Get Updates
Get notified of breaking news, exclusive insights, and must-see stories!

ಬೆಂಗಳೂರಿನ ಮತ್ತೊಂದು ಸಾಧನೆ!

ಬೆಂಗಳೂರು : ಅತಿ ಹೆಚ್ಚು ಹಳ್ಳ ಕೊಳ್ಳಗಳಿರುವ ರಸ್ತೆಗಳ ನಗರ ಯಾವುದೆಂದು ಯಾರಾದರೂ ಕೇಳಿದರೆ, ಬೆಂಗಳೂರು ಎಂದು ನೀವು ಧೈರ್ಯವಾಗಿ ಎದೆತಟ್ಟಿ ಹೇಳಬಹುದು. ಬೆಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಆಯುಕ್ತರಾದ ಜೈರಾಜ್‌ ಅವರೇ ನಗರದ ರಸ್ತೆಗಳ ಹಳ್ಳ-ಕೊಳ್ಳಗಳನ್ನು ಲೆಕ್ಕ ಹಾಕಿ ಒಟ್ಟು 26 ಸಾವಿರದ 284 ಗುಂಡಿಗಳಿವೆ ಎಂದು ಬಹಿರಂಗವಾಗಿ ಹೇಳಿದ್ದಾಗಿದೆ.

ಈಗ ಬೆಂಗಳೂರು ಅತಿ ಹೆಚ್ಚು ಕೊಳೆಗೇರಿಗಳನ್ನು ಒಳಗೊಂಡ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿ ಅಗ್ರಸ್ಥಾನ ಪಡೆದಿದೆ. ಸಿಲಿಕಾನ್‌ ನಗರಿ, ಹೈಟೆಕ್‌ ಸಿಟಿ, ಉದ್ಯಾನ ನಗರಿ, ಮಾಲಿನ್ಯ ನಗರಿ ಎಂದೆಲ್ಲಾ ಬಿರುದಾಂಕಿತವಾದ ಬೆಂಗಳೂರೀಗ ಕೊಳೆಗೇರಿಗಳ ನಗರಿಯೂ ಆಗಿದೆ ಎಂಬ ವಿಷಾದದ ಸಂಗತಿ ನಿಮಗೂ ತಿಳಿದಿರಲಿ.

ಕರ್ನಾಟಕದ 27 ಜಿಲ್ಲೆಗಳಲ್ಲಿ ಒಟ್ಟು 2322 ಕೊಳಚೆ ಪ್ರದೇಶಗಳಿವೆ. (ಸರ್ಕಾರದ ಲೆಕ್ಕಕ್ಕೆ ಬಾರದ ಅನಧಿಕೃತ ಕೊಳಚೆ ಪ್ರದೇಶಗಳನ್ನು ಬಿಟ್ಟು) ಈ 2322ರಲ್ಲಿ 362 ಕೊಳಚೆ ಪ್ರದೇಶಗಳು ಬೆಂಗಳೂರಿನಲ್ಲೇ ಇವೆ. ಸರಕಾರ ಈ 362 ಕೊಳಚೆ ಪ್ರದೇಶಗಳಲ್ಲಿ 182ನ್ನು ಕೊಳೆಗೇರಿ ಎಂದು ಘೋಷಿಸಿದೆ. (ಕೊಳಚೆ ಪ್ರದೇಶ - ಕೊಳೆಗೇರಿಗೆ ಸರಕಾರ ಬೇರೆ ಬೇರೆ ವಾಖ್ಯೆ ನೀಡುತ್ತದೆ) ಈ ವರೆಗೆ 553 ಕೊಳಚೆ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ (ಬಹುಶಃ ಸ್ವಾತಂತ್ರ್ಯ ಬಂದ ದಿನದಿಂದ) ಈ ವಿಷಯವನ್ನು ವಸತಿ ಸಚಿವ ಖಮರುಲ್ಲಾ ಇಸ್ಲಾಂ ಅವರೇ ಸರಿತಾ ಕುಸುಮಾಕರ ದೇಸಾಯಿ ಅವರಿಗೆ ವಿಧಾನ ಮಂಡಲದಲ್ಲಿ ನೀಡಿರುವ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಂದ ಮೇಲೆ ಯಾರಾದರೂ ಬೆಂಗಳೂರನ್ನು ಕೊಳೆಗೇರಿಗಳ ನಗರ ಎಂದರೆ ನಾವು ಸುಮ್ಮನೆ ಸಿಟ್ಟಾಗುವುದರಲ್ಲಿ ಅರ್ಥವಿಲ್ಲ ಅಲ್ಲವೇ?

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+