ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಕ- ಪುರಂದರರು ಭಕ್ತಿ, ಜ್ಞಾನ ವೈರಾಗ್ಯದ ನಿಧಿಗಳು

By Staff
|
Google Oneindia Kannada News

ಕಾಸರಗೋಡು : ಕನ್ನಡ ಜನಮನದ ಸಾಂಸ್ಕೃತಿಕ ಬಾನಿನಲಿ ಸ್ವಚ್ಚಂದವಾಗಿ ವಿಹರಿಸಿದ ಕನಕ - ಪುರಂದರ ದಾಸರು ಜ್ಞಾನ, ಭಕ್ತಿ ಹಾಗೂ ವೈರಾಗ್ಯದ ತವನಿಧಿಗಳು ಎಂದು ವಿದ್ವಾಂಸ ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಪ್ರಾಯಪಟ್ಟಿದ್ದಾರೆ.

ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಅಧ್ಯಯನ ವಿಭಾಗದ ಪ್ರೊ. ಚಾಪಾಡಿ ವಾಸುದೇವ ದತ್ತಿನಿಧಿಯನ್ನು ಉದ್ಘಾಟಿಸಿ ಕನಕ ಪುರಂದರ ಸ್ಮರಣೆ ಹಾಗೂ ದಾಸ ಸಾಹಿತ್ಯ ಎಂಬ ವಿಷಯದ ಬಗ್ಗೆ ತಮ್ಮ ವಿಚಾರ ಧಾರೆ ಮಂಡಿಸಿದ ಅವರು, ಕೀರ್ತನಕಾರರಿಗೆ ಹೊಸ ದಾರಿ ತೋರಿದ ಪುರಂದರರು ಶಬ್ದ, ಅರ್ಥ, ಸಾಹಿತ್ಯ, ಸಂಗೀತಗಳ ಅರಿವು ಮೂಡಿಸಿದರು ಎಂದು ಹೇಳಿದರು.

ಗ್ರಾಮ್ಯ ಘನತೆ ಎತ್ತಿ ಹಿಡಿದು ಭಾವ ಸೂಕ್ಷ್ಮತೆಗಳಲ್ಲಿ ಸಾಹಿತ್ಯ ರಚಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ, ಇವರು ತತ್ವ ವೈಶಿಷ್ಟ್ಯಗಳಿಂದ ಹರಿದಾಸ ಸಾಹಿತ್ಯದಲ್ಲಿ ಶಕಪುರುಷರಾಗಿ ನಿಂತಿದ್ದಾರೆ ಎಂದೂ ಬಣ್ಣಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರಾಜಾಮಣಿ ವಹಿಸಿದ್ದರು. ಕನ್ನಡ ವಿಭಾಗದ ಡಾ. ಯು. ನಾರಾಯಣಭಟ್‌ ಸ್ವಾಗತಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X