೊಂಡಿದ್ದಾರೆ.
ವೀರಶೈವ ಧರ್ಮದ ನಂತರ ಬಂದ ಅನೇಕ ಧರ್ಮಗಳು ಸ್ವತಂತ್ರ ಧರ್ಮಗಳೆಂದು ಗುರುತಿಸಿಕೊಂಡರೂ 850 ವರ್ಷ ಇತಿಹಾಸವುಳ್ಳ ಬಸವ ತತ್ವಗಳನ್ನು ಆಚರಿಸುವ ನೆಪದಲ್ಲಿ ಕೆಲವರು ತದ್ವಿರುದ್ಧವಾಗಿ ಕೆಲಸ ಮಾಡಿದರೆಂದು ಮಹಾದೇವಿ ಟೀಕಿಸಿದ್ದಾರೆ.
ಸಂವಿಧಾನಿಕ ಮನ್ನಣೆ : ಹಿಂದೂ ಧರ್ಮದ ಆಸರೆ ಲಿಂಗಾಯತ ಧರ್ಮಕ್ಕೆ ಬೇಕೇಬೇಕು, ಅದು ಸ್ವತಂತ್ರ ಧರ್ಮವಾಗಿ ಬೆಳೆಯಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳೂ ಇರುವುದರಿಂದ ಈ ಹಿನ್ನೆಲೆಯಲ್ಲಿ ಹಿಂದೂ ಧರ್ಮದ ಬಂಧನದಿಂದ ಲಿಂಗಾಯತ ಧರ್ಮ ಬೇರೆಯಾಗುವ ನಿಟ್ಟಿನಲ್ಲಿ ಮಠಾಧೀಶರು ಯೋಚಿಸಬೇಕು.
ಲಿಂಗಾಯತ ಧರ್ಮೀಯರನ್ನು ರಾಷ್ಟ್ರೀಯ ಧಾರ್ಮಿಕ ಅಲ್ಪಸಂಖ್ಯಾತರು ಎಂದು ಗುರುತಿಸಬೇಕು, ಸಿಖ್, ಜೈನ, ಬೌದ್ಧ ಧರ್ಮಗಳಿಗಿರುವಂತೆ ಪ್ರತ್ಯೇಕ ಧರ್ಮದ ಸಂವಿಧಾನಾತ್ಮಕ ಮನ್ನಣೆ ನೀಡಬೇಕು ಎಂದು ಮಾಹಾದೇವಿ ಹೇಳಿದ್ದಾರೆ.
ಸನ್ಮಾನ : ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲಾಪಂಚಾಯತ್ ಅಧ್ಯಕ್ಷ ಎಚ್. ಎಸ್. ಬಸವರಾಜ್, ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಕೊಂಡಾ ಬಸವರಾಜ್, ಕ್ರೀಡಾ ತರಬೇತಿದಾರ ಪಿ. ಎಸ್. ವಿಶ್ವನಾಥ್ ಮಾತೆ ಮಹಾದೇವಿ ಸನ್ಮಾನಿಸಿದರು.
ಮೈಸೂರು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ವಿ. ಎಸ್. ಗುರುಸ್ವಾಮಿ ಅವರು ಮಠಗಳ ನಡುವಿನ ಆಂತರಿಕ ಕಲಹದಿಂದ ಲಿಂಗಾಯತ ಸಮಾಜ ಕೊರಗುತ್ತಿದೆ ಎಂದು ಅಭಿಪ್ರಾಯಪಟ್ಟರು. ಸಮಾವೇಶದಲ್ಲಿ ಅಕ್ಕ ಮಹಾದೇವಿ ಪೀಠದ ಮಾತೆ ಗಂಗಾದೇವಿ ಧ್ವಜಾರೋಹಣ ಮಾಡಿದರು. ಚಟ್ಣಹಳ್ಳಿಯ ಸಿದ್ದೇಶ್ವರಾನಂದ ಸ್ವಾಮಿಗಳು, ಗೋಕಾಕ್ ಬಸವಕುಮಾರಸ್ವಾಮಿಗಳು. ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಬಸವ ಮಂಟಪದ ಸದ್ಗುರು ಅಲ್ಲಮಪ್ರಭುಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಮಿತಿ ಅಧ್ಯಕ್ಷ ಎನ್. ಪುಟ್ಟರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಧುವರರ ಅನ್ವೇಷಣೆ ನಡೆಯಿತು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications